ಎಸ್ಡಿಪಿಐ ಕಾರ್ಯಕರ್ತ ಅಶ್ರಫ್ ಹತ್ಯೆ ಆರೋಪಿ ಭರತ್ಗೆ ಫೇಸ್ ಬುಕ್ ನಲ್ಲಿ ಜೀವ ಬೆದರಿಕೆ
ಮಂಗಳೂರು : ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ವರ್ಷದ ಹಿಂದೆ ಹತ್ಯೆಗೀಡಾಗಿದ್ದ ಎಸ್ ಡಿಪಿಐ ಕಾರ್ಯಕರ್ತ ಅಶ್ರಫ್ ಕಲಾಯಿ ಹತ್ಯೆ ಆರೋಪಿ ಭಜರಂಗದಳದ ಮುಖಂಡ ಭರತ್ ಕುಮ್ಡೇಲು ಗೆ ಫೇಸ್ ಬುಕ್ ನಲ್ಲಿ ಮಂಗಳೂರು ಮುಸ್ಲಿಮ್ಸ್ ಎಂಬ ಫೇಸ್ ಬುಕ್ ಪೇಜ್ ನಲ್ಲಿ ಜೀವ ಬೆದರಿಕೆ ಹಾಕಲಾಗಿದೆ. ಹತ್ಯೆ ಆರೋಪಿ ಜಾಮೀನು ಪಡೆದ ಬೆನ್ನಲ್ಲೇ ಇದೀಗ ಸಾಮಾಜಿಕ ತಾಣಗಳಲ್ಲಿ ಪ್ರತೀಕಾರದ ಬೆದರಿಕೆ ಹಾಕಲಾಗಿದೆ.
ಎಸ್.ಡಿ.ಪಿ.ಐ ಮುಖಂಡನಾಗಿದ್ದ ಅಶ್ರಫ್ ಕಲಾಯಿಯನ್ನು ಬಂಟ್ವಾಳ ತಾಲೂಕಿನ ಬೆಂಜನಪದವು ಎಂಬಲ್ಲಿ 2017 ಜೂ.21 ರಂದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಬಜರಂಗದಳದ ಪುತ್ತೂರು ಸಹಸಂಚಾಲಕ ಭರತ್ ಕುಮ್ಡೇಲ್ ಪ್ರಮುಖ ಆರೋಪಿಯಾಗಿದ್ದ. ಘಟನೆಗೆ ಸಂಬಂಧಿಸಿ ಭರತ್ ಸೇರಿ ಹಲವರ ಬಂಧನವಾಗಿತ್ತು. ಆದ್ರೆ 16 ತಿಂಗಳು ಕಳೆದರೂ ಪ್ರಮುಖ ಆರೋಪಿ ಭರತ್ ಗೆ ಜಾಮೀನು ಲಭಿಸಿರಲಿಲ್ಲ. ಇದೀಗ ಹೈಕೋರ್ಟ್ ಆರೋಪಿಗೆ ಜಾಮೀನು ನೀಡಿದೆ.
ಮಂಗಳೂರು ಮುಸ್ಲಿಮ್ಸ್ ಎಂಬ ಫೇಸ್ ಬುಕ್ ಪೇಜ್ ನಲ್ಲಿ “ಅನ್ಯಾಯವಾಗಿ ಕೊಂದ ನಮ್ಮ ಸಹೋದರನ ಸಾವಿಗೆ ಅನ್ಯಾಯವಾಗಲು ಬಿಡಲಾರೆವು. ನಿನ್ನ ಕೌಂಟ್ ಡೌನ್ ಶುರುವಾಯಿತು. ಸದ್ಯದಲ್ಲೇ ನಿನಗೆ ಚಟ್ಟ ಕಟ್ಟಲಿದ್ದಾರೆ ನೆನಪಿರಲಿ” ಎಂದು ಬಹಿರಂಗ ಕೊಲೆ ಬೆದರಿಕೆ ಹಾಕಲಾಗಿದೆ.
ಜಾಹೀರಾತುಗಳು


