ಉಡುಪಿ : ಬ್ರಹ್ಮಗಿರಿ ಸರ್ಕಲ್ ಹಿಂದೂ ರಾಷ್ಟ್ರ ಬ್ಯಾನರ್ ವಿಚಾರಕ್ಕೆ ಸಂಬಂಧಿಸಿದಂತೆ, ಉಡುಪಿ ಜಿಲ್ಲಾ ಎಸ್ ಡಿ ಪಿ ಐ ಸುದ್ದಿಗೋಷ್ಠಿ ನಡೆಸಿದೆ. ವಿವಾದ, ಸಮಸ್ಯೆ, ದ್ವೇಷ ಇಲ್ಲದ ರಾಜ್ಯವಾಗಿತ್ತು. ಆದರೆ, ದುರದೃಷ್ಟವಶಾತ್ ಯುಪಿ, ಎಂಪಿ, ರಾಜಸ್ತಾನದ ರೀತಿಯ ಘಟನೆಗಳು ಇಲ್ಲಿ ಆರಂಭವಾಗಿದೆ ಎಂದು ಎಸ್ ಡಿ ಪಿಐ ಉಪಾಧ್ಯಕ್ಷ ಶಾಹಿದ್ ಅಲಿ ಹೇಳಿದ್ದಾರೆ.
ಕರ್ನಾಟಕದಲ್ಲೂ ಉತ್ತರ ಭಾರತ ಮಾದರಿಯ ಘಟನೆ ಆರಂಭವಾಗಿದೆ. ಬುಲ್ಡೋಜರ್, ಹಿಜಾಬ್ ದ್ವೇಷ ಸೃಷ್ಟಿ ಉಡುಪಿಯಲ್ಲೇ ಆರಂಭವಾಯ್ತು. ಬ್ರಹ್ಮಗಿರಿಯಲ್ಲಿ ಜೈ ಹಿಂದೂ ರಾಷ್ಟ್ರದ ಬ್ಯಾನರ್ ಹಾಕಿದ್ದಾರೆ.
ಜನಪ್ರತಿನಿಧಿಗಳು ಸಂವಿಧಾನದಂತೆ ನಡೆಯುತ್ತೇವೆ ಹೇಳುತ್ತಾರೆ. ಹಿಂದೂ ರಾಷ್ಟ್ರದ ಆರ್ ಎಸ್ ಎಸ್ ಪರಿಕಲ್ಪನೆಯಾಗಿದೆ. ಹಿಂದೂ ಮತ ಪಡೆಯಲು, ಬೇರೆಯವರಿಂದ ಬೇರ್ಪಡಿಸಲು ಈ ಷಡ್ಯಂತ್ರವಾಗಿದೆ.
ಹಿಂದೂ ರಾಷ್ಟ್ರ ಕೇವಲ ಹಿಂದೂ ಮತ ಪಡೆಯುವ ಪರಿಕಲ್ಪನೆಯಾಗಿದೆ. ಎಂಟು ವರ್ಷದಿಂದ ಈ ಸರ್ಕಾರದ ಆಡಳಿತವನ್ನು ಹಿಂದೂಗಳು ನೋಡಿದ್ದಾರೆ.
ಉದ್ಯೋಗ ಇಲ್ಲದೆ ಹಿಂದೂ ಯುವಕರು ಅತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಹಿಂದೂಗಳು ಕಷ್ಟದಲ್ಲಿದ್ದಾರೆ, ಹಾಗಾದ್ರೆ ಇದು ಯಾರ ರಾಷ್ಟ್ರ?
ಇದು ಮನುಸ್ನೃತಿ ರಾಷ್ಟ್ರ…ಬ್ರಾಹ್ಮಣ ರು ತಮ್ಮ ಕಪಿಮುಷ್ಟಿಯಲ್ಲಿ ಭಾರತ ಇಡಲು ಯತ್ನಿಸುತ್ತಿದ್ದಾರೆ.
ಶಾಂತಿಭಂಗ ಮಾಡುವ, ಜನರನ್ನು ಉದ್ರೇಕಿಸಲು ಜನರ ಮತ ಗಳಿಸಲು ಈ ಷಡ್ಯಂತ್ರವಾಗಿದೆ. ಮುಸಲ್ಮಾನರು ತಲೆ ಕೆಡಿಸಿಕೊಳ್ಳಬೇಡಿ, ಪೊಲೀಸ್ ಇಲಾಖೆ ಮೇಲೆ ವಿಶ್ವಾಸವಿದೆ. ವಿವಾದಿತ ಬ್ಯಾನರ್ ತೆರವು ಮಾಡಿ. ಪೊಲೀಸರು ಜನರ ಭರವಸೆ ಹುಸಿ ಮಾಡಬೇಡಿ. ಉಡುಪಿಯ ಉಸಿರುಗಟ್ಟುವ ವಾತಾವರಣ ತಿಳಿಗೊಳಿಸಿ ಎಂದರು.
ಕೆಲವೇ ದಿನಗಳಲ್ಲಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡ್ತೇವೆ ಎಂದರು. ಹಿಂದೂ ರಾಷ್ಟ್ರ ಎಂದು ಹಾಕಿರುವ ಬ್ಯಾನರ್ ತೆರವಿಗೆ ಎಸ್ ಡಿಪಿಐ ಒತ್ತಾಯ ಮಾಡಿದೆ.
ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ ಮಂಗಳೂರು: ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಗಳಮುಖಿಯರು ಅಕ್ರಮ…
ಉಡುಪಿ ನಗರಸಭೆಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ ಉಡುಪಿ: ಉಡುಪಿ ನಗರಸಭೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತಕ್ಷಣ…
ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ, 1.93 ಲಕ್ಷ ರೂ. ಮೌಲ್ಯದ ಸೊತ್ತು ವಶ ಬಂಟ್ವಾಳ: ಮಾದಕ…
ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ ಮಂಡ್ಯ: ಅನಾರೋಗ್ಯದಿಂದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ (57)…
ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ ಕಾಪು: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಶ್ರೀ…
ನೊಯ್ಡಾ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ನವದೆಹಲಿ: ಉತ್ತರ ಪ್ರದೇಶದ ಜೆವಾರ್‌ನಲ್ಲಿರುವ ನೋಯ್ಡಾ…