ಉಳ್ಳಾಲ: ಉಳ್ಳಾಲ ಠಾಣೆಯ ನಾಲ್ವರು ಪೊಲೀಸ್ ಸಿಬ್ಬಂದಿಗಳು ವಾರೆಂಟ್ ಆರೋಪಿಯನ್ನು ಹಿಡಿಯಲು ಹೋದಾಗ ರೌಡಿಶೀಟರ್ ಪೊಲೀಸರಿಗೆ ತಲವಾರು ತೋರಿಸಿ ಪರಾರಿಯಾದ ಘಟನೆ ಉಳ್ಳಾಲದ ಧರ್ಮನಗರದಲ್ಲಿ ನಡೆದಿದೆ.
ಧರ್ಮನಗರ ನಿವಾಸಿ ಮುಕ್ತಾರ್ ಅಹ್ಮದ್ ಎಂಬಾತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದರು.
ಆರೋಪಿಯ ವಿರುದ್ದ ಹತ್ತಕ್ಕೂ ಅಧಿಕ ಕೇಸುಗಳಿದ್ದು, ಕೋರ್ಟಿಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಹೀಗಾಗಿ ಉಳ್ಳಾಲ ಪೊಲೀಸರು ಕೋರ್ಟಿನಿಂದ ವಾರಂಟ್ ಪಡೆದು ಇಂದು ಬೆಳಗ್ಗೆ ಬಂಧಿಸಲು ತೆರಳಿದ್ದು, ಧರ್ಮನಗರದ ಮನೆಗೆ ತೆರಳಿದ್ದಾಗ ತಲವಾರು ಹಿಡಿದೇ ಹೊರಬಂದ ಮುಕ್ತಾರ್, ಅಲ್ಲಿಂದ ತಲವಾರು ತೋರಿಸುತ್ತಲೇ ಹತ್ತಿರದ ನಿಜಾಮುದ್ದೀನ್ ಎಂಬವನ ಬೈಕಿನಲ್ಲಿ ಪರಾರಿಯಾಗಿದ್ದಾನೆ.
ಇನ್ನು ಪೊಲೀಸರು ಬೆನ್ನಟ್ಟಿದ್ದು ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಯ ರಸ್ತೆಯಲ್ಲಿ ಅಡ್ಡಹಾಕಿ ಬೈಕನ್ನು ಹಿಡಿದಿದ್ದಾರೆ. ಆದರೆ ಇದರ ನಡುವಲ್ಲೇ ಮುಕ್ತಾರ್ ಅಹ್ಮದ್ ಬೈಕಿನಿಂದ ಇಳಿದು ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದಾನೆ.
ಬೈಕಿನಲ್ಲಿದ್ದ ನಿಜಾಮುದ್ದೀನ್ ಪೊಲೀಸರು ಹಿಂಬಾಲಿಸಿ ಬಂದಿದ್ದನ್ನು ತಿಳಿದು ಎಸ್ಕೇಪ್ ಆಗುವ ಯತ್ನದಲ್ಲಿ ಮುಂದಿನಿಂದ ಬಂದ ವ್ಯಾಗನರ್ ಕಾರಿಗೆ ಡಿಕ್ಕಿಯಾಗಿ ರಸ್ತೆಗೆ ಬಿದ್ದಿದ್ದಾನೆ. ಈ ವೇಳೆ, ನಿಜಾಮುದ್ದೀನನನ್ನು ಬಂಧಿಸಿದ್ದು, ಈತ ಈ ಹಿಂದೆ ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ದಾವೂದ್ ಎಂಬಾತನ ಸಹೋದರನಾಗಿದ್ದಾನೆ ಎಂದು ತಿಳಿದು ಬಂದಿದೆ.
ಸಿದ್ದರಾಮಯ್ಯ ರಾಜೀನಾಮೆ ಕೊಡುವವರೆಗೂ ಗ್ಯಾರಂಟಿಯಿಲ್ಲ : ಶೋಭಾ ಕರಂದ್ಲಾಜೆ ಬೆಂಗಳೂರು: ಸಿದ್ದರಾಮಯ್ಯ ಹಳೆಯ ಹುಲಿ, ಯಾವಾಗ ಯಾವ ಆಟ ಆಡುತ್ತಾರೋ…
ರಾಜ್ಯದಲ್ಲಿ ವರದಿಯಾಗಿದ್ದ ಶಂಕಿತ ಎಬೋಲಾ ಪ್ರಕರಣದ ರಿಪೋರ್ಟ್ ನೆಗೆಟಿವ್ : ದಿನೇಶ್ ಗುಂಡೂರಾವ್ ಸ್ಪಷ್ಟನೆ ಬೆಂಗಳೂರು: ರಾಜ್ಯದಲ್ಲಿ ವರದಿಯಾಗಿದ್ದ ಶಂಕಿತ…
ಕಾಪು ಹಳೇ ಮಾರಿಯಮ್ಮ ದೇವಿಗೆ ಲಕ್ಷಪುಷ್ಪಾರ್ಚನೆ 135 ಕೆಜಿ ಕೆಂಪು ಕೇಪುಳ ಹೂ, 1,200ಕ್ಕೂ ಅಧಿಕ ಚೆಂಡು ಮಲ್ಲಿಗೆ ಸಮರ್ಪಣೆ…
ಭಾರತೀಯ ನೌಕಾಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಆಗಿ ಮಂಗಳೂರಿನ ನಿಶೆಲ್ ಫ್ಲೋರಾ ಆಲ್ಮೇಡಾ ಆಯ್ಕೆ ಮಂಗಳೂರು: ನಗರದ ಕುಲಶೇಖರದ ಕೊಂಗೂರು ನಿವಾಸಿಗಳಾದ…
ಶಿರ್ವ: ಆತ್ಮಹತ್ಯೆಗೆ ಪ್ರಚೋದನೆ ; ಮೂವರ ವಿರುದ್ಧ ದೂರು ದಾಖಲು ಶಿರ್ವ: ಪತ್ನಿ, ಆಕೆಯ ಸಹೋದರಿ ಮತ್ತು ಪತ್ನಿಗೆ ಇನ್‌ಸ್ಟಾಗ್ರಾಮ್…
ಹಳೆಯಂಗಡಿ: ನಿಂತಿದ್ದ ಬಸ್ಸಿಗೆ ಟಿಪ್ಪರ್ ಢಿಕ್ಕಿ; ನಾಲ್ವರು ವಿದ್ಯಾರ್ಥಿಗಳಿಗೆ ಗಾಯ ಹಳೆಯಂಗಡಿ: ಕಿನ್ನಿಗೋಳಿಯಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಸರ್ವಿಸ್ ಬಸ್ಸಿಗೆ…