ಉಡುಪಿ: ಸರಕಾರಿ ಮಹಿಳಾ ಕಾಲೇಜಿನಲ್ಲಿ ಹಿಜಾಬ್ ವಿವಾದ ನಡೆಯುತ್ತಿದ್ದು, ಈ ಗೊಂದಲವನ್ನು ನಿಲ್ಲಿಸುವುದಾದರೆ ಹಿಂದು ಸಂಘಟನೆಗೆ ಐದು ನಿಮಿಷದ ಕೆಲಸ. ಆದರೆ ಇದು ವಿದ್ಯಾರ್ಥಿನಿಯರ ಭವಿಷ್ಯದ ಪ್ರಶ್ನೆ ಸಿಎಫ್ಐ, ಪಿಎಫ್ಐ ಸಂಘಟನೆಯ ಕುಮ್ಮಕ್ಕಿನಿಂದ ಈ ವಿವಾದ ನಡೆಯುತ್ತಿದೆ” ಎಂದು ಸರಕಾರಿ ಬಾಲಕಿಯರ ಕಾಲೇಜು ಆಡಳಿತ ಅಭಿವೃದ್ಧಿ ಮಂಡಳಿಯ ಉಪಾಧ್ಯಕ್ಷ ಯಶ್ಪಾಲ್ ಸುವರ್ಣ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, “ಆರು ಜನ ಮುಸ್ಲಿಂ ವಿದ್ಯಾರ್ಥಿನಿಯರಿಂದ 900 ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಡುವ ಕೆಲಸ ಮಾಡುತ್ತಿದ್ದಾರೆ. ಸಂಘಟನೆಯ ಮತ್ತು ಆಡಳಿತ ಮಂಡಳಿಯ ಸದಸ್ಯನಾಗಿ ಉಳಿದ ವಿದ್ಯಾರ್ಥಿಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಮುಂದಿನ ನಿರ್ಧಾರ ತೆಗೆದು ಕೊಳ್ಳಬೇಕಾಗಿದೆ. ಅವರು ಸವಾಲಿನಿಂದ ಈ ಗೊಂದಲವನ್ನು ಉಂಟು ಮಾಡ್ತ ಇದ್ದಾರೆ ಎಂದರೆ ಅದಕ್ಕೆ ಹಿಂದು ಸಂಘಟನೆಯ ಮುಖಾಂತರ ಸರಿಯಾದ ಉತ್ತರ ಕೊಡಲು ನಮಗೆ ಗೊತ್ತಿದೆ” ಎಂದರು.
ಇದನ್ನೂ ಓದಿ :
ಇನ್ನು “ಆಡಳಿತ ಮಂಡಳಿಯ ಬಗ್ಗೆ ಮಾತ್ರ ಮಾತಾಡಬೇಕು. ಅದನ್ನು ಹೊರತಾಗಿ ವಿಷಯ ಮಾತಾಡಿದರೆ ಸಂಘಟನೆಯ ಹಿಂದು ಕಾರ್ಯಕರ್ತನಾಗಿ ನಾನು ಮಾತನಾಡಬೇಕಾಗುತ್ತದೆ” ಎಂದು ಹೇಳಿದ್ದಾರೆ.
“ಶಿಕ್ಷಣದ ವಿಚಾರದಲ್ಲಿ ಏನಾದರೂ ಕೊರತೆ ಇದ್ದಿದ್ದರೆ ಸರಿಪಡಿಸಬಹುದು. ಆದರೆ ಉದ್ದೇಶ ಪೂರ್ವಕವಾಗಿ ಮಾಡುತ್ತಿರುವ ಹಿಜಾಬ್ ವಿಚಾರದಲ್ಲಿ ಯಾವುದೇ ಹೊಂದಾಣಿಕೆ ಇಲ್ಲ. ಹೆತ್ತ ತಂದೆ ತಾಯಿಗೆ ಗೌರವ ಕೊಡುವಂತೆ ಗುರುಗಳಿಗೂ ಗೌರವ ಕೊಡಬೇಕು. ಅದು ಬಿಟ್ಟು ಅನ್ಯ ಪುರುಷರು ಎನ್ನುವ ಭಾವ ಸರಿಯಲ್ಲ” ಎಂದಿದ್ದಾರೆ.
ಇನ್ನು ಸಾಕಷ್ಟು ಬಾರಿ ಶಾಸಕರು ಮತ್ತು ಶಾಲಾ ಕಾಲೇಜು ಮಂಡಳಿ ಪೋಷಕರಲ್ಲಿ ಮನವಿ ಮಾಡಿದ್ದಾರೆ. ಆನ್ ಲೈನ್ ಶಿಕ್ಷಣಕ್ಕೂ ಅವಕಾಶ ನೀಡಲಾಗಿದೆ ಆದರೂ ವಿದ್ಯಾರ್ಥಿಗಳು ತಮ್ಮ ಹಠದಿಂದ ಸವಾಲು ಹಾಕುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ :
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…