ಎಲ್ಲಾ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸುವುದು ಆತ್ಮನಿರ್ಭರ ಯೋಜನೆಯ ಗುರಿ : ಪ್ರಧಾನಿ ಮೋದಿ – Vishwanews24

Featured, ರಾಷ್ಟ್ರ ನ್ಯೂಸ್

ಎಲ್ಲಾ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸುವುದು ಆತ್ಮನಿರ್ಭರ ಯೋಜನೆಯ ಗುರಿ : ಪ್ರಧಾನಿ ಮೋದಿ – Vishwanews24

ಹೊಸದಿಲ್ಲಿ: ಆತ್ಮನಿರ್ಭರ ಭಾರತ ನಿರ್ಮಾಣದ ಗುರಿ ಸಾಂಘಿಕ ಪ್ರಯತ್ನವಾಗಿದ್ದು, ಇಡೀ ದೇಶ ಈ ಗುರಿ ತಲುಪಲು ಒಂದಾಗಿ ಶ್ರಮಿಸಬೇಕಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕೇಂದ್ರ ಬಜೆಟ್ ಮತ್ತು ಆತ್ಮನಿರ್ಭರ ಭಾರತದ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ಮೋದಿ, ಆತ್ಮನಿರ್ಭರತೆ ದೇಶದ ತುರ್ತು ಅಗತ್ಯ ಎಂದು ಹೇಳಿದರು.

ಆತ್ಮನಿರ್ಭರತೆ ಎಂದರೆ ಎಲ್ಲಾ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸುವುದು. ಇದನ್ನು ಹಂತ ಹಂತವಾಗಿ ನಾವು ಸಾಧಿಸಬೇಕಿದೆ. ಇದಕ್ಕಾಗಿ ಒಗ್ಗಟ್ಟು ಪ್ರದರ್ಶನ ಅತ್ಯಗತ್ಯ ಎಂದು ಪ್ರಧಾನಿ ಮೋದಿ ಹೇಳಿದರು. ಭಾರತ 75ನೇ ಸ್ವಾತಂತ್ರ್ಯ ಸಂಭ್ರಮದ ಹೊಸ್ತಿಲಲ್ಲಿದ್ದು, ಭಾರತದ ಭವಿಷ್ಯವನ್ನು ಸದೃಢವನ್ನಾಗಿ ಮಾಡಲು ಆತ್ಮನಿರ್ಭರತೆ ಅನಿವಾರ್ಯವೂ ಹೌದು ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ :

ನಿನ್ನೆ(ಫೆ.1-ಮಂಗಳವಾರ) ಮಂಡಿಸಿದ ಕೇಂದ್ರ ಬಜೆಟ್ ಆಧುನಿಕ ಭಾರತ ನಿರ್ಮಾಣಕ್ಕಾಗಿ ಪೂರಕವಾಗಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು. ಭಾರತದ ಅರ್ಥವ್ಯವಸ್ಥೆ 2 ಕೋಟಿ 30 ಲಕ್ಷ ಕೋಟಿ ಗಾತ್ರದ್ದಾಗಿದ್ದು, ನಮ್ಮ ವಿಶಾಲ ದೇಶದ ಶಕ್ತಿ ಸಮಪನ್ಮೂಲಗಳ ಸದ್ಬಳಕೆಗೆ ನಿರ್ದಿಷ್ಟ ಗುರಿ ಇಟ್ಟುಕೊಳ್ಳಬೇಕಿದೆ. ಕೇಂದ್ರ ಬಜೆಟ್ ಈ ಗುರಿ ತಲುಪಲು ಇರುವ ಪ್ರಮುಖ ಸಾಧನ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

ಉತ್ತರ ಪ್ರದೇಶ : ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಮತ್ತು ಬಿಜೆಪಿ ಸಂಸದ ರೀಟಾ ಬಹುಗುಣ ಜೋಶಿಗೆ ಕೈತಪ್ಪಿದ ಬಿಜೆಪಿ ಟಿಕೆಟ್ – Vishwanews24

Leave a Reply