Featured

ಉಡುಪಿ: 10 ತಿಂಗಳ ಹಿಂದೆ ನಡೆದ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ ; ಆರೋಪಿ ಬಂಧನ – vishwanews24

ಉಡುಪಿ: ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ; 10 ತಿಂಗಳ ಬಳಿಕ ಆರೋಪಿ ಬಂಧನ

ಉಡುಪಿ: 10 ತಿಂಗಳ ಹಿಂದೆ ನಡೆದ ಮಣಿಪಾಲದ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಿರುಕುಳ ನೀಡಿದ ಆರೋಪದಡಿ ಓರ್ವ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ದೀಯು ದಮನ್ ಕೇಂದ್ರಾಡಳಿತ ಪ್ರದೇಶದ ಸಾಯಿ ಸಂಜಯ್ ಬಿಂಗಾರೆ (21) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಮಣಿಪಾಲದ ಹೊಟೇಲ್ ಮ್ಯಾನೇಜ್ ಮೆಂಟ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಅಸ್ಸಾಂ ರಾಜ್ಯದ ಲೆಸ್ಲಿ ಜೋಸೆಫ್ ಮ್ಯಾಥ್ಯೂ ಎಂಬವರ ಮಗಳು ಪೌಲಾ ಲೆಸ್ಲಿ ವಾಜ್ರಿರ್ ಎಂಬಾಕೆ 2025ರ ನ. ನ.7ರಂದು ರಾತ್ರಿ ಮಣಿಪಾಲದ ಕಾಯಿನ್ ಸರ್ಕಲ್ ಬಳಿಯ ತನ್ನ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ನ್ಯಾಯಾಲಯದ ಖಾಸಗಿ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರು ತನಿಖೆ ನಡೆಸಿ ಅಂತಿಮ ವರದಿ ತಯಾರಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿದ್ದು, ನಂತರ ವಶಪಡಿಸಿಕೊಳ್ಳಲಾದ ಮೃತರ ಫೋನ್, ಡೈರಿ, ಡಿಜಿಟಲ್ ದಾಖಲೆಗಳನ್ನು ಲೆಸ್ಲಿ ಜೋಸೆಫ್ ಮ್ಯಾಥ್ಯೂ ಅವರ ವಶಕ್ಕೆ ನೀಡಲಾಗಿತ್ತು. ಲೆಸ್ಲಿ ಜೋಸೆಫ್ ಮ್ಯಾಥ್ಯೂ ತನ್ನ ಮಗಳ ಫೋನ್, ಡೈರಿಗಳನ್ನು ಪರಿಶೀಲಿಸಿದಾಗ ಸಾಯಿ ಸಂಜಯ್ ಬಿಂಗಾರೆ ಸ್ನ್ಯಾಪ್ ಚಾಟ್ ಮೂಲಕ ವಿನಿಮಯ ಮಾಡಿಕೊಂಡ ದಾಖಲೆಗಳು ದೊರೆತಿದ್ದವು.

ಪೌಲಾ ಲೆಸ್ಲಿ ವಾಜ್ರಿರ್‌ನನ್ನು ಆರೋಪಿ ಸಾಯಿ ಸಂಜಯ್ ಬಿಂಗಾರೆ ಆತ್ಮಹತ್ಯೆಗೆ ನಿರಂತರ ಕಿರುಕುಳ, ಬಲವಂತ ಅಥವಾ ಬ್ಲ್ಯಾಕ್‌ಮೇಲ್ ಮಾಡಿರುವ ಸಾಧ್ಯತೆ ಇರುವುದರಿಂದ ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತಂದೆ ದೂರಿನಲ್ಲಿ ತಿಳಿಸಿದ್ದು, ಅದರಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಮಣಿಪಾಲ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಸೂಚನೆಯಂತೆ ಮಣಿಪಾಲ ಠಾಣಾ ಎಸ್ಸೈ ತಿಮ್ಮೇಶ್ ಬಿ.ಎನ್. ಪ್ರಕರಣದ ತನಿಖೆಯನ್ನು ಕೈಗೊಂಡು ಆರೋಪಿಯನ್ನು ಸೆ.9ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Vishwa News 24

