ಉಡುಪಿ : 1.5 ವರ್ಷದ ದೀರ್ಘ ರಜೆಯ ಬಳಿಕ ಅಂಗನವಾಡಿಗೆ ಮರಳಿದ ಚಿಣ್ಣರು  – VIshwanews24

Featured, ಉಡುಪಿ

ಉಡುಪಿ : 1.5 ವರ್ಷದ ದೀರ್ಘ ರಜೆಯ ಬಳಿಕ ಅಂಗನವಾಡಿಗೆ ಮರಳಿದ ಚಿಣ್ಣರು  – VIshwanews24

ಉಡುಪಿ : ಕೊರೊನಾ ಕಾರಣದಿಂದ ಸುಮಾರು 1.5 ವರ್ಷದಿಂದ ಮುಚ್ಚಲ್ಪಟ್ಟಿದ್ದ ಜಿಲ್ಲೆಯ ಎಲ್ಲಾ ಅಂಗನವಾಡಿಗಳು ಇಂದು ಆರಂಭಗೊಂಡಿದ್ದು, ಸುಮಾರು 1.5 ವರ್ಷದ ದೀರ್ಘ ರಜೆಯ ಬಳಿಕ ಚಿಣ್ಣರು ಅಂಗನವಾಡಿಗೆ ಮರಳಿದ್ದಾರೆ.

ಉಡುಪಿಯಲ್ಲಿ ಇಂದಿನಿಂದ ಅಂಗನವಾಡಿ ಪ್ರಾರಂಭೋತ್ಸವದ ಹಿನ್ನೆಲೆ ಅಂಗನವಾಡಿ ಸಿಬ್ಬಂದಿಗಳು ಸಿಹಿತಿಂಡಿ, ಗುಲಾಬಿ ಹೂ ನೀಡಿ ಮಕ್ಕಳನ್ನು ಸ್ವಾಗತಿಸಿದರು.

ಈ ಸಂದರ್ಭ ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್‌‌‌ ಸಿಇಒ ಅಂಗನವಾಡಿಗೆ ಭೇಟಿ ನೀಡಿದ್ದು, ಮಕ್ಕಳನ್ನು ಪ್ರೀತಿಯಿಂದ ಬರಮಾಡಿಕೊಂಡರು.

ಇಂದು ಪುನೀತ್ 11ನೇ ದಿನದ ಪುಣ್ಯಾರಾಧನೆ ; ನನ್ನ ಮಗ ಇಲ್ಲ ಎನ್ನುವ ನೋವು ನನ್ನನ್ನು ಕಾಡುತ್ತಿದೆ : ಶಿವರಾಜ್‍ಕುಮಾರ್ – Vishwanews24

ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯತ್‌ ಸಿಇಒ ಡಾ ನವೀನ್‌ ಭಟ್‌‌, “ಪರಿಸ್ಥಿತಿ ಆಧರಿಸಿ 15 ದಿನಗಳ ಬಳಿಕ ಮಕ್ಕಳಿಗೆ ಪೌಷ್ಟಿಕ ಆಹಾರದ ವ್ಯವಸ್ಥೆ ಪ್ರಾರಂಭಿಸಲಾಗುವುದು” ಎಂದು ತಿಳಿಸಿದರು.

ಅಂಗನವಾಡಿ ಆರಂಭಕ್ಕೂ ಮುನ್ನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಮೊದಲ ಹಂತದಲ್ಲಿ ಬೆಳಗ್ಗೆ 10 ರಿಂದ 12 ರವರೆಗೆ ಮಾತ್ರ ಅಂಗನವಾಡಿಯನ್ನು ತೆರೆಯಲು ನಿರ್ಧರಿಸಿದ್ದು, ಮುಂದಿನ ಸೂಚನೆವರೆಗೆ ಪೂರಕ ಪೌಷ್ಠಿಕ ಆಹಾರವನ್ನು/ಆಹಾರ ಪದಾರ್ಥಗಳನ್ನು ಮನೆಗೆ ನೀಡಲಾಗುವುದು. ಕೇಂದ್ರದಲ್ಲಿ ಆಹಾರ ತಯಾರಿಸುವವರು ಮಾಸ್ಕ್‌‌‌, ಹೆಡ್ ಕ್ಯಾಪ್ ಮತ್ತು ಏಪ್ರನ್ ಧರಿಸುವಂತೆ ಸೂಚನೆ ನೀಡಲಾಗಿದೆ