Featured

ಮಲಬಾರ್ ಗೋಲ್ಡ್ & ಡೈಮಂಡ್ಸ್  ನಿಂದ  5೦೦೦ ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ -Vishwanews24

ಮಲಬಾರ್ ಗೋಲ್ಡ್ & ಡೈಮಂಡ್ಸ್  ನಿಂದ  5೦೦೦ ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ -Vishwanews24

– ನೇಮಕಾತಿ ಪ್ರಕ್ರಿಯೆ ಆರಂಭಿಸಿರುವ ದೇಶದ ಅತಿ ದೊಡ್ಡ ಚಿನ್ನ ಮತ್ತು ವಜ್ರದ ರೀಟೇಲ್ ಆಭರಣ ಸಂಸ್ಥೆ

ಬೆಂಗಳೂರು, : ದೇಶದ ಅತಿ ದೊಡ್ಡ ಚಿನ್ನ ಮತ್ತು ವಜ್ರದ ರೀಟೇಲ್ ಜಾಲಗಳಲ್ಲಿ ಒಂದಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ೧೦ ದೇಶಗಳಲ್ಲಿ ೨೬೦ ಕ್ಕೂ ಹೆಚ್ಚು ಸ್ಟೋರ್‌ಗಳನ್ನು ಹೊಂದಿದ್ದು, ೫೦೦೦ ಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಿದೆ. ದೇಶಾದ್ಯಂತ ಇರುವ ರೀಟೇಲ್ ಕಾರ್ಯಾಚರಣೆಗಳು ಮತ್ತು ಬ್ರಾಂಡ್ ಕೇಂದ್ರ ಕಚೇರಿಗಳು ಹಾಗೂ ಪ್ರಾದೇಶಿಕ ಕಚೇರಿಗಳಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಿದೆ. ಪ್ರಸಕ್ತ ಸಾಲಿನಲ್ಲಿ ದೇಶಾದ್ಯಂತ ತನ್ನ ರೀಟೇಲ್ ಅಸ್ತಿತ್ವವನ್ನು ಮತ್ತಷ್ಟು ಗಟ್ಟಿಪಡಿಸಿಕೊಳ್ಳಲು ಈ ಹೊಸ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಿದೆ.

ಕೋವಿಡ್-೧೯ ಸಾಂಕ್ರಾಮಿಕದ ಅವಧಿ ಮತ್ತು ನಂತರದ ಆರ್ಥಿಕ ಹಿನ್ನಡೆಯಿಂದಾಗಿ ನೇಮಕಾತಿ ಮೇಲೆ ಪರಿಣಾಮ ಬೀರಿತ್ತು. ಆದರೆ, ಇದೀಗ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ದೇಶಾದ್ಯಂತ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗದ ಅವಕಾಶಗಳನ್ನು ಕಲ್ಪಿಸಿಕೊಡುತ್ತಿದೆ.

ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಅನೇಕ ರೀಟೇಲ್ ಸ್ವರೂಪಗಳನ್ನು ಬಳಸಿಕೊಂಡು ಜಾಗತಿಕ ಗ್ರಾಹಕರನ್ನು ಆಕರ್ಷಿಸುತ್ತಿದೆ. ಹೈಸ್ಟಿçÃಟ್‌ಗಳು, ಹೆಸರಾಂತ ಮಾಲ್‌ಗಳು, ಡಿಪಾರ್ಟ್ಮೆಂಟ್ ಸ್ಟೋರ್‌ಗಳು ಮತ್ತು ಟ್ರಾವೆಲ್ ರೀಟೇಲ್ ಸೇರಿದಂತೆ ೫೦+ ವಿವಿಧ ಭಾಷೆಗಳಲ್ಲಿ ಪರಿಣತಿಯನ್ನು ಹೊಂದಿರುವ ೧೪ ರಾಷ್ಟ್ರೀಯತೆ ಒಳಗೊಂಡಿರುವ ತಂಡವು ಬೆಂಬಲಿಸುತ್ತದೆ.

