ಉದ್ಯಾವರ ಹಾಗೂ ಪಡುಬಿದ್ರೆ ಗ್ರಾ. ಪಂ. ಉಪ ಚುನಾವಣೆ : ಮದ್ಯ ಮಾರಾಟ ನಿಷೇಧ – vishwanews24

Featured, ಉಡುಪಿ

ಉದ್ಯಾವರ ಹಾಗೂ ಪಡುಬಿದ್ರೆ ಗ್ರಾ. ಪಂ. ಉಪ ಚುನಾವಣೆ : ಮದ್ಯ ಮಾರಾಟ ನಿಷೇಧ

     ಉಡುಪಿ: ಗ್ರಾಮ ಪಂಚಾಯತ್ ಉಪಚುನಾವಣೆ 2025 ಕ್ಕೆ ಸಂಬ0ಧಿಸಿದ0ತೆ ವಿವಿಧ ಕಾರಣಗಳಿಂದ ತೆರವಾಗಿರುವ ಜಿಲ್ಲೆಯ ಉಡುಪಿ ತಾಲೂಕಿನ ಉದ್ಯಾವರ ಹಾಗೂ ಕಾಪು ತಾಲೂಕಿನ ಪಡುಬಿದ್ರೆ ಗ್ರಾಮ ಪಂಚಾಯತಿಯತಿ ಕ್ಷೇತ್ರ ವ್ಯಾಪ್ತಿಯಲ್ಲಿ ಮೇ 25 ರಂದು ಮತದಾನ ನಡೆಯಲಿರುವ ಹಿನ್ನೆಲೆ, ಕರ್ನಾಟಕ ಅಬಕಾರಿ ಕಾಯ್ದೆ ಸಾಮಾನ್ಯ ನಿಯಮಾವಳಿ 1967 ಕಲಂ 10(ಬಿ) ಪ್ರಕಾರ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 308 ಎಸಿ ರಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಉಪಚುನಾವಣೆ ನಡೆಯಲಿರುವ ಮೇಲ್ಕಂಡ ಗ್ರಾಮ ಪಂಚಾಯತ್ ಕ್ಷೇತ್ರ ವ್ಯಾಪ್ತಿಯಲ್ಲಿ ಮೇ 23 ಸಂಜೆ 5 ಗಂಟೆಯಿ0 ಮೇ 25 ಸಂಜೆ 5 ಗಂಟೆಯವರೆಗೆ ಎಲ್ಲಾ ರೀತಿಯ ಮದ್ಯದಂಗಡಿ, ಮದ್ಯ ಮಾರಾಟ ಡಿಪೋ, ಮದ್ಯ ತಯಾರಿಕಾ ಡಿಸ್ಟಿಲರಿ, ಸ್ಟಾರ್ ಹೋಟೆಲ್ ಹಾಗೂ ಶೇಂದಿ ಅಂಗಡಿಗಳನ್ನು ಮುಚ್ಚಲು ಆದೇಶಿಸಿ, ಒಣದಿನಗಳೆಂದು ಘೋಷಿಸಿ, ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಆದೇಶಿಸಿರುತ್ತಾರೆ

ಉಡುಪಿ :  ಜೂನ್ 1 ರಿಂದ ಯಾಂತ್ರೀಕೃತ ಮೀನುಗಾರಿಕೆ ನಿಷೇಧ – vishwanews24

 

Leave a Reply