ಉಡುಪಿ : ಉದ್ಯಮಿ ಆರ್.ಎಸ್.ಎಸ್. ಸಂಘ ಚಾಲಕ್ ತಾರಾನಾಥ್ ಕೋಟ್ಯಾನ್ ನಿಧನ : ಜಿಲ್ಲಾ ಬಿ.ಜೆ.ಪಿ. ಸಂತಾಪ -Vishwanews24
ಉದ್ಯಮಿ, ಆರ್.ಎಸ್.ಎಸ್. ಸಂಘ ಚಾಲಕ್ ತಾರಾನಾಥ್ ಕೋಟ್ಯಾನ್ ನಿಧನ : ಜಿಲ್ಲಾ ಬಿ.ಜೆ.ಪಿ. ಸಂತಾಪ -Vishwanews24
ಉಡುಪಿ ; ಉದ್ಯಮಿ, ಕಾಪು ತಾಲೂಕು ರಾಷ್ಟಿçÃಯ ಸ್ವಯಂಸೇವಕ ಸಂಘದ ಸಂಘಚಾಲಕ್, ಕಾಪು ಮೊಗವೀರ ಮಹಾಸಭೆಯ ಮಾಜಿ ಅಧ್ಯಕ್ಷರಾದ ತಾರಾನಾಥ ಕೋಟ್ಯಾನ್ (೬೦) ಅವರ ನಿಧನಕ್ಕೆ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಅವರು ತೀವೃ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಂಘ ಪರಿವಾರದ ಹಿರಿಯ ಕಾರ್ಯಕರ್ತರಾಗಿದ್ದ ಅವರು ಸಂಘದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ, ಪ್ರಸ್ತುತ ಕಾಪು ತಾಲೂಕು ಸಂಘ ಚಾಲಕ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕಾಪುವಿನಲ್ಲಿ ಪ್ರಥಮ ಬಾರಿಗೆ ನಡೆದ ಹನುಮಾನ್ ಚಾಲೀಸಾ ಮಂತ್ರ ಮಠಣ ಕಾರ್ಯಕ್ರಮಕ್ಕೆ ಇವರ ನೇತೃತ್ವದಲ್ಲಿ ಚಾಲನೆ ನೀಡಲಾಗಿತ್ತು ಮತ್ತುವಿವಿಧ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಾಹಿಸಿದ ಅವರು ಕಾಪು ಪಡು ಗ್ರಾಮದ ಮಕ್ಕಳ ಮಹಾಲಕ್ಷ್ಮಿ ಭಜನ ಮಂದಿರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಾಹಿಸಿ ಜನಪ್ರಿಯರಾಗಿದ್ದರು ಎಂದು ಕುಯಿಲಾಡಿ ತಮ್ಮ ಸಂತಾಪ ವ್ಯಕ್ತಪಡಿಸಿದ್ದರು.
