ಉದ್ಯಾವರ ಸೇತುವೆ ಬಳಿ ಹೊಳೆಗೆ ಹಾರಿದ ಯುವಕ; ಪೊಲೀಸರು ಮತ್ತು ಸ್ಥಳೀಯರಿಂದ  ಹುಡುಕಾಟ – Vishwanews24 

Featured, ಉಡುಪಿ, ಜಿಲ್ಲೆ

ಉದ್ಯಾವರ,: ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಸೇತುವೆ ಬಳಿ ಯುವಕನೋರ್ವ ಹೊಳೆಗೆ ಹಾರಿರುವ ಘಟನೆ ವರದಿಯಾಗಿದೆ. ಹೊಳೆಗೆ ಹಾರಿರುವ ವ್ಯಕ್ತಿಯನ್ನು ಉದ್ಯಾವರ ನಿವಾಸಿ, ಬಿಜೆಪಿ ಮುಖಂಡ ಅಶೋಕ ಅಮೀನ್ (38) ಎಂದು ಗುರುತಿಸಲಾಗಿದೆ.

ಏ.25 ರ ಗುರುವಾರ ಬೆಳಿಗ್ಗೆ ತನ್ನ ಮನೆಯಿಂದ ಹೊರಟ ಅಶೋಕ್ ಉದ್ಯಾವರದ ಹೆದ್ದಾರಿ ಸೇತುವೆ ಬಳಿ ತನ್ನ ಬೈಕ್ ನ್ನು ನಿಲ್ಲಿಸಿ ಹೊಳೆಗೆ ಹಾರಿದ್ದಾನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತಕ್ಷಣ ಸ್ಥಳೀಯರು ಕಾಪು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದು ಪೊಲೀಸರು ಮತ್ತು ಸ್ಥಳೀಯರು ಹುಡುಕಾಟ ಪ್ರಾರಂಭಿಸಿದ್ದಾರೆ. ಆರ್ಥಿಕ ಅಡಚಣೆಯ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳಲೆಂದು ಹೊಳೆಗೆ ಹಾರಿರುವ ಸಂಶಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.