ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಮತದಾನ ಹಕ್ಕು ನೀಡಬಾರದು : ಬಾಬಾ ರಾಮ್ದೇವ್ – Vishwanews24
ನವದೆಹಲಿ: ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಮತದಾನದ ಹಕ್ಕು ನೀಡಬಾರದು ಎಂದು ಯೋಗ ಗುರು ಬಾಬಾ ರಾಮ್ದೇವ್ ಹೇಳಿದ್ದಾರೆ.
ಈ ಕುರಿತು ಖಾಸಗಿ ಕಾರ್ಯಕ್ರಮವೊಂದರಲ್ಲಿ ಬುಧವಾರ ಮಾತನಾಡಿರುವ ಅವರು, ” ದೇಶದಲ್ಲಿ ಯಾರೆಲ್ಲ ಇಬ್ಬರಿಗಿಂತಲೂ ಹೆಚ್ಚು ಮಕ್ಕಳನ್ನು ಹೊಂದುವರೋ ಅವರಿಂದ ಮತದಾನದ ಹಕ್ಕನ್ನು ಕಿತ್ತುಕೊಳ್ಳಬೇಕು. ಅಂಥವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು. ಅವರ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಸೀಟು ನೀಡಬಾರದು. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ನೀಡಬಾರದು. ಅವರಿಗೆ ಸರ್ಕಾರಿ ನೌಕರಿ ನೀಡಬಾರದು,” ಎಂದು ಪರಿಹಾರ ಕ್ರಮಗಳನ್ನು ಸೂಚಿಸಿದ್ದಾರೆ.
ಹೀಗೆ ಮಾಡಿದರೆ ಜನಸಂಖ್ಯೆ ತನ್ನಿಂದತಾನೇ ನಿಯಂತ್ರಣಕ್ಕೆ ಬರಲಿದೆ ಎಂದು ರಾಮ್ದೇವ್ ಹೇಳಿದ್ದಾರೆ.
Yog Guru Ramdev: Those who have more than 2 children, their voting rights should be taken away & they shouldn't be allowed to contest elections. Don't let them use govt schools, hospitals, & don't give them govt jobs. Population will be controlled automatically. (23-1-19) pic.twitter.com/IQ0tYMbc1o
— ANI (@ANI) January 24, 2019
