ಜೋಹಾನ್ಸ್‌ಬರ್ಗ್: ಭಾರತೀಯ ಮೂಲದ 15ರ ಹರೆಯದ ಹುಡುಗಿಯೊಬ್ಬಳು ಮನರಂಜನಾ ಕೇಂದ್ರದಲ್ಲಿ ಗೋ-ಕಾರ್ಟ್‌ನಲ್ಲಿ ಕೂದಲು ಸಿಕ್ಕಿಹಾಕಿಕೊಂಡು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಕ್ರಿಸ್ಟನ್ ಗೋವೆಂದರ್ ಅವರು ಡರ್ಬನ್ ನ ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದಾರೆ. ಅವರ ಬೆನ್ನುಹುರಿಗೆ ಹಾನಿಯಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕ್ರಿಸ್ಟನ್ ಗೋವೆಂದರ್ ಕಳೆದ ಬುಧವಾರ ಗಾಯಗೊಂಡಿದ್ದಾರೆ. ಆಕೆಯ ಸೊಂಟದಿಂದ ಯಾವುದೇ ಚಲನೆ ಇಲ್ಲ ಎಂದು ವೈದ್ಯರು ತಿಳಿಸಿದ್ದರು ಎಂದು ಆಕೆಯ ತಂದೆ ವೆರ್ನಾನ್ ಗೋವೆಂದರ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತನ್ನ ಮಗಳು ಕೇಂದ್ರದಲ್ಲಿ ಹೆಲ್ಮೆಟ್ ಧರಿಸುವ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಿದ್ದಾಳೆ. ಅಲ್ಲದೆ ಅವಳ ಉದ್ದನೆಯ ಕೂದಲನ್ನು ಪೋನಿಟೇಲ್ ನಲ್ಲಿ ಕಟ್ಟಲಾಗಿತ್ತು ಎಂದು ಗೋವೆಂದರ್ ಹೇಳಿದರು.
ಗೋ ಕಾರ್ಟ್‌ನಲ್ಲಿನ ಉಪಕರಣಗಳು ದೋಷಯುಕ್ತವಾಗಿವೆ, ತಕ್ಷಣದ ನೆರವು ನೀಡಲು ವಿಫಲವಾಗಿದೆ ಎಂಬ ಗೋವೆಂದರ್ ಅವರ ಆರೋಪಗಳ ನಡುವೆ, ಘಟನೆ ನಡೆದ ಡರ್ಬನ್ ನ ಜನಪ್ರಿಯ ಗೇಟ್ ವೇ ಮಾಲ್ ನ ಮ್ಯಾನೇಜ್ ಮೆಂಟ್ ಯಾವುದೇ ಪ್ರತಿಕ್ರಿಯಿಸಲು ನಿರಾಕರಿಸಿದೆ.
ಸಚಿವರ ಮೇಲೆ ಖಾಸಗಿ ಸ್ಟಿಂಗ್ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ…
ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…
ಉಡುಪಿ: ಅ.9ರಂದು ಕುಂತಳನಗರದಲ್ಲಿ ಬೃಹತ್ ಉದ್ಯೋಗ ಮೇಳ, ಸ್ಟಡಿ ಅಬ್ರಾಡ್ ಎಕ್ಸ್ಪೋ; 2,500 ಉದ್ಯೋಗಾವಕಾಶಗಳ ನಿರೀಕ್ಷೆ ಉಡುಪಿ: ಉಡುಪಿ ಗ್ರಾಮೀಣ…
ಸುರತ್ಕಲ್ ಎನ್‌ಐಟಿಕೆಯಲ್ಲಿ ನಿವೃತ್ತ ಮಿಗ್-21 ಯುದ್ಧ ವಿಮಾನ ಅನಾವರಣ ಮಂಗಳೂರು: ಸುರತ್ಕಲ್‌ನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಕರ್ನಾಟಕ (ಎನ್‌ಐಟಿಕೆ)ಯ ಮುಂಭಾಗದಲ್ಲಿ…
ಡಿಜಿಟಲ್ ಜಗತ್ತಿಗೆ ತುಳು ಲಿಪಿಯ ಹೊಸ ಹೆಜ್ಜೆ: ‘ಕುರಲ್ ತುಳು ಟಚ್’ ಕೀಬೋರ್ಡ್ ಬಿಡುಗಡೆ ಮಂಗಳೂರು: ಕರಾವಳಿ ಕರ್ನಾಟಕದ ಹೆಮ್ಮೆಯ…
ಶಿರ್ವ : ಸೂಡ ಪರಿಸರದಲ್ಲಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರು, ಶಾಲಾ ಮಕ್ಕಳಲ್ಲಿ ಆತಂಕ ಶಿರ್ವ: ಸೂಡ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ…