ಉಳ್ಳಾಲ: ಮಸೀದಿಗಳಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹ ಹೇಳಿಕೆ : ಹರೀಶ್ ಪೂಂಜಾರನ್ನು ಕೂಡಲೇ ಬಂಧಿಸಿ : ಪೊಲೀಸ್ ಕಮಿಷನರ್‌ಗೆ ಮನವಿ – vishwanews24

Featured, ದಕ್ಷಿಣ ಕನ್ನಡ

ಉಳ್ಳಾಲ: ಮಸೀದಿಗಳಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹ ಹೇಳಿಕೆ : ಹರೀಶ್ ಪೂಂಜಾರನ್ನು ಕೂಡಲೇ ಬಂಧಿಸಿ ತನಿಖೆಗೊಳಪಡಿಸಬೇಕು : ಪೊಲೀಸ್ ಕಮಿಷನರ್‌ಗೆ ಮನವಿ

ಉಳ್ಳಾಲ: ಮಸೀದಿಗಳಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹವಿದೆ ಎಂಬ ಹೇಳಿಕೆ ನೀಡಿರುವ ಶಾಸಕ ಹರೀಶ್ ಪೂಂಜಾರನ್ನು ಕೂಡಲೇ ಬಂಧಿಸಿ ತನಿಖೆಗೊಳಪಡಿಸಬೇಕು ಎಂದು ಮಂಗಳೂರು ಪೊಲೀಸ್ ಕಮಿಷನರ್‌ಗೆ ಉಳ್ಳಾಲ ಮೇಲಂಗಡಿ ಮೊಹಲ್ಲಾದ ಮುಸ್ಲಿಮರು ಮನವಿ ಸಲ್ಲಿಸಿದ್ದಾರೆ.

ಸಾಮಾಜಿಕ ನೇತಾರ ಫಾರೂಕ್ ಉಳ್ಳಾಲ್, ಮೇಲಂಗಡಿ ಮುಹಿಯುದ್ದೀನ್ ಜುಮ್ಮಾ ಮಸೀದಿಯ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಮಸೀದಿಯ ಇಮಾಮ್ ಮೌಲಾನ ಮುಹಮ್ಮದ್ ಅಲಿ ಮದನಿಯವರ ನೇತೃತ್ವದ ನಿಯೋಗ ಮನವಿ ಸಲ್ಲಿಸಿದೆ.

ಬಂಟ್ವಾಳ : ಮಸೀದಿ ಅವಹೇಳನ – ಹರೀಶ್ ಪೂಂಜ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಠಾಣೆಗೆ ಮನವಿ – vishwanews24

ಬಿಜೆಪಿಯ ಶಾಸಕ ಹರೀಶ್ ಪೂಂಜಾ ಪದೇ ಪದೇ ಮುಸ್ಲಿಮರನ್ನು ಅವಹೇಳನ ಮಾಡುವ, ಜನಸಾಮಾನ್ಯರಲ್ಲಿ ಮುಸ್ಲಿಂ ದ್ವೇಷ ತುಂಬುವ, ಮುಸ್ಲಿಮರ ಬಗ್ಗೆ ಅಪನಂಬಿಕೆ ಮೂಡಿಸುವ ಹೀನ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮುಸ್ಲಿಂ ಸಮಾಜದ ವಿರುದ್ಧ ಸುಳ್ಳಾರೋಪವನ್ನು ಹೊರಿಸುತ್ತಿರುವ ಹರೀಶ್ ಪೂಂಜಾರನ್ನು ಬಂಧಿಸಬೇಕು. ಜೊತೆಗೆ ಶಾಸಕ ಭರತ್ ಶೆಟ್ಟಿ, ಬಜರಂಗ ದಳದ ಶರಣ್ ಪಂಪ್‌ವೆಲ್ ಮತ್ತಿತರರು ಕೂಡಾ ಮುಸ್ಲಿಮರ ಮನುಸ್ಸುಗಳನ್ನು ಘಾಸಿಗೊಳಿಸುವ ಪ್ರಯತ್ನಕ್ಕೆ ಇಳಿದಿದ್ದಾರೆ. ಪೊಲೀಸ್ ಇಲಾಖೆಯು ಕೋಮುವಾದಿ ಶಕ್ತಿಗಳ ಪ್ರಚೋದನಾತ್ಮಕ ಹೇಳಿಕೆಗಳ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳದೇ ಲಘುವಾಗಿ ಪರಿಗಣಿಸುವುದರಿಂದಲೇ ಇವರ ಆಟಾಟೋಪ ಅಂಕೆ ಮೀರುತ್ತಿದೆ ಎಂದು ನಿಯೋಗ ಮನವಿ ಮಾಡಿಕೊಟ್ಟಿತ್ತು.

ನಿಯೋಗದಲ್ಲಿ ಪ್ರಮುಖರಾದ ನಝೀರ್ ಬಾರ್ಲಿ, ಹೊಸಪಳ್ಳಿ ಆಡಳಿತ ಸಮಿತಿಯ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಅದ್ದಾಮ, ಪ್ರಧಾನ ಕಾರ್ಯದರ್ಶಿ ಮೊಹಿಯುದ್ದೀನ್, ಆಡಳಿತ ಸಮಿತಿಯ ಪ್ರಮುಖರಾದ ರಹ್ಮಾನ್ ಹಳೆಕೋಟೆ, ಕಬೀರ್ ಬುಖಾರಿ, ಸವ್ವಾದ್ ಅಬ್ದುಲ್ಲಾ, ಮುಹಿಯುದ್ದೀನ್ ಗುಂಡಿಹಿತ್ಲು, ಹುಸೈನ್ ಮಿಲ್ಲತ್ ಉಪಸ್ಥಿತರಿದ್ದರು.

ಉದ್ಯಾವರ : ರೈಲಿನಿಂದ ಬಿದ್ದು ಅಪರಿಚಿತ ಮಹಿಳೆ ಸಾವು – vishwanews24

Leave a Reply