ಎಲ್ಲ ಕಳ್ಳರೂ ಒಟ್ಟಾಗಿ ಮೋದಿ ವಿರುದ್ಧ ಮುಗಿಬೀಳುತ್ತಿದ್ದಾರೆ ; ಬುದ್ಧಿಜೀವಿಗಳ ವಿರುದ್ಧ ಟ್ವಿಟರ್‍ನಲ್ಲಿ ಅನಂತ್ ಕುಮಾರ್ ಹೆಗಡೆ ಕಿಡಿ
ಬೆಂಗಳೂರು : ಕಳೆದ ಕೆಲ ದಿನಗಳಿಂದ ಮೌನಕ್ಕೆ ಶರಣಾಗಿದ್ದ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಟ್ವೀಟರ್‌ನಲ್ಲಿ ಬುದ್ಧಿಜೀವಿಗಳ ವಿರುದ್ಧ ಕಿಡಿಕಾರಿದ್ದಾರೆ.
‘ನೋಟು ನಿಷೇಧ, ಜಿಎಸ್‌ಟಿಯಿಂದಾಗಿ ತಮ್ಮ ಕಳ್ಳ ವ್ಯವಹಾರ, ಕಪ್ಪು ಹಣ ಚಲಾವಣೆಗೆ ಧಕ್ಕೆ ಬಂದಿದ್ದರಿಂದ ಎಲ್ಲ ಕಳ್ಳರೂ ಒಟ್ಟಾಗಿ ಮೋದಿ ವಿರುದ್ಧ ಸಂಘಟಿತರಾಗುತ್ತಿದ್ದಾರೆ. ಒಂದು ಕಾಲದಲ್ಲಿ ಪರಸ್ಪರ ಮುಖ ನೋಡಿಕೊಳ್ಳದವರೂ ಇಂದು ಒಂದೇ ತಟ್ಟೆಯಲ್ಲಿ ಊಟ ಮಾಡುವಷ್ಟು ಆಪ್ತರಾಗಿ ಬಿಟ್ಟಿದ್ದಾರೆ,” ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, “ಮೋದಿಯವರನ್ನು ವಿರೋಧಿಸುವ ಗುಂಪು, ಅಧಿಕಾರದ ಅಮಲಿಗೆ ರಾಷ್ಟ್ರದ್ರೋಹಕ್ಕೆ, ಹಿಂದೂ ವಿರೋಧಕ್ಕೆ ಏನು ಬೇಕಾದರೂ ಮಾಡುವ ಸಮೂಹವಾಗಿದೆ. ಜಗತ್ತು ಭಾರತವನ್ನು ಒಪ್ಪಿಕೊಳ್ಳತ್ತಿರುವ ಈ ಸಮಯದಲ್ಲಿ ವಿದ್ರೋಹದ ಧ್ವನಿ ತಾರಕಕ್ಕೆ ಏರಿದೆ. ಈಗ ಜಾಗೃತ ರಾಷ್ಟ್ರವೊಂದೆ ನಮ್ಮನ್ನು ಕಾಪಾಡಬಲ್ಲದು, ಅದೊಂದೆ ಭಾರತವನ್ನು ಗೆಲ್ಲಿಸುತ್ತದೆ,” ಎಂದು ಹೇಳಿದ್ದಾರೆ.

