ಪಡುಬಿದ್ರಿ,: ಎಲ್ಲೂರು ವಿಶ್ವಕರ್ಮ ಸಮಾಜ ಸೇವಾ ಸಂಘವು ಸಾಕಷ್ಟು ಚಟುವಟಿಕೆಯುಕ್ತವಾಗಿದ್ದು, ನಡೆಸುವ ಧಾರ್ಮಿಕ ಚಟುವಟಿಕೆಯು ಸಂಘಟನಾ ಶಕ್ತಿಗೆ ಪೂರಕವಾಗಲಿದೆ ಸ್ವಂತ ನಿವೇಶನದಲ್ಲಿ ಸಮುದಾಯ ಭವನ ನಿರ್ಮಾಣ ಶೀಘ್ರ ಕೈಗೂಡಲಿ ಎಂದು ಬಂಟಕಲ್ಲು ಶ್ರೀ ವಿಶ್ವಕರ್ಮ ಸಂಘದ ಅಧ್ಯಕ್ಷರಾದ ಮುರಳೀಧರ ಆಚಾರ್ಯ ಇನ್ನಂಜೆ ಹೇಳಿದರು.
ಅವರು ಜ.೩೧ರಂದು ಎಲ್ಲೂರು ಕಂಚುಗರ ಕೇರಿಯ ಸ್ವಂತ ನಿವೇಶನದಲ್ಲಿ ನಡೆದ ವಿಶ್ವಕರ್ಮ ಸಮಾಜ ಸೇವಾ ಸಂಘ ರಿ. ಎಲ್ಲೂರು ಇದರ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಕಾಪು ದಂಡತೀರ್ಥ ಶಾಲೆಯ ಚಿತ್ರಕಲಾ ಶಿಕ್ಷಕಿ ಅನುಪಮಾ ದೇವರಾಜ ಆಚಾರ್ಯ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿನ ಆಚಾರ ವಿಚಾರವು ಕುಲದ ಶ್ರೇಷ್ಠತೆಗೆ ಮೌಲ್ಯ ನೀಡಲಿ ಎಂದು ಕರೆ ನೀಡಿದರು.
ಪಡುಬಿದ್ರಿ ಉದಯ ಪುರೋಹಿತ್ ಆಶೀರ್ವಚನ ನೀಡಿದರು. ನಿವೃತ್ತ ತಹಶೀಲ್ದಾರ್ ಗಣೇಶ್ ಪಿ. ಆಚಾರ್ಯ ಪಡುಬಿದ್ರಿ, ಶಿಲ್ಪಿ ಗಣಪತಿ ಆಚಾರ್ಯ ಶಂಕರಪುರ ಸಂಘಕ್ಕೆ ಮಾರ್ಗದರ್ಶನದ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ವೈ.ಸತೀಶ ಎಂ. ಆಚಾರ್ಯ, ಗೌರವಾಧ್ಯಕ್ಷರಾದ ವೈ. ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು.
ಕಾರ್ಯದರ್ಶಿ ವೈ.ಪ್ರಶಾಂತ್ ಆಚಾರ್ಯ ವರದಿ ವಾಚಿಸಿದರು. ಕೋಶಾಽಕಾರಿ ವೈ ಕಿಶೋರ್ ಆಚಾರ್ಯ ಆಯ ವ್ಯಯ ಮಂಡಿಸಿದರು. ಸಂಘಟನಾ ಕಾರ್ಯದರ್ಶಿ ವೈ. ವಿಜಯ ಆಚಾರ್ಯ ಉಚ್ಚಿಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಂಚುಗರ ಕೇರಿ: ಎಲ್ಲೂರು ವಿಶ್ವಕರ್ಮ ಸಂಘದ ವಿಶ್ವಕರ್ಮ ಪೂಜೆ
ಪಡುಬಿದ್ರಿ, ವಿಶ್ವಕರ್ಮ ಸಮಾಜ ಸೇವಾ ಸಂಘ ರಿ. ಎಲ್ಲೂರು ವತಿಯಿಂದ ಶ್ರೀ ವಿಶ್ವಕರ್ಮ ಪೂಜೆಯು ಉದಯ ಪುರೋಹಿತ್ ಪೌರೋಹಿತ್ಯದಲ್ಲಿ ಎಲ್ಲೂರು ಕಂಚುಗರ ಕೇರಿಯ ಸ್ವಂತ ನಿವೇಶನದಲ್ಲಿ ಜ.೩೧ರಂದು ಜರಗಿತು.
ಈ ಸಂದರ್ಭ ಸಂಘದ ಗೌರವಾಧ್ಯಕ್ಷ ವೈ. ರಾಘವೇಂದ್ರ ಆಚಾರ್ಯ, ಅಧ್ಯಕ್ಷ ವೈ ಸತೀಶ ಎಂ ಆಚಾರ್ಯ, ಕಾರ್ಯದರ್ಶಿ ವೈ. ಪ್ರಶಾಂತ್ ಆಚಾರ್ಯ, ಕೋಶಾಽಕಾರಿ ವೈ. ಕಿಶೋರ್ ಆಚಾರ್ಯ, ಗೌರವ ಸಲಹೆಗಾರ ವೈ. ವಾಸುದೇವ ಆಚಾರ್ಯ, ಪದಾಽಕಾರಿಗಳು, ಸದಸ್ಯರು, ಸಮಾಜ ಬಾಂಧವರು ಪಾಲ್ಗೊಂಡಿದ್ದರು.
ಕಾರ್ಕಳ: ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ ಕಾರ್ಕಳ: ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ…
ಕಾರ್ಕಳ: ನಾಪತ್ತೆಯಾಗಿದ್ದ ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ಕಾರ್ಕಳ: ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ…
ಕಿರುಕುಳ ಆರೋಪ : ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಬಳ್ಳಾರಿ: ಗಂಡನ ಕಿರುಕುಳ ತಾಳಲಾರದೆ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು…
ಮಂಗಳೂರಿನಿಂದ ಅಗತ್ತಿ ದ್ವೀಪಕ್ಕೆ ವಿಮಾನಯಾನ ಸೇವೆ ;ನೂತನ 'ಚಳಿಗಾಲದ ವೇಳಾಪಟ್ಟಿ ಪ್ರಕಟ ಮಂಗಳೂರು : ಕರಾವಳಿಯ ಪ್ರಯಾಣಿಕರಿಗೆ ದೇಶೀಯ ಹಾಗೂ…
ಕಾಂಗ್ರೆಸ್ನಿಂದ ಆಹ್ವಾನ ಬಂದಿರುವುದು ನಿಜ .. ಪಕ್ಷ ಬದಲಾವಣೆಯಂತಹ ನಿರ್ಧಾರವನ್ನು ಏಕಾಏಕಿ ತೆಗೆದುಕೊಳ್ಳಲು ಸಾಧ್ಯವಿಲ್ಲ .. 2028ರ ವಿಧಾನಸಭಾ ಚುನಾವಣೆಯಲ್ಲಿ…
ಉಡುಪಿ: ಕಾಮಗಾರಿ ಹಿನ್ನೆಲೆ ಸಂಚಾರಕ್ಕೆ ಬದಲಿ ಮಾರ್ಗ ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ತೆಂಕಪೇಟೆ ವಾರ್ಡಿನ ಬಡಗುಪೇಟೆ ರಸ್ತೆಯಲ್ಲಿ ಒಳಚರಂಡಿ…