ಉಡುಪಿ : ದೈವಸ್ಥಾನದಲ್ಲಿ ಇರಬೇಕಾದ ಪವಿತ್ರ ಕಡ್ಸಲೆಯನ್ನು ತನ್ನ ಪಕ್ಷದ ನಾಯಕನ ಮನವೊಲಿಸಲು ಬಳಸಿರುವುದು ಅಕ್ಷಮ್ಯ ಅಪರಾಧ, ಹಿಂದೂ ಧರ್ಮ ಹಿಂದೂ ಸಂಸ್ಕೃತಿಗೆ ನಿರಂತರವಾಗಿ ಅಪಮಾನ ಮಾಡುವುದು ಕಾಂಗ್ರೆಸ್ಸಿನ ಚಾಳಿಯಾಗಿ ಬಿಟ್ಟಿದೆ. ಮಂಜುನಾಥ ಪೂಜಾರಿಯವರು ಈ ರೀತಿಯ ಮೂರ್ಖತನದ ವರ್ತನೆ ಪ್ರದರ್ಶಿಸುವುದು ಇದೇ ಮೊದಲಲ್ಲ, ಆದರೆ ಈ ಬಾರಿಯ ಅವರ ನಡೆ ಮೂರ್ಖತನದ ಪರಮಾವಧಿ. ಉಡುಗೊರೆ ನೀಡಲು ಬೇಕಾದಷ್ಟು ಆಯ್ಕೆಗಳಿದ್ದರೂ, ಕಡ್ಸಲೆಯನ್ನೆ ಆರಿಸಿ ಕೊಂಡು, ಉದ್ದೇಶ ಪೂರ್ವಕವಾಗಿ ತುಳುನಾಡ ಸಂಸ್ಕೃತಿಯನ್ನು ಅಪಮಾನಿಸಿದ್ದಾರೆಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ವಿಖ್ಯಾತ್ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಂಜುನಾಥ್ ಪೂಜಾರಿಯವರು ತುಳುನಾಡಿನವರಾಗಿದ್ದು, ಅವರಿಗೆ ಕಡ್ಸಲೆಯ ಮಹತ್ವ ತಿಳಿದಿಲ್ಲದಿರುವುದು ದುರಾದೃಷ್ಟ! ದೈವಾರಾಧನೆ ತುಳುನಾಡಿನ ಹೆಮ್ಮೆಯ ಸಂಸ್ಕೃತಿ, ತಮ್ಮ ಈ ನೀಚ ನಡೆ ಇಡೀ ತುಳುನಾಡಿನ ಜನರ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿದೆ. ತಕ್ಷಣ ತಾವು ಬಹಿರಂಗವಾಗಿ ಕ್ಷಮೆಯಾಚಿಸಬೇಕು, ಇಲ್ಲವಾದಲ್ಲಿ ತಮ್ಮ ವಿರುದ್ಧ ತುಳುನಾಡಿನ ಜನತೆ ಸಿಡಿದೆಳಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾಗಿರುವ ವಿಖ್ಯಾತ ಶೆಟ್ಟಿಯವರು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿಯವರ ನಡೆಯ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…