ಎಲ್ಲೂರು ದೇವಾಲಯಕ್ಕೆ ಕನ್ನ ಹಾಕಿದ ಕಳ್ಳರು : ವೀರಾಂಜನೆಯ ಸನ್ನಿಧಿಯಿಂದ ಕದ್ದೊಯ್ದರು ಲಕ್ಷಾಂತರ ಮೌಲ್ಯದ ಚಿನ್ನ ಬೆಳ್ಳಿ ಪರಿಕರ

Featured, ಉಡುಪಿ, ಜಿಲ್ಲೆ

 ಕಾಪು: ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ಆಡಳಿತಕ್ಕೊಳಪಟ್ಟ ವೀರಾಂಜನೇಯ ಸನ್ನಿಧಿಗೆ ಗುರುವಾರ ರಾತ್ರಿ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನ ಬೆಳ್ಳಿ ಪರಿಕರಗಳನ್ನು ಕದ್ದೊಯ್ದ ಘಟನೆ ಸಂಭವಿಸಿದೆ.

ಗುರುವಾರ ರಾತ್ರಿ ಸುರಿದ ಬಾರೀ ಮಳೆಯ ಲಾಭಪಡೆದ ಕಳ್ಳರು ಆಂಜನೇಯ ಗುಡಿಯ ಬಾಗಿಲ ಬೀಗ ಮುರಿದು ಒಳನುಗ್ಗಿದ ಕಳ್ಳರು ಆಂಜನೇಯ ವಿಗ್ರಹಕ್ಕೆ ಹೊದಿಸಲಾದ ಬೆಳ್ಳಿಯ ಕವಚ, ಪ್ರಭಾವಳಿ ಹಾಗು ಚಿನ್ನದ ಸರ, ಬೆಳ್ಳಿ ಕಾಲು ದೀಪಗಳನ್ನು ದೋಚಿಕೊಂಡು ಹೋಗಿದ್ದಾರೆ.ಶುಕ್ರವಾರ ಬೆಳಿಗ್ಗೆ ವಿರಾಂಜನೇಯ ಸನ್ನಿಧಿಗೆ ಅರ್ಚಕ ಸತ್ಯನಾರಾಯಣ ಆಚಾರ್ಯರವರು ಪೂಜೆಗಾಗಿ  ತೆರಳಿದಾಗ ಕಳ್ಳತನ ನಡೆದಿರುವ ವಿಚಾರ ಬೆಳಕಿಗೆ ಬಂದಿದೆ.

ಸ್ಥಳೀಯರಿಂದ ದೇವಸ್ಥಾನದ ಕೆರೆಯಲ್ಲಿ ಸೊತ್ತುಗಳ ಹುಡುಕಾಟ:
ಎಲ್ಲೂರು ಶ್ರೀ ವಿಶ್ವನಾಥ ಕ್ಷೇತ್ರವು ಇತಿಹಾಸ ಪ್ರಸಿದ್ದವಾಗಿದ್ದು ,ಈ ಬಾಗದಲ್ಲಿ ಯಾರೇ ಕಳ್ಳತನ ಮಾಡಿದರು ಸಿಕ್ಕಿ ಬೀಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬ ನಂಬಿಕೆ ಸ್ಥಳೀಯರದ್ದು, ಕಳ್ಳರು ಕಳ್ಳತನ ಮಾಡಿದ ಸುತ್ತುಗಳನ್ನು ಕೊಂಡೊಯ್ಯಲು ಸಾಧ್ಯವಾಗದೆ ಪಕ್ಕದಲ್ಲೇ ಇರುವ ದೇವಲದ ಕೆರಯಲ್ಲಿ ಎಸೆದು ಹೋಗಿರಲೂಬಹುದೆಂಬ ಸಂಶಯ ಕೂಡ ಸ್ಥಳೀಯರದ್ದಾಗಿದ್ದು, ಈ ನಿಟ್ಟಿನಲ್ಲಿ ಸ್ಥಳೀಯ ಯುವಕರು ಕೆರೆಗೆ ಹಾರಿ ಸೊತ್ತುಗಳ ಹುಡುಕಾಟ ನಡೆಸಿದ್ದಾರೆ. ಆದರೆ ಯಾವುದೇ ಸೊತ್ತುಗಳು ಕೆರೆಯಲ್ಲಿ ಪತ್ತೆಯಾಗಿಲ್ಲ.ಸ್ಥಳಕ್ಕೆ ಕಾಪು ವೃತ್ತ ನಿರೀಕ್ಷಕ ಹಾಲಮೂರ್ತಿರಾವ್ , ಪಡುಬಿದ್ರಿ ಪೊಲೀಸರು ,ಉಡುಪಿ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.