ಉದ್ಯಾವರ : ಒಂದು ಭಾಷೆ ನಾಶವಾದರೆ ಒಂದು ಸಂಸ್ಕೃತಿ ನಾಶವಾಗುತ್ತದೆ. : ಡಾ| ಎ.ಪಿ. ಭಟ್ – Vishwanews24
ಉದ್ಯಾವರ : ಒಂದು ಭಾಷೆ ನಾಶವಾದರೆ ಒಂದು ಸಂಸ್ಕೃತಿ ನಾಶವಾಗುತ್ತದೆ. : ಡಾ| ಎ.ಪಿ. ಭಟ್ – Vishwanews24
ಉದ್ಯಾವರ: ಕನ್ನಡ ಮಾಧ್ಯಮ ಶಾಲೆಗಳು ಇಂದಿನ ದಿನಮಾನದಲ್ಲಿ ಆಂಗ್ಲಭಾಷಾ ಮಾಧ್ಯಮಗಳ ಕಾರಣದಿಂದ ಸವಾಲುಗಳನ್ನು ಎದುರಿಸುತ್ತಿದೆ. ಕನ್ನಡ ಮಾಧ್ಯಮವನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಕನ್ನಡ ಮಾಧ್ಯಮ ಶಾಲೆಗಳಿಂದ ಮಾತ್ರ ಕನ್ನಡ ಭಾಷೆಯನ್ನು ಉಳಿಸಲು ಸಾಧ್ಯ.
ಒಂದು ಭಾಷೆ ನಾಶವಾಗುವುದೆಂದರೆ ಅದು ಭಾಷೆಗಷ್ಟೇ ಸೀಮಿತವಾಗಿರೋದಿಲ್ಲ. ಒಂದು ಸಂಸ್ಕೃತಿ ನಾಶವಾದಂತೆ. ಕನ್ನಡ ಮಾಧ್ಯಮ ಎಂಬ ಕೀಳರಿಮೆ ಯಾರಿಗೂ ಬೇಡ. ಈ ಶಾಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಹಳೆ ವಿದ್ಯಾರ್ಥಿಗಳದ್ದು. ಶಾಲೆಗಳು ದೇವಸ್ಥಾನವಿದ್ದಂತೆ. ಶಿಕ್ಷಕರು ಅಲ್ಲಿನ ಅರ್ಚಕರು. ಅರ್ಚಕರು ಸರಿಯಾಗಿ ಕೆಲಸ ಮಾಡಿದಾಗ ದೇವಸ್ಥಾನ ಹೇಗೆ ಜನಪ್ರಿಯವಾಗುತ್ತಾ ಹಾಗೆ ಶಿಕ್ಷಕರು ಬದ್ದತೆಯಿಂದ ಕೆಲಸ ಮಾಡಿದಾಗ ಶಾಲೆ ಉಳಿದು ಬೆಳೆಯುತ್ತದೆ. ಚರ್ಚ್, ದೇವಸ್ಥಾನ, ಮಸೀದಿಗಳ ಅಭಿವೃದ್ಧಿಗೆ ಆರ್ಥಿಕ ಸಹಾಯ ಮಾಡುವುದಕ್ಕಿಂತ, ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ಸಹಾಯ ಮಾಡೋದು ಮುಖ್ಯವಾಗಬೇಕು ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಡಾ| ಎ.ಪಿ. ಭಟ್ರವರು ಉದ್ಯಾವರ
ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿದ ೨೦೨೧-೨೨ ಸಾಲಿನ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅವರು ಮುಂದುವರಿಯುತ್ತಾ, ಸರಕಾರದ ಎದುರು ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಉಳಿಸಿ ಎಂದು ಎಷ್ಟು ಕೂಗಿದರೂ ಅದು ಕಿವಿ ಕೊಡೊದಿಲ್ಲ. ಇನ್ನು ಸಾಕು ಮಾಡೋಣ. ನಾವು ನಮ್ಮ ಶಾಲೆಯನ್ನು ಉಳಿಸಿಕೊಳ್ಳೋಣ ೩೫೦ ವಿದ್ಯಾರ್ಥಿಳು ಇರುವ ಶಾಲೆಯಲ್ಲಿ ಒಬ್ಬರು ಖಾಯಂ ಶಿಕ್ಷಕರು ಇದ್ದಾರೆ ಎಂದರೆ ಇದು ಸರಕಾರಕ್ಕೆ ಅವಮಾನ. ಗೌರವ ಶಿಕ್ಷಕರನ್ನು ನೇಮಕ ಮಾಡಿ ಈ ಶಾಲೆಯನ್ನು ಈವರೆಗೆ ಅಧ್ಬುತವಾಗಿ ಕಟ್ಟಿದ ಶಾಲಾ ಆಡಳಿತ
ಮಂಡಳಿ, ಶಿಕ್ಷಕರು, ಹಳೆ ವಿದ್ಯಾರ್ಥಿಗಳು, ಹೆತ್ತವರು ಅಭಿನಂದನಾರ್ಹರು. ಹಳೆ ವಿದ್ಯಾರ್ಥಿಗಳು ಎದ್ದು ನಿಲ್ಲಿ ನಿಮ್ಮ ಆದಾಯದ ಒಂದು ಸಣ್ಣ ಭಾಗವನ್ನು ಶಾಲಾಭಿವೃದ್ಧಿಗೆ ನೀಡಿ. ಈ ಶಾಲೆ ಇನ್ನೂ ಅಧ್ಬುತವಾಗಿ ಬೆಳಗುತ್ತದೆ ಎಂದರು.
ಇದನ್ನೂ ಓದಿ :
ಮತ್ತೋರ್ವ ಮುಖ್ಯ ಅತಿಥಿ ಶಾಲಾ ಸಂಚಾಲಕರಾದ ಶ್ರೀ ಸುರೇಶ್ ಶೆಣೈಯವರು ಮಾತನಾಡಿ ಒಂದು ರೀತಿಯ ಹೋರಾಟದ ಮೂಲಕ ಶಾಲೆಯನ್ನು ಕಟ್ಟುತ್ತಿದ್ದೇವೆ. ನಮ್ಮೊಂದಿಗೆ ಶಿಕ್ಷಕರು, ಹೆತ್ತವರು ಸಹಕರಿಸುತ್ತಿದ್ದಾರೆ. ಇದೀಗ ಹಳೆ ವಿದ್ಯಾರ್ಥಿಗಳು ಸಂಘಟಿತರಾಗುತ್ತಿರುವುದು ಶಾಲಾಭಿವೃದ್ದಿ ದೃಷ್ಟಿಯಲ್ಲಿ ಒಂದು ಆಶಾದಾಯಕ ಬೆಳವಣಿಗೆ. ಈ ಶಾಲೆ ಅಭಿವೃದ್ಧಿ ಹೊಂದುತ್ತಾ ಇದೆ. ೧೬೧ ವರ್ಷ ಇತಿಹಾಸದ ಶಾಲೆ ನಿಮ್ಮೆಲ್ಲರ ಸಹಕಾರದಿಂದ ನಿರ0ತರವಾಗಿ ಅಭಿವೃದ್ಧಿ ಹೊಂದಲಿ ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಶಾಲಾಡಳಿತ ಮಂಡಳಿಯ ಅಧ್ಯಕ್ಷರು ಹವಿಸಂ ಗೌರವಾಧ್ಯಕ್ಷರು ಆದಾ ಶ್ರೀ ಗಣಪತಿ ಕಾರಂತರು ಹಳೆ ವಿದ್ಯಾರ್ಥಿಗಳು ಒಂದಾಗಿ ಇಂದು ತಮ್ಮ ಬದುಕು ಕಟ್ಟಿಕೊಟ್ಟ ಮಾತೃ ಶಾಲಾ ಋಣ ಸಂದಾಯಕ್ಕೆ ಹೆಜ್ಜೆಯನ್ನು ಇಡುತ್ತಿದ್ದಾರೆ. ಇದು ಸಂತಸದ ಸಂಗತಿ. ಒಂದೆರಡು ಸಲ ಪ್ರಯತ್ನಿಸಿದರೂ ನಾವು ಇದರಲ್ಲಿ ಯಶಸ್ವಿಯಾಗಲಿಲ್ಲ. ಆದರೆ ಈ ಬಾರಿ ಕ್ರಿಯಾಶೀಲ ಹಳೆ ವಿದ್ಯಾರ್ಥಿ ಸುನೀಲ್ ಸಾಲ್ಯಾನ್ರವರ ನೇತೃತ್ವದಲ್ಲಿ ಈ ಕೆಲಸ ಯಶಸ್ವಿಯಾಗುತ್ತದೆ ಎಂದು ನನಗನಿಸುತ್ತಿದೆ. ಮಲ್ಲಿಗೆ ಹೂವು ಬಹಳ ಸಣ್ಣದು ಆದರೆ ಅದು ಪಸರಿಸುವ ಪರಿಮಳ ಪ್ರದೇಶವನ್ನೇ ಆವರಿಸಿ ಬಿಡುತ್ತದೆ. ಹಾಗೇ
ಹಳೆ ವಿದ್ಯಾರ್ಥಿಗಳು ತಾವು ಒಬ್ಬರು ಶಾಲಾಭಿವೃದ್ಧಿಗೆ ಏನು ಮಾಡ ಬಲ್ಲೆವು ಎಂದು ಪ್ರಶ್ನಿಸಿಕೊಳ್ಳದೆ ಮಾಡುತ್ತೇವೆ ಎಂಬಸ0ಕಲ್ಪದೊ0ದಿಗೆ ಮುಂದೆ ಸಾಗಿದಾಗ ಯಶಸ್ಸು ನಮ್ಮದಾಗುತ್ತದೆ. ಮುಂದುವರಿಯೋಣ ಎಂದರು.
ಇದನ್ನೂ ಓದಿ :
ಉಡುಪಿ : ಸಮಾಜದಲ್ಲಿ ಶಿಕ್ಷಣಕ್ಕೆ ಪೂರಕ ವಾತಾವರಣ ನಿರ್ಮಾಣವಾಗಲಿ : ಪೇಜಾವರ ಶ್ರೀ – Vishwanews24
ಶಾಲಾ ಮುಖ್ಯೋಪಾಧ್ಯಾಯರು, ಹವಿಸಂನ ಕೋಶಾಧಿಕಾರಿ ಶ್ರೀಮತಿ ಹೇಮಲತಾ ಉಪಸ್ಥಿತರಿದ್ದರು. ಹವಿಸಂ ಗೆ ಮಹಾಪೋಷಕರು, ಗೌರವ ಪೋಷಕರು, ಪೋಷಕರು ಆಗಿ ಸೇರ್ಪಡೆಯಾದ ಹಳೆ ವಿದ್ಯಾರ್ಥಿಗಳಿಗೆ ಶಾಲು ಹಾಕಿ ಅಭಿನಂದನಾ ಪತ್ರ ಕೊಟ್ಟು ಅತಿಥಿಗಳು ಸಂಮಾನಿಸಿದರು.
ಗತ ವರ್ಷದ ಅಧ್ಯಕ್ಷರಾದ ಶ್ರೀ ಕೆ. ಮುರಳೀಕೃಷ್ಣ ಭಟ್ , ಕಾರ್ಯದರ್ಶಿಗಳಾದ ಶ್ರೀ ಗಿರೀಶ್ ಗುಡ್ಡೆಯಂಗಡಿ ಅವರನ್ನು ಸಂಮಾನಿಸಲಾಯಿತು. ಪ್ರಾರ0ಭದಲ್ಲಿ ಹಿಂದೂ ಶಾಲಾ ಹವಿಸಂನ ಅಧ್ಯಕ್ಷರಾದ ಶ್ರೀ ಸುನಿಲ್ ಸಾಲ್ಯಾನ್ ಕಡೆಕಾರ್ ಅತಿಥಿಗಳನ್ನು ಸ್ವಾಗತಿಸಿದರು. ಉದ್ಯಾವರ
ನಾಗೇಶ್ ಕುಮಾರ್ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿ ಶ್ರೀ ರವಿಕಿರಣ್ ವಂದಿಸಿದರು. ಶಿಕ್ಷಕ ಶ್ರೀ ವಿಕ್ರಮ್ ಆಚಾರ್ಯ ಮತ್ತು ಕು| ಸ್ವಾತಿ ಕಾರ್ಯಕ್ರಮ ನಿರ್ವಹಿಸಿದರು.
ಇದನ್ನೂ ಓದಿ :
Chinese apps Ban :ಚೀನಾದ 54 ಆ್ಯಪ್ಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರ – Vishwanews24