ಭಾರತದಲ್ಲಿ ರೀಟೇಲ್ ಜ್ಯುವೆಲ್ಲರಿ ಸೇಲ್ಸ್, ಸ್ಟೋರ್ ಆಪರೇಷನ್ಸ್ ಮತ್ತು ಅಕೌಂಟೆoಟ್‌ಗಳ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ವಿಶೇಷವೆಂದರೆ ಈ ಒಟ್ಟು ನೇಮಕಾತಿ ಪೈಕಿ ಅರ್ಧದಷ್ಟು ಹುದ್ದೆಗಳಿಗೆ ಮಹಿಳೆಯರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಇದಲ್ಲದೇ, ಬಿಟೆಕ್/ಎಂಬಿಎ ಪಡೆದ ಅಭ್ಯರ್ಥಿಗಳಿಗೆ ಆಭರಣ ರೀಟೇಲ್ ಮಾರಾಟ ಮತ್ತು ಕಾರ್ಯಾಚರಣೆಗಳ ಬಗ್ಗೆ ಸೂಕ್ತ ಇಂರ‍್ನ್ಶಿಪ್ ತರಬೇತಿಯನ್ನು ನೀಡಲಾಗುತ್ತದೆ. ಈ ಹುದ್ದೆಗಳ ಜತೆಗೆ ಡಿಸೈನ್ & ಡೆವಲಪ್‌ಮೆಂಟ್, ಡಿಜಿಟಲ್ ಮಾರ್ಕೆಟಿಂಗ್, ಜ್ಯುವೆಲ್ಲರಿ ಮ್ಯಾನ್ಯುಫಾಕ್ಚರಿಂಗ್ (ಆರ್ಟಿಸಾನ್ಸ್), ಪೂರೈಕೆ ಜಾಲ ನಿರ್ವಹಣೆ, ಮರ್ಚಂಡೈಸಿoಗ್, ಪ್ರಾಜೆಕ್ಟ್ ಎಕ್ಸಿಕ್ಯೂಷನ್, ಫೈನಾನ್ಸ್ & ಅಕೌಂಟ್ಸ್, ಬ್ಯುಸಿನೆಸ್ ಅನಾಲಿಟಿಕ್ಸ್ ಮತ್ತು ಐಟಿ ಸಂಬoಧಿತ ಹುದ್ದೆಗಳನ್ನೂ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಇವುಗಳಲ್ಲಿ ಬಹುತೇಕ ಹುದ್ದೆಗಳನ್ನು ಕೋಝಿಕೋಡ್‌ನಲ್ಲಿರುವ ಜಾಗತಿಕ ಕೇಂದ್ರ ಕಚೇರಿ, ಬೆಂಗಳೂರು,    ಹೈದ್ರಾಬಾದ್, ಮುಂಬೈ ಮತ್ತು ಕೊಲ್ಕತ್ತಾದಲ್ಲಿರುವ ಪ್ರಾದೇಶಿಕ ಕಚೇರಿಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ.

ಈ ನೇಮಕಾತಿ ಬಗ್ಗೆ ಮಾತನಾಡಿದ ಮಲಬಾರ್ ಗ್ರೂಪ್‌ನ ಅಧ್ಯಕ್ಷ ಎಂ.ಪಿ.ಅಹ್ಮದ್ ಅವರು, “ಈ ನೇಮಕಾತಿ ಅಭಿಯಾನವು ಶೋರೂಂಗಳ ಸಂಖ್ಯೆ ಮತ್ತು ವಹಿವಾಟು ಎರಡರಲ್ಲೂ ವಿಶ್ವದ ಪ್ರಮುಖ ಜವಾಬ್ದಾರಿಯುತವಾದ ಆಭರಣ ರೀಟೇಲ್ ಬ್ರಾö್ಯಂಡ್ ಆಗುವ ನಮ್ಮ ದೃಷ್ಟಿಗೆ ಅನುಗುಣವಾಗಿದೆ. ಜವಾಬ್ದಾರಿಯುತವ ವ್ಯವಹಾರವಾಗಿ ನಮ್ಮ

