ಎಚ್‌ಡಿಕೆ 5 ವರ್ಷ ಸಿಎಂ ಆಗಲು ಕಾಂಗ್ರೆಸ್‌ ಬಿಡುವುದಿಲ್ಲ: ಜಗ್ಗೇಶ್‌

Featured, ರಾಜ್ಯ ನ್ಯೂಸ್

ಎಲ್ಲಾರು ಮಾಡುವುದು ಅಧಿಕಾರಕ್ಕಾಗಿ. ಒಂದು ಸಿನೆಮಾ ಪ್ಲಾಫ್‌ ಮಾಡಲು 25 ಸಿನೆಮಾ ಬಿಡುತ್ತಾರೆ. ರಾಜಕೀಯವೂ ಹಾಗೆಯೇ. ಕುಮಾರಸ್ವಾಮಿ ಐದು ವರ್ಷ ಅಧಿಕಾರ ಮಾಡಲು ಖಂಡಿತ ಕಾಂಗ್ರೆಸ್ ಬಿಡಲ್ಲ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮತ್ತು ನಟ ಜಗ್ಗೇಶ್‌ ತಿಳಿಸಿದ್ದಾರೆ.

ಬಿಎಸ್‌ವೈ ನಿವಾಸದ ಮುಂದೆ ಸುದ್ದಿಗಾರರೊಂದಿಗೆ ಮಾತನಾಡಿ, ಆಗಲೇ ಸಣ್ಣದಾಗಿ ಒಳಜಗಳ ಶುರುವಾಗಿದೆ. ವೇಣುಗೋಪಾಲ್ ಹೇಳಿಕೆಯನ್ನು ಎಲ್ಲರೂ ಗಮನಿಸಿರಬಹುದು. ಮುಂದಿನ ದಿನಗಳಲ್ಲಿ ಏನಾಗಬಹುದು ಎಂದು ಕಾದು ನೋಡಿ. ಮೈತ್ರಿ ಸರ್ಕಾರ ಎನ್ನುವುದಕ್ಕಿಂತ ಅಪವಿತ್ರ ಮೈತ್ರಿ ಎನ್ನುತ್ತೇನೆ. ಜನ ಸಿಂಗಲ್‌ ಲಾರ್ಜೆಸ್ಟ್‌ ಪಾರ್ಟಿಯನ್ನಾಗಿ ಮಾಡಿದ್ದರೂ ಮೈತ್ರಿ ಮಾಡಿಕೊಂಡಿದ್ದಾರೆ ಎಂದರು.

ನಾನು ಪ್ರಾಮಾಣಿಕವಾಗಿ ಹೇಳುತ್ತಿದ್ದೀನಿ. ನಾನು ಸ್ಪರ್ಧಿಸಿದಾಗ ಒಂದು ಪೈಸೆ ಹಂಚಿಲ್ಲ. ಆದರೆ, ಕಾಂಗ್ರೆಸ್ ನವವರು ಪ್ರತಿ ವೋಟಿಗೆ ಐದುನೂರು ಸಾವಿರ ರೂಪಾಯಿ ಹಂಚಿ ಗೆದ್ದಿದ್ದಾರೆ. ಸಿದ್ದರಾಮಯ್ಯ ಕೂಡ ಜನತಾದಳದಿಂದ ಬಂದವರೇ ಅಲ್ಲವೇ? ಹಾಗಾಗಿ ಅವರು ದೇವೇಗೌಡರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚನೆಗೆ ಮುಂದಾಗಿದ್ದಾರೆ. ಹಾಗಾಗಿ ಈ ಸರ್ಕಾರ ಹೆಚ್ಚು ದಿನ‌ ಉಳಿಯಲ್ಲ ಎಂದು ಹೇಳಿದರು.