Recent Posts

‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿಯನ್ನು ಕರ್ನಾಟಕದ ಜನತೆಗೆ ಅರ್ಪಿಸಿದ ಹಿರಿಯ ನಟ ಅನಂತ್ ನಾಗ್ – vishwanews24

'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿಯನ್ನು ಕರ್ನಾಟಕದ ಜನತೆಗೆ ಅರ್ಪಿಸಿದ ಹಿರಿಯ ನಟ ಅನಂತ್ ನಾಗ್ ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ನೀಡಿದ ಅಪಾರ…

35 minutes ago

ಕೊಣಾಜೆ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ; ಅದೃಷ್ಟವಶಾತ್ ತಪ್ಪಿದ ಭಾರಿ ದುರಂತ – vishwanews24

ಕೊಣಾಜೆ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ; ಅದೃಷ್ಟವಶಾತ್ ತಪ್ಪಿದ ಭಾರಿ ದುರಂತ ಕೊಣಾಜೆ  : ಚಾಲಕನ ನಿಯಂತ್ರಣ…

55 minutes ago

ಮಂಗಳೂರು : ಜೈಲಿನಲ್ಲಿ ಗಲಾಟೆ ;ಅಡುಗೆಮನೆ ಸ್ಫೋಟಿಸುವುದಾಗಿ ಕೈದಿ ಬೆದರಿಕೆ – vishwanews24

ಮಂಗಳೂರು : ಜೈಲಿನಲ್ಲಿ ಗಲಾಟೆ ;ಅಡುಗೆಮನೆ ಸ್ಫೋಟಿಸುವುದಾಗಿ ಕೈದಿ ಬೆದರಿಕೆ ಮಂಗಳೂರು,: ಜೈಲು ಅಡುಗೆಮನೆಯ ಗೇಟಿಗೆ ಬೀಗ ಹಾಕಿದ ಬಳಿಕ…

1 hour ago

ಬೆಳ್ತಂಗಡಿ: ಗಡಾಯಿಕಲ್ಲು ಚಾರಣಕ್ಕೆ ಮುಕ್ತ ; ದಿನಕ್ಕೆ 500 ಪ್ರವಾಸಿಗರಿಗೆ ಮಾತ್ರ ಅವಕಾಶ  – vishwanews24

ಬೆಳ್ತಂಗಡಿ: ಗಡಾಯಿಕಲ್ಲು ಚಾರಣಕ್ಕೆ ಮುಕ್ತ ; ದಿನಕ್ಕೆ  500 ಪ್ರವಾಸಿಗರಿಗೆ ಮಾತ್ರ ಅವಕಾಶ  ಬೆಳ್ತಂಗಡಿ: ತಾಲೂಕಿನ ಗಡಾಯಿಕಲ್ಲು ಚಾರಣ ತಾಣವು ಸೆ.…

1 hour ago

ಕುಂದಾಪುರ: ಮೀನುಗಾರರ ಹಿತ ಕಾಯಲು ಸರಕಾರ ಬದ್ಧ: ಸಚಿವ ಬಸವಂತಪ್ಪ – vishwanews24

ಕುಂದಾಪುರ: ಮೀನುಗಾರರ ಹಿತ ಕಾಯಲು ಸರಕಾರ ಬದ್ಧ: ಸಚಿವ ಬಸವಂತಪ್ಪ ಕುಂದಾಪುರ: ಮೀನುಗಾರಿಕೆ ವಲಯದ ಜ್ವಲಂತ ಸಮಸ್ಯೆಗಳ ಕುರಿತು ಅರಿಯಲು,…

2 hours ago

ಬೆಂಗಳೂರು:  ಯುವತಿಯ ಕಿಡ್ನಾಪ್​ಗೆ ಯತ್ನ ; ಸ್ಥಳೀಯರಿಂದ ರಕ್ಷಣೆ – vishwanews24

ಬೆಂಗಳೂರು: ಯುವತಿಯ ಅಪಹರಣ ಯತ್ನದಲ್ಲಿ ಸರಣಿ ಅಪಘಾತ.. 35ಕ್ಕೂ ಹೆಚ್ಚು ವಾಹನಗಳಿಗೆ ಕಾರು ಡಿಕ್ಕಿ .. ಮೂವರು ಆರೋಪಿಗಳು ಪೊಲೀಸರ…

2 hours ago