ಉಳ್ಳಾಲ: ಅರಬ್ಬೀ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ ಸಿರಿಯಾದ ಹಡಗು – 15 ಮಂದಿಯನ್ನು ರಕ್ಷಿಸಿದ ಕೋಸ್ಟ್ಗಾರ್ಡ್ – Vishwanews24
ಉಳ್ಳಾಲ: ಅರಬ್ಬೀ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ ಸಿರಿಯಾದ ಹಡಗು – 15 ಮಂದಿಯನ್ನು ರಕ್ಷಿಸಿದ ಕೋಸ್ಟ್ಗಾರ್ಡ್
ಉಳ್ಳಾಲ: ತಾಂತ್ರಿಕ ಸಮಸ್ಯೆಯಿಂದಾಗಿ ಸಿರಿಯಾ ಮೂಲದ ಹಡಗೊಂದು ಉಚ್ಚಿಲ ಸೋಮೇಶ್ವರ ಬಳಿ ಸಮುದ್ರದಲ್ಲಿ ಅಪಾಯದಲ್ಲಿ ಸಿಲುಕಿದ ಘಟನೆ ಮಂಗಳವಾರ ನಡೆದಿದೆ.
ಹಡಗಿನಲ್ಲಿ ಸುಮಾರು 15 ಮಂದಿ ಸಿಬಂದಿಯಿದ್ದು, ಎಲ್ಲರನ್ನೂ ಕೋಸ್ಟ್ ಗಾರ್ಡ್ ತಂಡ ರಕ್ಷಿಸಿದ್ದಾರೆ. ಹಡಗು 8000 ಸಾವಿರ ಟನ್ ಉಕ್ಕಿನ ತಂತಿಗಳನ್ನು ಹೊತ್ತು ಓಮಾನ್ ನಿಂದ ಈಜಿಪ್ಟ್ ದೇಶಕ್ಕೆ ಸಾಗುತ್ತಿತ್ತು. ಈ ವೇಳೆ ಅರಬ್ಬೀ ಸಮುದ್ರದಲ್ಲಿ ಘಟನೆ ಸೆಂಭವಿಸಿದೆ. ಮಂಗಳೂರಿನಿಂದ 5.6 ನಾಟೆಕಲ್ ದೂರದಲ್ಲಿ ಹಡಗು ಸಂಚರಿಸುತ್ತಿದ್ದಾಗ ಅಡಿಭಾಗದಿಂದ ರಂಧ್ರ ಉಂಟಾಗಿ ನೀರು ಒಳಹೊಕ್ಕಿರುವುದರಿಂದ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಂಡಿದೆ ಎನ್ನಲಾಗಿದ್ದು, ಸಮಸ್ಯೆ ಕಾಣಿಸಿಕೊಂಡ ಕೂಡಲೇ ಕೋಸ್ಟ್ಗಾರ್ಡ್ಗೆ ಹಡಗಿನಲ್ಲಿದ್ದ ಸಿಬಂದಿ ಸಂದೇಶ ರವಾನಿಸಿದ ಕಾರಣ ರಕ್ಷಣೆ ಸಾಧ್ಯವಾಗಿದೆ.

ಹಡಗನ್ನು ದಡಕ್ಕೆ ಎಳೆದು ತರುವ ಪ್ರಯತ್ನ ನಡೆಸಲಾಗುತ್ತಿದೆ. ಆದರೆ ಮಳೆಯ ಕಾರಣ ಕಾರ್ಯಾಚರಣೆ ಸ್ವಲ್ಪ ವಿಳಂಬವಾಗುತ್ತಿದೆ ಎನ್ನಲಾಗಿದೆ.
ಪ್ರಿನ್ಸೆಸ್ ಮಿರಾಲ್ ಎಂಬುದು ಹಡಗಿನ ಹೆಸರಾಗಿದ್ದು ಹಡಗಿನ ಮಾಸ್ಟರ್ ಸಫ್ವಾನ್ ಕೈದೂನ್ ಅಬ್ದುಲ್ ಖಾದರ್, ಅಝಮ್ ಅಲ್ಮಾ ಸೊಹೇಲ್, ತುಮೇಹ್ ಮೊಹಮ್ಮದ್, ಅಲಿ ಬದ್ರ್ ಮೊಹಮ್ಮದ್, ಲಿವಾ ಮೈನಿ ಅಹ್ಮದ್, ಅಬ್ದುಲ್ಲ ಸಮೋತ್ ಉಸ್ಮಾನ್, ಅಲಿ ಝ್ವೆಝ್ಕೆ ಖಾಲೆದ್, ನಿಝಾರ್ ಅಬ್ದುಲ್ಲಾ, ಹಾರೂನ್ ಗಾಲಿಬ್, ಅಬ್ಬಾಸ್ ರಮಿ, ಅಬ್ದುಲ್ ಕರೀಮ್ ನಾಸಿರ್, ಮೊಹಮ್ಮದ್ ಜೌದ್ ಆದಿಲ್, ಅಬ್ರಾಹೀಂ ಮೊಹಮ್ಮದ್, ಅಬ್ದುಲ್ಲಾ ನಾದಿರ್, ಮುಸ್ತಫಾ ಝಕರಿಯಾ ಎಂಬ 15 ಮಂದಿ ಸಿರಿಯನ್ ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ ತಿಳಿದುಬಂದಿದೆ.
ಉಡುಪಿ: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ : ಅಪರಾಧಿಗೆ ಆಜೀವ ಕಾರಾಗೃಹ ಶಿಕ್ಷೆ ಹಾಗೂ ದಂಡ – Vishwanews24
