Featured

ಎಲ್ಲಾ ಮಾದರಿಯ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಹರ್ಮನ್‌ಪ್ರೀತ್ ಕೌರ್ – vishwanews24

ಎಲ್ಲಾ ಮಾದರಿಯ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಹರ್ಮನ್‌ಪ್ರೀತ್ ಕೌರ್

“ರಕ್ತ, ಬೆವರು ಹರಿಸಿ ಸೇವೆ ಸಲ್ಲಿಸಿದ್ದೇನೆ” : ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್

ದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಯಶಸ್ವಿ ನಾಯಕಿ ಹಾಗೂ ಅನುಭವಿ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್ ತಮ್ಮ ನಾಯಕತ್ವದ ಹುದ್ದೆಗೆ  ರಾಜೀನಾಮೆ ಘೋಷಿಸಿದ್ದಾರೆ. ಇಂದು(ಅ.6) ಅಧಿಕೃತವಾಗಿ ಈ ನಿರ್ಧಾರ ಪ್ರಕಟಿಸಿರುವ ಅವರು, ನಾಯಕತ್ವದ ಜವಾಬ್ದಾರಿಯಿಂದ ಕೆಳಗಿಳಿಯುತ್ತಿರುವುದಾಗಿ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ನಡೆದ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತ ತಂಡಕ್ಕೆ ಐತಿಹಾಸಿಕ ಚಿನ್ನದ ಪದಕ ಗೆದ್ದುಕೊಟ್ಟಿದ್ದ ಹರ್ಮನ್‌ಪ್ರೀತ್, ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ನಾಯಕತ್ವ ತ್ಯಜಿಸುವ ನಿರ್ಧಾರ ಕೈಗೊಂಡಿರುವುದು ಕ್ರಿಕೆಟ್ ವಲಯದಲ್ಲಿ ಅಚ್ಚರಿ ಮೂಡಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್
ತಮ್ಮ ನಿರ್ಧಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಹರ್ಮನ್‌ಪ್ರೀತ್ ಕೌರ್, ನಾಯಕತ್ವಕ್ಕೆ ರಾಜೀನಾಮೆ ನೀಡುವುದು ಸುಲಭದ ನಿರ್ಧಾರವಾಗಿರಲಿಲ್ಲ ಎಂದಿದ್ದಾರೆ.

“ರಕ್ತ, ಬೆವರು ಹರಿಸಿ ಸೇವೆ ಸಲ್ಲಿಸಿದ್ದೇನೆ”: “ಇಂದು ನಾನು ಭಾರತ ಮಹಿಳಾ ಕ್ರಿಕೆಟ್ ತಂಡದ ಎಲ್ಲಾ ಮಾದರಿಯ ನಾಯಕತ್ವದಿಂದ ಕೆಳಗಿಳಿಯುತ್ತಿದ್ದೇನೆ. ಇದು ನನಗೆ ಸುಲಭದ ನಿರ್ಧಾರವಾಗಿರಲಿಲ್ಲ. ಹಲವು ವರ್ಷಗಳ ನೆನಪುಗಳು, ತ್ಯಾಗಗಳು ಮತ್ತು ಭಾವನೆಗಳು ಇದರೊಂದಿಗೆ ಬೆಸೆದುಕೊಂಡಿವೆ. ಭಾರತೀಯ ಕ್ರಿಕೆಟ್‌ಗಾಗಿ ನನ್ನ ರಕ್ತ, ಬೆವರು ಹಾಗೂ ಸಮಯವನ್ನು ನೀಡಿದ್ದೇನೆ. ತಂಡದ ಹಿತಕ್ಕಾಗಿ ನನ್ನ ವೈಯಕ್ತಿಕ ಸಾಧನೆಗಳನ್ನು ಹಲವು ಬಾರಿ ಪಕ್ಕಕ್ಕಿಟ್ಟಿದ್ದೆ” ಎಂದು ಅವರು ಬರೆದುಕೊಂಡಿದ್ದಾರೆ.

“ನಾಯಕಿಯಾಗಿ ನಾನು ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಯಿತು. ಆದರೆ ಆ ಎಲ್ಲ ನಿರ್ಧಾರಗಳೂ ತಂಡದ ಒಳಿತಿಗಾಗಿ ಮಾತ್ರವಾಗಿದ್ದವು. ಅತ್ಯುನ್ನತ ಗೆಲುವುಗಳನ್ನು ಹಾಗೂ ಕಠಿಣ ಸೋಲುಗಳನ್ನು ನೋಡಿದ್ದೇನೆ. ಈಗ ತಂಡ ಉತ್ತಮ ಹಂತದಲ್ಲಿದೆ ಎಂಬ ತೃಪ್ತಿಯೊಂದಿಗೆ ನಾಯಕತ್ವದಿಂದ ದೂರವಾಗುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.

ಭಾರತೀಯ ಮಹಿಳಾ ಕ್ರಿಕೆಟ್‌ಗೆ ಐಸಿಸಿ ವಿಶ್ವಕಪ್ ಟ್ರೋಫಿ ತಂದುಕೊಟ್ಟ ಹೆಗ್ಗಳಿಕೆ ಹೊಂದಿರುವ ಹರ್ಮನ್‌ಪ್ರೀತ್, ತಮ್ಮ ಆಕ್ರಮಣಕಾರಿ ನಾಯಕತ್ವ ಮತ್ತು ನಿರ್ಣಾಯಕ ಇನ್ನಿಂಗ್ಸ್‌ಗಳಿಂದ ತಂಡಕ್ಕೆ ಹಲವು ಅವಿಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ನಾಯಕತ್ವದಿಂದ ಕೆಳಗಿಳಿದಿದ್ದರೂ ಅವರು ಓರ್ವ ಹಿರಿಯ ಆಟಗಾರ್ತಿಯಾಗಿ ಮತ್ತು ಬ್ಯಾಟರ್ ಆಗಿ ಭಾರತ ತಂಡದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ.

Vishwa News 24

Recent Posts

ಕಸದ ಚೀಲ – ವಿಭಿನ್ನ ಕಥೆಯ ಮೂಲಕ ಗಮನ ಸೆಳೆದ ಉಡುಪಿಯ ಯುವ ಬರಹಗಾರ ಸುಮಂತ್ ಗಾಣಿಗ – vishwanews24

‘ಕಸದ ಚೀಲ’ದ ಮೂಲಕ ವಿಭಿನ್ನ ಕಥನ – ಉಡುಪಿಯ ಸುಮಂತ್ ಗಾಣಿಗ ಅವರ ಬರವಣಿಗೆಗೆ ಮೆಚ್ಚುಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ…

34 minutes ago

ಉಡುಪಿ: ಅ.8 ರಂದು ನೇರ ಸಂದರ್ಶನ – vishwanews24

ಉಡುಪಿ: ಅ.8 ರಂದು ನೇರ ಸಂದರ್ಶನ      ಉಡುಪಿ: ನಗರದ ಶಾಂತ ಎಲೆಕ್ಟಿçಕಲ್ಸ್ ಪ್ರೆöÊ.ಲಿ., ಆಭರಣ ಜುವೆರ‍್ಸ್ ಹತ್ತಿರ, ಕಾರ್ಪೋರೇಶನ್ ಬ್ಯಾಂಕ್…

2 hours ago

ಹಳೆಕೋಟ–ಕಡವಾಡ ಕ್ರಾಸ್ ರಸ್ತೆ ದುರಸ್ತಿ ಆಗ್ರಹಿಸಿ ಜಿಲ್ಲಾಧಿಕಾರಿಗೆ ಕರವೇ ಮನವಿ – vishwanews24

ಹಳೆಕೋಟ–ಕಡವಾಡ ಕ್ರಾಸ್ ರಸ್ತೆ ದುರಸ್ತಿ ಆಗ್ರಹಿಸಿ ಜಿಲ್ಲಾಧಿಕಾರಿಗೆ ಕರವೇ ಮನವಿ ಕಾರವಾರ  ಇಳಕಲ್ ಕೈಗಾ ರಾಜ್ಯ ರಸ್ತೆಯ ಹಳೆಕೋಟದಿಂದ  ಕಡವಾಡ…

2 hours ago

ಪುತ್ತೂರು: ಹಿಂಸಾತ್ಮಕ ರೀತಿಯಲ್ಲಿ ಕೇರಳಕ್ಕೆ ಅಕ್ರಮವಾಗಿ ಜಾನುವಾರುಗಳ ಸಾಗಾಟ ; ಓರ್ವ ಅರೆಸ್ಟ್‌, ಇಬ್ಬರು ಪರಾರಿ – vishwanews24

ಪುತ್ತೂರು: ಹಿಂಸಾತ್ಮಕ ರೀತಿಯಲ್ಲಿ ಕೇರಳಕ್ಕೆ ಅಕ್ರಮವಾಗಿ ಜಾನುವಾರುಗಳ ಸಾಗಾಟ ; ಓರ್ವ ಅರೆಸ್ಟ್‌, ಇಬ್ಬರು ಪರಾರಿ ಪುತ್ತೂರು: ಯಾವುದೇ ಪರವಾನಿಗೆಯಿಲ್ಲದೆ…

2 hours ago

ದುರಸ್ತಿ ಕಾಮಗಾರಿ: ಅ.7ರಂದು ಹಂದಾಡಿ ರೈಲ್ವೆ ಗೇಟ್ ಬಂದ್ -vishwanews24

ದುರಸ್ತಿ ಕಾಮಗಾರಿ: ಅ.7ರಂದು ಹಂದಾಡಿ ರೈಲ್ವೆ ಗೇಟ್ ಬಂದ್ ಕುಂದಾಪುರ : ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ನಲ್ಲಿ ಅಗತ್ಯ ದುರಸ್ತಿ…

15 hours ago

ಕಾರ್ಕಳ: ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ: ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ…

23 hours ago