Featured

‘ಉದ್ಯೋಗ ನಿಧಿ’ ಯೋಜನೆಯಡಿ 1 ಲಕ್ಷ ಹೊಸ ಉದ್ಯೋಗ ಸೃಷ್ಟಿಯ ಗುರಿ : ಪ್ರಿಯಾಂಕ್ ಖರ್ಗೆ – vishwanews24

‘ಉದ್ಯೋಗ ನಿಧಿ’ ಯೋಜನೆಯಡಿ 1 ಲಕ್ಷ ಹೊಸ ಉದ್ಯೋಗ ಸೃಷ್ಟಿಯ ಗುರಿ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ರಾಜ್ಯದ ಹನ್ನೊಂದು ಹಿಂದುಳಿದ ಜಿಲ್ಲೆಗಳಲ್ಲಿ ಕೈಗಾರಿಕಾ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವ ಮಹತ್ವಾಕಾಂಕ್ಷೆಯ ‘ಉದ್ಯೋಗ ನಿಧಿ’ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಈ ಜಿಲ್ಲೆಗಳಲ್ಲಿ 1 ಲಕ್ಷ ಹೊಸ ಉದ್ಯೋಗ ಸೃಷ್ಟಿಯ ಗುರಿಯನ್ನಿಟ್ಟುಕೊಳ್ಳಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಶುಕ್ರವಾರ ಪ್ರಕಟನೆ ಹೊರಡಿಸಿರುವ ಅವರು, ಕಲಬುರಗಿ, ಬೀದರ್, ರಾಯಚೂರು, ಯಾದಗಿರಿ ಮತ್ತು ಬಾಗಲಕೋಟೆ ಸೇರಿದಂತೆ ಅಭಿವೃದ್ಧಿಯಲ್ಲಿ ಹಿಂದುಳಿದ 11 ಜಿಲ್ಲೆಗಳಲ್ಲಿ ಹೊಸ ಕೈಗಾರಿಕೆಗಳ ಸ್ಥಾಪನೆ ಹಾಗೂ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಉದ್ಯಮಗಳ ವಿಸ್ತರಣೆಗೆ ಈ ಯೋಜನೆ ಉತ್ತೇಜನ ನೀಡಲಿದೆ ಎಂದಿದ್ದಾರೆ.

ಇದನ್ನೂ ಓದಿ :

ಯೋಜನೆಯಡಿ ಅರ್ಹ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಕೈಗಾರಿಕಾ ಸಂಸ್ಥೆಗಳು ಹೆಚ್ಚುವರಿಯಾಗಿ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಲ್ಲಿ, ಪ್ರತಿ ಹೆಚ್ಚುವರಿ ಉದ್ಯೋಗಿಗೆ ತಿಂಗಳಿಗೆ 2,500 ರೂ.ನಂತೆ ಗರಿಷ್ಠ 24 ತಿಂಗಳವರೆಗೆ ಸರಕಾರ ಪ್ರೋತ್ಸಾಹಧನ ನೀಡಲಿದೆ ಎಂದು ಅವರು ತಿಳಿಸಿದರು.

ಈ ಯೋಜನೆಗಾಗಿ ವಾರ್ಷಿಕ 305 ಕೋಟಿ ರೂ. ಅನುದಾನವನ್ನು ಒದಗಿಸಲಾಗುತ್ತಿದ್ದು, ನಿಜವಾಗಿಯೂ ಹೊಸ ಉದ್ಯೋಗಗಳನ್ನು ಸೃಷ್ಟಿಸಿ ಅವುಗಳನ್ನು ನಿರಂತರವಾಗಿ ಉಳಿಸಿಕೊಳ್ಳುವ ಉದ್ಯಮಗಳಿಗೆ ಮಾತ್ರ ಸರಕಾರದ ನೆರವು ತಲುಪುವಂತೆ ವ್ಯವಸ್ಥೆ ರೂಪಿಸಲಾಗಿದೆ. ಹೊಸ ನೇಮಕಾತಿ ಹಾಗೂ ಉದ್ಯೋಗಿಗಳಿಗೆ ಪಾವತಿಸಲಾಗುವ ವೇತನವನ್ನು ಪರಿಶೀಲಿಸಿದ ನಂತರವೇ ಪ್ರೋ ತ್ಸಾಹಧನ ನೀಡಲಾಗುತ್ತದೆ. ಇದರಿಂದ ಯೋಜನೆಯ ಅನುಷ್ಠಾನದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಖಾತ್ರಿಪಡಿಸಲಾಗುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ :

ರಾಜ್ಯ ಸರಕಾರದ ‘ಯುವನಿಧಿ’ ಯೋಜನೆಯೊಂದಿಗೆ ಸಮನ್ವಯ ಸಾಧಿಸಿ ‘ಉದ್ಯೋಗ ನಿಧಿ’ಯನ್ನು ಅನುಷ್ಠಾನಗೊಳಿಸಲಾಗುತ್ತದೆ. ಯುವನಿಧಿಯ ಮೂಲಕ ಯುವಜನರಿಗೆ ಉದ್ಯೋಗ ಪಡೆಯಲು ಅಗತ್ಯವಾದ ಬೆಂಬಲ ಮತ್ತು ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಲಾಗುತ್ತಿದ್ದರೆ, ಉದ್ಯೋಗ ನಿಧಿಯ ಮೂಲಕ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳಿಗೆ ನೇರ ಪ್ರೊತ್ಸಾಹ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

Vishwa News 24

Recent Posts

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಬೆಳ್ತಂಗಡಿಯ ಉಷಾರಾಣಿ ನೇಮಕ – vishwanews24

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಬೆಳ್ತಂಗಡಿಯ ಉಷಾರಾಣಿ ನೇಮಕ ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಉಷಾರಾಣಿ ಅವರು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ.…

20 minutes ago

ಪರವಾನಗಿ ಇಲ್ಲದ ಅಕ್ರಮ ಬಂದೂಕು ನ.1ರೊಳಗೆ ಒಪ್ಪಿಸಲು ಸೂಚನೆ; ತಪ್ಪಿದರೆ ಕಠಿಣ ಕ್ರಮ : ಸಿಎಂ ಎಚ್ಚರಿಕೆ  – vishwanews24

ಪರವಾನಗಿ ಇಲ್ಲದ ಅಕ್ರಮ ಬಂದೂಕು ನ.1ರೊಳಗೆ ಒಪ್ಪಿಸಲು ಸೂಚನೆ; ತಪ್ಪಿದರೆ ಕಠಿಣ ಕ್ರಮ : ಸಿಎಂ ಎಚ್ಚರಿಕೆ  ಬೆಂಗಳೂರು :…

43 minutes ago

ಬೆಳ್ತಂಗಡಿ: ಹೆಬ್ಬಾವನ್ನೇ ನುಂಗಿದ 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ರಕ್ಷಣೆ – vishwanews24

ಬೆಳ್ತಂಗಡಿ: ಹೆಬ್ಬಾವನ್ನೇ ನುಂಗಿದ 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ರಕ್ಷಣೆ ಬೆಳ್ತಂಗಡಿ : ತೆಂಕಕಾರಂದೂರು ಗ್ರಾಮದ ಕಡಿಂಗ ಎಂಬಲ್ಲಿ…

53 minutes ago

ಪಡುಬಿದ್ರಿ ಕಡಲತೀರದಲ್ಲಿ 5 ವರ್ಷಗಳಿಂದ ತೆರವಾಗದ ಟಗ್ ; ಸ್ಥಳೀಯರು, ಮೀನುಗಾರರಲ್ಲಿ ಆತಂಕ – vishwanews24

ಪಡುಬಿದ್ರಿ ಕಡಲತೀರದಲ್ಲಿ 5 ವರ್ಷಗಳಿಂದ ತೆರವಾಗದ ಟಗ್.. ಸ್ಥಳೀಯರು ಹಾಗೂ ಮೀನುಗಾರರಲ್ಲಿ ಆತಂಕ .. ಟಗ್‌ ಶೀಘ್ರ ತೆರವಿಗೆ ಆಗ್ರಹ…

1 hour ago

ಕಾಪು: ಗೂಡ್ಸ್ ವಾಹನದಲ್ಲಿ ಮಕ್ಕಳ ಅಪಾಯಕಾರಿ ಪ್ರಯಾಣ ವಿಡಿಯೋ ವೈರಲ್ ; ಪ್ರಕರಣ ದಾಖಲು, ವಾಹನ ವಶಕ್ಕೆ – vishwanews24

ಕಾಪು: ಗೂಡ್ಸ್ ವಾಹನದಲ್ಲಿ ಮಕ್ಕಳ ಅಪಾಯಕಾರಿ ಪ್ರಯಾಣ ವಿಡಿಯೋ ವೈರಲ್ ; ವಾಹನ ವಶಕ್ಕೆ - ಪೊಲೀಸರಿಂದ ಪ್ರಕರಣ ದಾಖಲು…

1 hour ago

ಉಡುಪಿ :  ಸೆ. 16 ರಂದು ನೇರ ಸಂದರ್ಶನ – vishwanews24

ಉಡುಪಿ :  ಸೆ. 16 ರಂದು ನೇರ ಸಂದರ್ಶನ ಉಡುಪಿ : ನಗರದ ಕಲ್ಸಂಕ ಜಂಕ್ಷನ್ ಬಳಿಯ ಭರತ್ ಪ್ರೆಸ್…

2 hours ago