ಎಣ್ಣೆ ಮತ್ತಿನಲ್ಲಿ ಪೊಲೀಸರೊಂದಿಗೆ ಕಿರಿಕ್: ಗಟ್ಟಿಮೇಳ ನಟ ರಕ್ಷಿತ್ ಸೇರಿ 7 ಮಂದಿ ವಿರುದ್ಧ FIR ದಾಖಲು – Vishwanews24

Featured, ರಾಜ್ಯ ನ್ಯೂಸ್

ಎಣ್ಣೆ ಮತ್ತಿನಲ್ಲಿ ಪೊಲೀಸರೊಂದಿಗೆ ಕಿರಿಕ್: ಗಟ್ಟಿಮೇಳ ನಟ ರಕ್ಷಿತ್ ಸೇರಿ 7 ಮಂದಿ ವಿರುದ್ಧ FIR ದಾಖಲು – Vishwanews24

ಬೆಂಗಳೂರು: ಕನ್ನಡ ಕಿರುತೆರೆ ಜನಪ್ರಿಯ ಧಾರಾವಾಹಿ ಗಟ್ಟಿಮೇಳ ಸೀರಿಯಲ್ ನಟ ರಕ್ಷಿತ್ ಅಂಡ್ ಗ್ಯಾಂಗ್ ಕುಡಿದು ರಂಪಾಟ ಮಾಡಿದ್ದು, ಅವರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಬೆಂಗಳೂರಿನ ಕೆಂಗೇರಿಯಲ್ಲಿರುವಂತ ಜಿಂಜರ್ ಲೇಕ್ ವ್ಯೂವ್ ಹೋಟೆಲ್ ಗೆ ತೆರಳಿದ್ದಂತ ಖಾಸಗಿ ಮನರಂಜನಾ ವಾಹಿನಿಯ ಸೀರಿಯಲ್ ತಂಡ ಊಟದ ವಿಚಾರಕ್ಕಾಗಿ ಹೋಟೆಲ್ ನವರೊಂದಿಗೆ ಕಿರಿಕ್ ಮಾಡಿಕೊಂಡಿದೆ. ಹೀಗಾಗಿ ಹೋಟೆಲ್ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.

ಕೊರೊನಾ ರೂಲ್ಸ್ ಸಡಿಲಿಕೆ : ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ – Vishwanews24

ಸ್ಥಳಕ್ಕೆ ಆಗಮಿಸಿದಂತ ಕೆಂಗೇರಿ ಪೊಲೀಸರಿಗೂ ಕುಡಿದ ಮತ್ತಿನಲ್ಲಿದ್ದಂತ ನಟ ರಕ್ಷಿತ್ ಸೇರಿದಂತೆ ಇತರರು ಅವಾಜ್ ಹಾಕಿದ್ದಾರೆ ಎನ್ನಲಾಗಿದೆ. ಹೊಯ್ಸಳ ಪೊಲೀಸರು ಪೊಲೀಸರಿಗೆ ಅವಾಜ್ ಹಾಕಿ, ಕಿರಿಕ್ ಮಾಡಿದಂತ ನಟ ರಕ್ಷಿತ್ ಸೇರಿದಂತೆ 7 ಮಂದಿಯನ್ನು ಜೀಪ್ ನಲ್ಲಿ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ.

ಈ ವಿಚಾರಕ್ಕಾಗಿ ಪೊಲೀಸರೊಂದಿಗೆ ಜಗಳ ಮಾಡಿದಂತ ಕಿರುತೆರೆ ನಟ ರಕ್ಷಿತ್, ರಂಜನ್, ರವಿಚಂದ್ರನ್, ಅಭಿಷೇಕ್, ರಾಕೇಶ್ ಕುಮಾರ್, ಅನುಷಾ ಸೇರಿದಂತೆ 7 ಮಂದಿ ವಿರುದ್ಧ ದೂರು ದಾಖಲಾಗಿರೋದಾಗಿ ತಿಳಿದು ಬಂದಿದೆ.

ಮಂಗಳೂರು : ಐಸಿಯು ರೋಗಿಗಳಿಗೆ ಚಿಕಿತ್ಸೆ ನೀಡುವ ಬದಲು ತಮ್ಮ ಕಂಪ್ಯೂಟರ್‌ನಲ್ಲಿ ವೀಡಿಯೋ ಗೇಮ್‌ನಲ್ಲಿ ಮಗ್ನರಾದ ವೆನ್ಲಾಕ್ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು – Vishwanews24

Leave a Reply