ಎನ್ಕೌಂಟರ್ ಇನ್ಮುಂದೆ ಕಾನೂನು ಆಗಬೇಕು : ಬಿಜೆಪಿ ಸಂಸದೆ ಲೊಕೆಟ್ ಚಟರ್ಜಿ -Vishwanews24
ನವದೆಹಲಿ: ಹೈದ್ರಾಬಾದ್ನಲ್ಲಿ ಪಶುವೈದ್ಯೆ ದಿಶಾರನ್ನ ಸಾಮೂಹಿಕ ಅತ್ಯಾಚಾರಗೈದು ಕೊಲೆ ಮಾಡಿದ ನಾಲ್ವರು ಆರೋಪಿಗಳನ್ನ ಎನ್ಕೌಂಟರ್ ಮಾಡಿದ ಪೊಲೀಸರ ಕ್ರಮವನ್ನು ಸ್ವಾಗತಿಸಿರುವ ಬಿಜೆಪಿ ಸಂಸದೆ ಲೊಕೆಟ್ ಚಟರ್ಜಿ, ಎನ್ಕೌಂಟರ್ ಇನ್ಮುಂದೆ ಕಾನೂನು ಆಗಬೇಕು ಅಂತಾ ಹೇಳಿದ್ದಾರೆ.
ನಮ್ಮ ದೇಶದ ಒಳಿತಿಗಾಗಿ ಪೊಲೀಸರು ಒಳ್ಳೆಯ ಹೆಜ್ಜೆ ಇಟ್ಟಿದ್ದಾರೆ. ಎನ್ಕೌಂಟರ್ ಸುದ್ದಿ ಓದಿದಾಗ ನನಗೆ ತುಂಬಾ ಖುಷಿಯಾಯ್ತು. ಅತ್ಯಾಚಾರ ಸಂತ್ರಸ್ತೆಯ ಆತ್ಮಕ್ಕೆ ಈಗ ಶಾಂತಿ ಸಿಕ್ಕಿರುತ್ತದೆ. ಆಕೆಯ ಕುಟುಂಬಸ್ಥರ ಮನಸ್ಸಿಗೂ ನೆಮ್ಮದಿ ಸಿಕ್ಕಿದೆ. ಈ ರೀತಿಯ ಎನ್ಕೌಂಟರ್ಗಳು ಇನ್ಮುಂದೆ ಕಾನೂನಾಗಬೇಕು.
ಇನ್ಮುಂದೆ ಅತ್ಯಾಚಾರದಂಥಹ ದುರ್ಘಟನೆಗಳು ನಡೆದಾಗ ಅಪರಾಧಿಗಳನ್ನ ಗಲ್ಲಿಗೇರಿಸಬೇಕು ಅಥವಾ ಘಟನೆ ನಡೆದ 7 ರಿಂದ 15 ದಿನಗಳ ಒಳಗೆ ಎನ್ಕೌಂಟರ್ ಮಾಡಿ ಕೊಲ್ಲಬೇಕು. ಎನ್ಕೌಂಟರ್ ಮಾಡಿರುವ ಹೈದ್ರಾಬಾದ್ ಪೊಲೀಸರಿಗೆ ನಾನು ಧನ್ಯವಾದ ತಿಳಿಸುತ್ತೇನೆ ಅಂತಾ ಸಂಸದೆ ಲೊಕೆಟ್ ಚಟರ್ಜಿ ಹೇಳಿದ್ದಾರೆ.