ಸಮಾಜಗಳಿಗೆ ನಮ್ಮ ಬಾಧ್ಯತೆಯ ಬಗ್ಗೆ ನಾವು ತುಂಬಾ ಜಾಗರೂಕರಾಗಿರುತ್ತೇವೆ ಮತ್ತು ಇದು ಹೆಚ್ಚುವರಿಯಾಗಿ ೫೦೦೦ ಉದ್ಯೋಗಗಳನ್ನು ಸೃಜಿಸಲು ಪ್ರೇರೇಪಿಸಿದೆ. ನೌಕರರು ನಮ್ಮ ಯಶಸ್ಸಿನ ಮೂಲಾಧಾರವಾಗಿದ್ದಾರೆ. ಸರಿಯಾದ ಅರ್ಹವಾದ ಪ್ರತಿಭೆಗಳನ್ನು ನೇಮಿಸಿಕೊಳ್ಳುವುದು ಮತ್ತು ಅವರಿಗೆ ಕಲಿಕೆ ಹಾಗೂ ಅಭಿವೃದ್ಧಿ ಅವಕಾಶಗಳನ್ನು ಒದಗಿಸುವುದು ನಮ್ಮ ಆದ್ಯತೆಯಾಗಿದೆ. ನಮ್ಮ ಬೆಳವಣಿಗೆಯ ಯೋಜನೆ ಬಗ್ಗೆ ನಾವು ತುಂಬಾ ಉತ್ಸುಕರಾಗಿದ್ದೇವೆ ಮತ್ತು ದೇಶಾದ್ಯಂತದ ಪ್ರತಿಭಾವಂತ ಹಾಗೂ ನುರಿತ ವ್ಯಕ್ತಿಗಳನ್ನು ನಮ್ಮ ಮಲಬಾರ್ ಕುಟುಂಬದ ಭಾಗವಾಗಲು ಆಹ್ವಾನಿಸುತ್ತಿದ್ದೇವೆ ಎಂದು ತಿಳಿಸಿದರು.

ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ನ ಬೆಳವಣಿಗೆ ನಂಬಿಕೆ, ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆಯ ಮೌಲ್ಯಗಳಲ್ಲಿ ಬೇರೂರಿದೆ. ಇದು ಜಾಗತಿಕ ಆಭರಣ ರೀಟೇಲ್ ಕ್ಷೇತ್ರದಲ್ಲಿ ಬ್ರಾಂಡ್ ಅನ್ನು ಮುಂಚೂಣಿಗೆ ತಂದು ನಿಲ್ಲಿಸಿದೆ. ಇದರ ಅನನ್ಯ ನಿರ್ವಹಣಾ ಪದ್ಧತಿಗಳು ಮತ್ತು ಅದು ರಚಿಸುವ ಪರಿಸರವು ಅನೇಕ ಉದ್ಯೋಗಿಗಳನ್ನು ಸಂಸ್ಥೆಯಲ್ಲಿ ಹೂಡಿಕೆದಾರರನ್ನಾಗಿ ಮಾಡಲು ಅನುವು ಮಾಡಿಕೊಟ್ಟಿದೆ. ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ಸುರಕ್ಷತೆಗೆ, ಒಳಗೊಳ್ಳುವಿಕೆ ಮತ್ತು ನೌಕರ ಸ್ನೇಹಿ ಪರಿಸರಕ್ಕೆ ಹೆಸರುವಾಸಿಯಾಗಿದೆ. ಪ್ರತಿಭಾನ್ವಿತ ಕಾರ್ಯಪಡೆಯೊಂದನ್ನು ವೃತ್ತಿಪರ ವ್ಯವಸ್ಥಾಪಕರ ಕೇಡರ್ ಆಗಿ ಪರಿವರ್ತಿಸುವುದು ಬ್ರಾಂಡ್ ನ ಸಹಕಾರಿ ಬೆಳವಣೀಗೆ ಮತ್ತು ಎಲ್ಲರ ಅಭಿವೃದ್ಧಿಯತ್ತ ಗಮನಹರಿಸಲು ಸಾಕ್ಷಿಯಾಗಿದೆ.

