Featured

ಉಳ್ಳಾಲ :ಲೈನ್ ಆಫ್ ಮಾಡದೆ ಟ್ರಾನ್ಸ್ ಫಾರ್ಮರ್ ಏರಿದ ಲೈನ್ ಮೆನ್; ವಿದ್ಯುತ್‌ ಪ್ರವಹಿಸಿ ಸಾವು – vishwanews24

ಉಳ್ಳಾಲ :ಲೈನ್ ಆಫ್ ಮಾಡದೆ ಟ್ರಾನ್ಸ್ ಫಾರ್ಮರ್ ಏರಿದ ಲೈನ್ ಮೆನ್; ವಿದ್ಯುತ್‌ ಪ್ರವಹಿಸಿ ಸಾವು

ಉಳ್ಳಾಲ : ಜಿಒಎಸ್ ಆಫ್ ( ಗ್ರೂಪ್ ಆಪರೇಟೆಡ್ ಸ್ವಿಚ್ ಮಾಡದೆ ವಿದ್ಯುತ್ ಟ್ರಾನ್ಸ್ ಫಾರ್ಮರ್ (ಟಿಸಿ) ಏರಿದ ಮೆಸ್ಕಾಂ ಲೈನ್ ಮೆನ್ ಓರ್ವ ವಿದ್ಯುತ್ ಆಘಾತಕ್ಕೊಳಗಾಗಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ತಾಲೂಕಿನ ಉಚ್ಚಿಲ ನಯಾಪಟ್ಟಣ ಎಂಬಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಅಂಬಿಕಾರೋಡ್ ಪಿಲಾರು ನಿವಾಸಿ ಶೇಖ್ ಝಮೀ‌ರ್(49) ಮೃತಪಟ್ಟ ವ್ಯಕ್ತಿ.

ಉಚ್ಚಿಲ ನಯಾಪಟ್ಟದ ಟ್ರಾನ್ಸ್ ಫಾರ್ಮರ್ ನಲ್ಲಿ ದೋಷದ ಬಗ್ಗೆ ಮೆಸ್ಕಾಂಗೆ ದೂರು ಬಂದ ಹಿನ್ನೆಲೆಯಲ್ಲಿ ಶೇಖ್ ಝಮೀರ್ ಹಾಗೂ ಸಹೋದ್ಯೋಗಿ ಸಂಗಪ್ಪ ಎಂಬವರು ಇಂದು ಬೆಳಗ್ಗೆ ಸ್ಥಳಕ್ಕೆ ದುರಸ್ತಿಗೆ ಹೋಗಿದ್ದ ವೇಳೆ ಘಟನೆ ಸಂಭವಿಸಿದೆ. ಜಿಒಎಸ್ ಆಫ್ ಆಗಿದೆಯೆಂದು ಗ್ರಹಿಸಿ ಟ್ರಾನ್ಸ್ ಫಾರ್ಮರ್ ಏರಿದ ಝಮೀರ್ ವಿದ್ಯುತ್ ಆಘಾತಕ್ಕೊಳಗಾಗಿ ಕೆಳಗೆಸೆಯಲ್ಪಟ್ಟಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಝಮೀರನ್ನ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.

 

 

Vishwa News 24

Recent Posts

ಸಚಿವ ಸಂಪುಟ ವಿಸ್ತರಣೆ: ಎಸ್.ಮಲ್ಲಿಕಾರ್ಜುನ್ ಸೇರ್ಪಡೆ ; ಮಂಕಾಳ ವೈದ್ಯ ಹೆಸರು ಕೈಬಿಟ್ಟ ಎಐಸಿಸಿ – vishwanews24

ಸಚಿವ ಸಂಪುಟ ವಿಸ್ತರಣೆ: ಎಸ್.ಮಲ್ಲಿಕಾರ್ಜುನ್ ಸೇರ್ಪಡೆ ; ಮಂಕಾಳ ವೈದ್ಯ ಹೆಸರು ಕೈಬಿಟ್ಟ ಎಐಸಿಸಿ ಬೆಂಗಳೂರು: ಕರ್ನಾಟಕ ಸಚಿವ ಸಂಪುಟ…

51 minutes ago

ರೈಲ್ವೆ ಪ್ರಯಾಣಿಕರ ಗಮನಕ್ಕೆ : ಮಂಗಳೂರು-ಬೆಂಗಳೂರು ಹಲವು ರೈಲುಗಳ ಸಂಚಾರ ಬಂದ್ -vishwanews24

ಮಂಗಳೂರು-ಬೆಂಗಳೂರು ರೈಲು ಪ್ರಯಾಣಿಕರೇ ಗಮನಿಸಿ: ಹಲವು ರೈಲುಗಳ ಸಂಚಾರ ಬಂದ್ ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಎಡಕುಮೇರಿ ಮತ್ತು ಶಿರಿಬಾಗಿಲು…

3 hours ago

ಪಡುಬಿದ್ರಿ: ಹೆಜಮಾಡಿ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ ; ಟೋಲ್ ಗೇಟನ್ನು ತಕ್ಷಣ ತೆರವುಗೊಳಿಸಬೇಕೆಂದು ಆಗ್ರಹ – vishwanews24

ಪಡುಬಿದ್ರಿ: ಹೆಜಮಾಡಿ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ .. ಟೋಲ್ ಗೇಟ ನ್ನು ತಕ್ಷಣ ತೆರವುಗೊಳಿಸಬೇಕು ಎಂದು ಆಗ್ರಹ 15…

2 days ago

ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ: ಹಿಜಾಬ್ ಧರಿಸಲು ಅವಕಾಶ ಇಲ್ಲ : ಧಾರ್ಮಿಕ ಉಡುಪುಗಳ ಗೊಂದಲ ಬಗ್ಗೆ ಪ್ರಿಯಾಂಕ ಖರ್ಗೆ ಸ್ಪಷ್ಟನೆ – vishwanews24

ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ: ಹಿಜಾಬ್ ಧರಿಸಿ ಪರೀಕ್ಷೆ ಬರೆಯುವಂತಿಲ್ಲ : ಪ್ರಿಯಾಂಕ ಖರ್ಗೆ ಸ್ಪಷ್ಟನೆ ಬೆಂಗಳೂರು: ಕರ್ನಾಟಕದ ಪೊಲೀಸ್…

2 days ago

ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ ಪ್ರಧಾನಿ ಮೋದಿ – vishwanews24

ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ ಪ್ರಧಾನಿ ಮೋದಿ ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ವಿಶೇಷ ಸೇನಾ…

2 days ago

ಕಡಬ: ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆ – vishwanews24

ಕಡಬ: ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆ :ಭಕ್ತರಿಗೆ ಡ್ರಮ್‌ಗಳಲ್ಲಿ ಪರ್ಯಾಯ ಸ್ನಾನ ವ್ಯವಸ್ಥೆ ಕಡಬ:ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿರಂತರ ಸುರಿಯುತ್ತಿರುವ…

2 days ago