Featured

ಗಂಗೊಳ್ಳಿ:  ಟೈರ್ ಸ್ಫೋಟಗೊಂಡು ಮೀನು ಸಾಗಾಟದ ವಾಹನ ಪಲ್ಟಿ ; ಚಾಲಕ ಪ್ರಾಣಾಪಾಯದಿಂದ ಪಾರು – vishwanews24

ಗಂಗೊಳ್ಳಿ:  ಟೈರ್ ಸ್ಫೋಟಗೊಂಡು ಮೀನು ಸಾಗಾಟದ ವಾಹನ ಪಲ್ಟಿ ; ಚಾಲಕ ಪ್ರಾಣಾಪಾಯದಿಂದ ಪಾರು

ಗಂಗೊಳ್ಳಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿ – ಮುಳ್ಳಿಕಟ್ಟೆ ಫೈಓವರ್ ಮೇಲೆ ಮೀನು ಸಾಗಿಸುತ್ತಿದ್ದ ವಾಹನದ ಟೈರ್ ದಿಢೀರ್ ಬ್ಲಾಸ್ಟ್ ಆಗಿ ರಸ್ತೆಗೆ ಮುಗುಚಿ ಬಿದ್ದ ಘಟನೆ ನ.6 ಶುಕ್ರವಾರ ಸಂಭವಿಸಿದೆ.

ಮಹಾರಾಷ್ಟ್ರ ನೋಂದಣಿಯ ಈ ವಾಹನವು ಮುಂಬೈಯಿಂದ ಕುಂದಾಪುರದತ್ತ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಚಾಲನೆ ವೇಳೆಯಲ್ಲಿ ದಿಢೀರನೆ ಟೈರ್ ಸ್ಫೋಟಗೊಂಡಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ವಾಹನ ರಸ್ತೆಯಲ್ಲೇ ಪಲ್ಟಿಯಾಗಿದೆ. ಘಟನೆಯ ಸಮಯದಲ್ಲಿ ವಾಹನದಲ್ಲಿ ಚಾಲಕ ಒಬ್ಬರೇ ಇದ್ದು, ಯಾವುದೇ ಪ್ರಾಣಾಪಾಯ ಸಂಭವಿಸದೇ ಪವಾಡಸಾದೃಶ್ಯವಾಗಿ ಪಾರಾಗಿದ್ದಾರೆ.

 

ವಿಷಯ ತಿಳಿಯುತ್ತಿದ್ದಂತೆಯೇ ಗಂಗೊಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಹೈವೇ ಪೆಟ್ರೋಲ್ (ಹೆದ್ದಾರಿ ಗಸ್ತು) ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಬಳಿಕ ಕ್ರೇನ್ ಮೂಲಕ ಪಲ್ಟಿಯಾಗಿದ್ದ ವಾಹನವನ್ನು ಮೇಲೆತ್ತಿ ತೆರವುಗೊಳಿಸಲಾಯಿತು.

ಪೊಲೀಸರ ತ್ವರಿತ ಕಾರ್ಯಾಚರಣೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇತರ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

Vishwa News 24

Recent Posts

ಪೆರ್ಡೂರು ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣ: ಕರ್ತವ್ಯಲೋಪ ಎಸಗಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಮಾನತು – vishwanews24

ಪೆರ್ಡೂರು ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣ: ಕರ್ತವ್ಯಲೋಪ ಎಸಗಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಮಾನತು ಉಡುಪಿ: ಹಿರಿಯಡ್ಕದ ಪ್ರದೀಪ್…

12 minutes ago

ಸಿಲಿಕಾನ್ ಸಿಟಿಯಲ್ಲಿ ಬೆಚ್ಚಿ ಬೀಳಿಸುವ ಮರ್ಡರ್‌ : ಹೆಂಡತಿ ಮೇಲಿನ ಸಿಟ್ಟಿಗೆ ಪತಿಯಿಂದ ಏಳು ಜನರ ಕೊಲೆ – vishwanews24 https://wp.me/p9KQap-vaX

ಸಿಲಿಕಾನ್ ಸಿಟಿಯಲ್ಲಿ ಬೆಚ್ಚಿ ಬೀಳಿಸುವ ಮರ್ಡರ್‌ – ಹೆಂಡತಿ ಮೇಲಿನ ಸಿಟ್ಟಿಗೆ ಪತಿ ಏಳು ಜನರ ಕೊಲೆ ನಂದಿಬೆಟ್ಟದ ಕಾಡಿನಲ್ಲಿ…

2 hours ago

ಕನ್ನಡದ ಹಿರಿಯ ಸಾಹಿತಿ, ಭಾಷಾತಜ್ಞ ಪ್ರೊ. ಕೆ.ವಿ. ನಾರಾಯಣ ನಿಧನ – vishwanews24

ಕನ್ನಡದ ಹಿರಿಯ ಸಾಹಿತಿ, ಭಾಷಾತಜ್ಞ ಪ್ರೊ. ಕೆ.ವಿ. ನಾರಾಯಣ ನಿಧನ ಬೆಂಗಳೂರು: ಕನ್ನಡದ ಖ್ಯಾತ ಚಿಂತಕ, ಭಾಷಾವಿಜ್ಞಾನಿ ಮತ್ತು ಹಿರಿಯ…

3 hours ago

ಮಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನ ಬಂಧನ – vishwanews24

ಮಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನ ಬಂಧನ ; 3.ಕೆ.ಜಿ 800 ಗ್ರಾಂ ತೂಕದ ಅಕ್ರಮ ಗಾಂಜಾ ವಶ ಮಂಗಳೂರು:…

3 hours ago

ಮಂಗಳೂರು: ವಂದೇಭಾರತ್‌, ಎಕ್ಸ್‌ಪ್ರೆಸ್‌ ಸಹಿತ ಹಲವು ರೈಲುಗಳಿಗೆ ಜ. 1ರಿಂದ ಹೊಸ ಸಂಖ್ಯೆ ಜಾರಿ – vishwanews24

ಮಂಗಳೂರು: ರೈಲ್ವೇ ವಿಭಾಗಗಳ ವ್ಯಾಪ್ತಿ ಬದಲಾವಣೆ; ಮಂಗಳೂರು ಸಂಪರ್ಕಿಸುವ ಹಲವು ರೈಲುಗಳ ಸಂಖ್ಯೆಯಲ್ಲಿ ಬದಲಾವಣೆ ಮಂಗಳೂರು: ನೈಋತ್ಯ ರೈಲ್ವೇಯ ಮೈಸೂರು…

4 hours ago

ಆನೇಕಲ್ : ನಿರ್ಮಾಣ ಹಂತದ ಕಾಂಕ್ರೀಟ್ ಕಾಮಗಾರಿ ವೇಳೆ ದುರಂತ; ಮೂವರು ಕಾರ್ಮಿಕರು ಸಾವು – vishwanews24

ಆನೇಕಲ್ : ನಿರ್ಮಾಣ ಹಂತದ ಕಾಂಕ್ರೀಟ್ ಕಾಮಗಾರಿ ವೇಳೆ ದುರಂತ; ಮೂವರು ಕಾರ್ಮಿಕರು ಸಾವು ಆನೇಕಲ್: ನಿರ್ಮಾಣ ಹಂತದ ಕಾಂಕ್ರೀಟ್…

4 hours ago