ಸಮಾನ ಅವಕಾಶದ ಉದ್ಯೋಗ ಒದಗಿಸುವವರಾಗಿರುವ ಅದರ ಭಾಗವಾಗಿ, ಕಂಪನಿಯು ಮಹಿಳಾ ಪ್ರಾತಿನಿಧ್ಯವನ್ನು ಹೆಚ್ಚಿಸಲು ಹಾಗೂ ರೀಟೇಲ್, ಆತಿಥ್ಯದ ಹಿನ್ನೆಲೆಗಳಿಂದ ಅರ್ಹ ಮಹಿಳಾ ಅಭ್ಯರ್ಥಿಗಳಿಗೆ ಮಾರಾಟ, ಅತಿಥಿ ಸಂಬoಧಗಳು, ಕಾರ್ಯಾಚರಣೆಗಳು ಸೇರಿದಂತೆ ಇನ್ನಿತರೆ ಹುದ್ದೆಗಳನ್ನು ಪಡೆಯಲು ಅವಕಾಶಗಳನ್ನು ಕಲ್ಪಿಸಲು ವಿಶೇಷ ಆದ್ಯತೆ ನೀಡುತ್ತಿದೆ. ತರಬೇತಿ ಮತ್ತು ಅಭಿವೃದ್ಧಿಯನ್ನು ಹೆಚ್ಚಿಸುವುದು ಮತ್ತು ವೃತ್ತಿಜೀವನದ ಪ್ರಗತಿ ಪ್ರಕ್ರಿಯೆಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಯೋಜನೆಗಳು ನಡೆಯುತ್ತಿವೆ. ಇದು ಮಾರಾಟದ ಕಾರ್ಯನಿರ್ವಾಹಕರನ್ನು ವ್ಯಾಖ್ಯಾನಿಸಲಾದ ಸಮಯದ ಚೌಕಟ್ಟುಗಳಲ್ಲಿ ಪ್ರಾದೇಶಿಕ ಮುಖ್ಯಸ್ಥರಾಗಿ ಬೆಳೆಯಲು ಅನುವು ಮಾಡಿಕೊಡುತ್ತದೆ.

ಆಸಕ್ತ ಅಭ್ಯರ್ಥಿಗಳು ಕಂಪನಿಯ ಆನ್‌ಲೈನ್ ಜಾಬ್ ಪೋರ್ಟಲ್ ಆಗಿರುವ www.malabarjobs.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ, ಜವಾಬ್ದಾರಿಗಳು, ಅಗತ್ಯವಿರುವ ಅನುಭವ ಮತ್ತು ಇನ್ನಿತರೆ ಮಾಹಿತಿಗಳನ್ನು ಅಭ್ಯರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ.

ಭಾರತದಲ್ಲಿ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ ದೆಹಲಿ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಒಡಿಶಾ, ರಾಜಸ್ಥಾನ, ಜಾರ್ಖಂಡ್, ಚತ್ತೀಸ್‌ಘಡ ರಾಜ್ಯಗಳಲ್ಲಿ ಕಂಪನಿ ವಿಸ್ತರಣೆ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಬ್ರಾಂಡ್ ಈಗಾಗಲೇ ಚೆನ್ನೈ, ಲಕ್ನೋ, ಹೈದ್ರಾಬಾದ್, ಮುಂಬೈ, ಪುಣೆ ಮತ್ತು ಬೆಂಗಳೂರಿನoತಹ ದೊಡ್ಡ ದೊಡ್ಡ ನಗರಗಳ ಪ್ರಮುಖ ಮಾರುಕಟ್ಟೆಗಳಲ್ಲಿ ಸ್ಪರ್ಧಾತ್ಮಕ ಬೆಲೆಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ.

ಎಲ್ಲೂರು, ಮಂಚೇರಿಯಲ್, ಸೋಲಾಪುರ ಮತ್ತು ಅಹ್ಮದ್‌ನಗರದಂತಹ ಸಣ್ಣ ಪಟ್ಟಣಗಳಲ್ಲಿಯೂ ಮಾರುಕಟ್ಟೆ ಸ್ಥಾನವನ್ನು ಪಡೆದುಕೊಂಡಿದೆ. ಕೆನಡಾ, ಆಸ್ಟೆçÃಲಿಯಾ, ಈಜಿಪ್ಟ್ ಮತ್ತು ಆಫ್ರಿಕಾದ ಇತರೆ ದೇಶಗಳಲ್ಲಿಯೂ ಕಂಪನಿಯು ತನ್ನ ಕಾರ್ಯಾಚರಣೆಯನ್ನು ಆರಂಭಿಸುವ ಯೋಜನೆಗಳನ್ನು ರೂಪಿಸುತ್ತಿದೆ.

 

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago