ಶಿರ್ವ: ಪತ್ನಿ, ಆಕೆಯ ಸಹೋದರಿ ಮತ್ತು ಪತ್ನಿಗೆ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪರಿಚಯವಾದ ವ್ಯಕ್ತಿ ನಿರಂತರ ಅವಮಾನ, ಕಿರುಕುಳ, ಮಾನಸಿಕ ಹಿಂಸೆ ನೀಡಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ ಆರೋಪದ ಮೇಲೆ ಮೂವರ ಮೇಲೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಪು ಗ್ರಾಮದ ನಿವಾಸಿ ಸಮೀನಾ, ಸಹೋದರಿ ಆಸ್ಮಾ ಹಾಗೂ ಇನ್ನಾಗ್ರಾಂ ಖಾತೆಯಲ್ಲಿ ಪರಿಚಯವಾದ ವ್ಯಕ್ತಿ ಆಪಾದಿತರು. ಜಹೀರ್ ಅಬ್ದುಲ್ ಮಾಂಗಾವಕರ್ (42) ಆತ್ಮಹತ್ಯೆ ಮಾಡಿಕೊಂಡವರು.
ಇದನ್ನೂ ಓದಿ:
ಘಟನೆಯ ವಿವರ :
ಬೆಳಪು ಗ್ರಾಮದ ನಿವಾಸಿ ಸಮೀನಾ ಅವರಿಗೆ ಗೋವಾ ಮೂಲದ ಜಹೀರ್ ಅಬ್ದುಲ್ ಮಾಂಗಾವಕರ್ ಅವರೊಂದಿಗೆ 2012ರ ಫೆ.19 ರಂದು ಮೂಳೂರು ಜುಮ್ಮಾ ಮಸೀದಿಯಲ್ಲಿ ವಿವಾಹವಾಗಿದ್ದು, ದಾನಿಶ್ ಮತ್ತು ಜೈಡ್ ಎಂಬ ಇಬ್ಬರು ಮಕ್ಕಳಿದ್ದಾರೆ. ಸುಮಾರು ಐದು ವರ್ಷಗಳ ಬಳಿಕ ಸಮೀನಾ ತನ್ನ ಗಂಡನೊಂದಿಗೆ ವಾಸಿಸಲು ಇಷ್ಟವಿಲ್ಲವೆಂದು ಮಕ್ಕಳೊಂದಿಗೆ ಬಂದು ಬೆಳಪುವಿನ ತವರು ಮನೆಯಲ್ಲಿ ವಾಸ ಮಾಡಿಕೊಂಡು ಬೆಳಪು ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡಿಕೊಂಡಿದ್ದರು.
ಆ ಸಮಯದಲ್ಲಿ ಇನ್‌ಸ್ಟಾಗ್ರಾಮ್ ಖಾತೆಯ ವ್ಯಕ್ತಿಯೊಂದಿಗೆ ಸಮೀನಾಳಿಗೆ ಸಂಪರ್ಕ ಇರುವ ಬಗ್ಗೆ ಜಹೀರ್ ಗೆ ತಿಳಿದು ಬಂದಿರುತ್ತದೆ. ಇದನ್ನು ವಿರೋಧಿಸಿದ ಜಹೀರ್ ನನ್ನು ಸಮೀನಾಳು ಮನೆಯಿಂದ ಹೊರಗೆ ಹಾಕಿ ಮಕ್ಕಳನ್ನು ಸಂಪರ್ಕಿಸಲು ನಿರಾಕರಿಸಿದ್ದು, ಸಮೀನಾ ಮತ್ತು ಅವಳ ಸಹೋದರಿ ಆತ್ಮಾ ಹಾಗೂ ಇನ್‌ಸ್ಟಾಗ್ರಾಮ್ ಖಾತೆಯ ವ್ಯಕ್ತಿ ಸೇರಿಕೊಂಡು ಜಹೀರ್ ನಿಗೆ ನಿರಂತರ ಮಾನಸಿಕ ಹಿಂಸೆ ಕಿರುಕುಳ ನೀಡಿ ಅವಮಾನ ಮಾಡಿದ್ದರು.
ಇದನ್ನೂ ಓದಿ:
ಇದರಿಂದ ಮಾನಸಿಕವಾಗಿ ಮನನೊಂದ ಜಹೀರ್ ಅಬ್ದುಲ್ ಮಾಂಗಾವಕರ್ ಮೇ. 16 ರಂದು ಬೆಳಪುವಿನ ಜವನರಕಟ್ಟೆಯ ಪತ್ನಿ ಸಮೀನಾಳ ಮನೆಯ ಎದುರು ಇರುವ ಮಾವಿನ ಮರದ ಕೊಂಬೆಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಜಹೀರನು ಆತ್ಮಹತ್ಯೆ ಮಾಡಿಕೊಳ್ಳಲು ಸಮೀನಾ, ಆಕೆಯ ಸಹೋದರಿ ಆಸ್ಮಾ ಹಾಗೂ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪರಿಚಯವಾದ ವ್ಯಕ್ತಿ ಪ್ರಚೋದನೆ ಹಾಗೂ ಪ್ರೇರಣೆ ನೀಡಿರುವುದಾಗಿ ಅಫ್ಘಾನಾ ರಮಝಾನ್ ಕಾರ್ನೇಕರ್ ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ : ಯುವತಿ ನಾಪತ್ತೆ ಉಡುಪಿ : ಉಡುಪಿ ಸವೀಸ್ ಬಸ್ ನಿಲ್ದಾಣದ ಬಳಿ ಇರುವ ಹೊಲಿಗೆ ತರಬೇತಿ ಕೇಂದ್ರದಲ್ಲಿ…
ಪಡುಬಿದ್ರಿ : ವ್ಯಕ್ತಿ ನಾಪತ್ತೆ ಉಡುಪಿ: ಎಲ್ಲೂರು ಗ್ರಾಮ ಅದಮಾರು ಅಂಚೆ ಅಂಬೇಡ್ಕರ್ ರೋಡ್ ಆಶಿರ್ವಾದ ಹೌಸ್ ನಿವಾಸಿ ಹರ್ಷಲ್…
ತುಳು ಭಾಷೆಯ ಮಾನ್ಯತೆ ಕೇವಲ ಉಡುಪಿ-ದ.ಕ. ಜಿಲ್ಲೆಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ : ಪ್ರಮೋದ್ ಮಧ್ವರಾಜ್ ಉಡುಪಿ: ತುಳು ಭಾಷೆಗೆ ಅಧಿಕೃತ…
ಉಡುಪಿ ಜಿಲ್ಲಾಸ್ಪತ್ರೆ ಶೀಘ್ರ ಲೋಕಾರ್ಪಣೆಗೆ ಖಾದರ್ ಗೆ ಉಡುಪಿ ಶಾಸಕರ ಮನವಿ ಉಡುಪಿ: ನೂತನ ಜಿಲ್ಲಾಸ್ಪತ್ರೆಯನ್ನು ಸಾರ್ವಜನಿಕರ ಸೇವೆಗೆ ಶೀಘ್ರ…
ದುಬೈಯ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಅಮಾನವೀಯ ಕೊಲೆ : ಪತ್ನಿ , ಪುತ್ರ ನಾಪತ್ತೆ ; ಪ್ರಕರಣ ದಾಖಲು…
ಮಂಗಳೂರು : ಅಕ್ರಮವಾಗಿ ಜಾನುವಾರು ಸಾಗಾಟ: ಓರ್ವ ಬಂಧನ, ಮತ್ತೋರ್ವ ಪರಾರಿ ಮಂಗಳೂರು: ಅಕ್ರಮವಾಗಿ ಹಾಗೂ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು…