ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಬೀದಿಗೆ ತಂದು ಅವಮಾನಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ , ಕಾಂಗ್ರೆಸ್‌ನಲ್ಲಿ ಅಗ್ರಗಣ್ಯ ನಾಯಕರಾಗಿದ್ದ ಹಿರಿಯ ನಾಯಕ ಕೃಷ್ಣ ಅವರ ಬಳಿ ಆಡಳಿತಾತ್ಮಕ ಸಲಹೆ ಕೇಳುವ ಮನಸ್ಸು ಬಿಜೆಪಿಗರಿಗೆ ಇಲ್ಲ. ಅವರ ಸಲಹೆ ಬಿಜೆಪಿಗೆ ಬೇಕಾಗಿಯೂ ಇಲ್ಲ. ಬಿಜೆಪಿಯ ಸಿದ್ಧಾಂತಗಳು ಕೃಷ್ಣರಿಗೆ ಅಪಥ್ಯವಾದವೇ ಅಥವಾ ಕೃಷ್ಣರೇ ಬಿಜೆಪಿಗೆ ಅಪಥ್ಯವಾದರೇ? ಎಂದು ಕಾಂಗ್ರೆಸ್ ಮಾರ್ಮಿಕವಾಗಿ ಟ್ವೀಟ್ ಮಾಡಿದೆ.
“ನನಗೆ 90 ವರ್ಷವಾಯ್ತು, ವಯಸ್ಸಿನ ಅರಿವು ನಮಗಿರಬೇಕು, 90ರ ಈ ವಯಸ್ಸಿನಲ್ಲಿ 50 ವರ್ಷ ವಯಸ್ಸಾದವರಂತೆ ನಟನೆ ಮಾಡಲು ಆಗುವುದಿಲ್ಲ. ಹೀಗಾಗಿ, ಕ್ರಮೇಣ ಸಾರ್ವಜನಿಕ ಜೀವನದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಎಸ್.ಎಂ.ಕೃಷ್ಣ ರಾಜಕೀಯದಿಂದ ನಿವೃತ್ತಯಾಗುತ್ತಿರುವುದಾಗಿ ಹೊಸ ವರ್ಷದ ಸಂದೇಶ ನೀಡುವ ಸಂದರ್ಭದಲ್ಲಿ ತಿಳಿಸಿದ್ದರು.
‘ನಿವೃತ್ತಿ ಆಗುತ್ತಿದ್ದೇನೆ ಎಂದರೆ ಸನ್ಯಾಸ ಪಡೆಯುತ್ತಿದ್ದೇನೆ ಎಂದಲ್ಲ. ಪಕ್ಷ ಅಥವಾ ನಾಯಕರು ಸಂಘಟನೆ ಮತ್ತು ಇತರ ವಿಚಾರಗಳಲ್ಲಿ ಸಲಹೆಗಳನ್ನು ಕೇಳಿದರೆ ನೀಡಲು ಸಿದ್ಧನಿದ್ದೇನೆ. ಆದರೆ ನಾನಾಗಿಯೇ ಮೇಲೆ ಬಿದ್ದು ಸಲಹೆ ನೀಡಲು ಹೋಗುವುದಿಲ್ಲ. ಹಳೇ ಮೈಸೂರು ಭಾಗದಲ್ಲಿ ಸಂಘಟನೆಯ ವಿಚಾರದಲ್ಲಿ ಸಲಹೆ ನೀಡಿದರೆ ಕೊಡುತ್ತೇನೆ’ ಎಂದಿದ್ದಾರೆ.
‘ನಾನಾಗಿಯೇ ರಾಜಕೀಯದಿಂದ ಹಿಂದಕ್ಕೆ ಸರಿಯುತ್ತಿರುವುದರಿಂದ ನನ್ನನ್ನು ಪಕ್ಷ ನಿರ್ಲಕ್ಷಿಸುತ್ತಿದೆ ಎನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…
ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…
ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…
ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…
ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…
ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…