Featured

ಎ. 1ರಿಂದ ಅಗತ್ಯ ಔಷಧಗಳ ಬೆಲೆ ಶೇ. 12ರಷ್ಟು ಏರಿಕೆ – Vishwanews24

ಜನಸಾಮಾನ್ಯರಿಗೆ ಮತ್ತೊಂದು ಶಾಕ್ – ಎ. 1ರಿಂದ ಅಗತ್ಯ ಔಷಧಗಳ ಬೆಲೆ ಶೇ. 12ರಷ್ಟು ಏರಿಕೆ

ಹೊಸದಿಲ್ಲಿ: ಈಗಾಗಲೇ ಅವಶ್ಯಕ ವಸ್ತುಗಳ ಬೆಲೆಯಿಂದ ಹೈರಾಣಾಗಿರುವ ಜನತೆ ಇನ್ನು ಔಷಧಗಳ ಬೆಲೆ ಏರಿಕೆಯ ಆಘಾತ ಎದುರಿಸಲಿದ್ದಾರೆ. ಅಗತ್ಯದ ಔಷಧಗಳ ಬೆಲೆ ಎ. 1ರಿಂದ ಶೇ. 12.12ರಷ್ಟು ಏರಿಕೆಯಾಗಲಿದೆ. ಇದು ಔಷಧಗಳ ಬೆಲೆಯಲ್ಲಿ ದಾಖಲೆಯ ಅತ್ಯಧಿಕ ಹೆಚ್ಚಳವಾಗಿದೆ.

ಶೆಡ್ಯೂಲ್ಡ್ ಔಷಧಗಳ ಬೆಲೆಯನ್ನು ಎ. 1ರಿಂದ ಶೇ. 12.12 ಏರಿಕೆ ಮಾಡಲು ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ (ಎನ್‌ಪಿಪಿಎ) ಸೋಮವಾರ ಅನುಮೋದನೆ ನೀಡಿದೆ.

ಇದರಲ್ಲಿ ನೋವು ನಿವಾರಕ, ಆಯಂಟಿ ಬಯೋಟಿಕ್, ಉರಿಯೂತ ನಿವಾರಕ ಔಷಧ, ಹೃದ್ರೋಗ ಔಷಧ ಸೇರಿದಂತೆ ರಾಷ್ಟ್ರೀಯ ಅಗತ್ಯದ ಔಷಧಗಳ ಪಟ್ಟಿಯ 800 ಔಷಧಗಳು ಒಳಗೊಳ್ಳಲಿವೆ. ಕಳೆದ ವರ್ಷ ಈ ಔಷಧಗಳ ಬೆಲೆಯನ್ನು ಶೇ. 10.76ರಷ್ಟು ಏರಿಕೆ ಮಾಡಲು ಎನ್‌ಪಿಪಿಎ ಅನುಮತಿ ನೀಡಿತ್ತು.

ಎನ್‌ಪಿಪಿಎ ಬೆಲೆ ನಿಯಂತ್ರಿಸುವ 800 ಔಷಧಗಳನ್ನು ಶೆಡ್ಯೂಲ್ಡ್ ಡ್ರಗ್ಸ್ ಎಂದು ವರ್ಗೀಕರಿಸಲಾಗುತ್ತದೆ. ನಾನ್ ಶೆಡ್ಯೂಲ್ಡ್ ಔಷಧಗಳ ಬೆಲೆಗಳು ಪ್ರಾಧಿಕಾರದ ನಿಯಂತ್ರಣದಲ್ಲಿ ಇರುವುದಿಲ್ಲ. ಅವುಗಳ ಬೆಲೆಯನ್ನು ವಾರ್ಷಿಕ ಗರಿಷ್ಠ ಶೇ. 10 ಹೆಚ್ಚಿಸಲು ಅವಕಾಶವಿದೆ.

800 ಔಷಧಗಳನ್ನು ಹೊರತುಪಡಿಸಿ ಇನ್ನುಳಿದ ಔಷಧಗಳ ಬೆಲೆ ಏರಿಕೆಗೂ ರಾಷ್ಟ್ರೀಯ ಔಷಧ ಪ್ರಾಧಿಕಾರ ಅನುಮತಿ ನೀಡಿದೆ. ಇತರ ಔಷಧಗಳ ಬೆಲೆ ಶೇಕಡಾ 10ರಷ್ಟು ಏರಿಕೆ ಮಾಡಲು ಅನುಮತಿ ನೀಡಿದೆ.

ಔಷಧಗಳ ಬೆಲೆ ವಿಪರೀತ ಏರಿಕೆಯ ಬಗ್ಗೆ ಕೇಂದ್ರ ಸರಕಾರ ಮಧ್ಯೆ ಪ್ರವೇಶಿಸಬೇಕು ಎಂದು ಅಖಿಲ ಭಾರತ ಔಷಧ ಕ್ರಿಯಾ ಜಾಲದ ಸಹ ಸಂಚಾಲಕಿ ಮಾಲಿನಿ ಐಸೋಲಾ ಅವರು ತಿಳಿಸಿದ್ದಾರೆ.

ಈ ರೀತಿ ಮತ್ತೆ ಮತ್ತೆ ಬೆಲೆ ಏರಿಕೆಯು ಅಗತ್ಯ ಔಷಧಗಳ ಬೆಲೆ ನಿಗದಿಯ ಉದ್ದೇಶವನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.

Vishwa News 24

Recent Posts

ಕಾರ್ಕಳ: ಉದ್ಯಮಿ ನೇಣು ಬಿಗಿದು ಆತ್ಮಹತ್ಯೆ – vishwanews24

ಕಾರ್ಕಳ: ಉದ್ಯಮಿ ಮಂಜುನಾಥ್ ಪೈ ನೇಣು ಬಿಗಿದು ಆತ್ಮಹತ್ಯೆ ಕಾರ್ಕಳ: ಜೋಡು ರಸ್ತೆಯ ಅಪಾರ್ಟ್‌ಮೆಂಟ್ ಕಟ್ಟಡದ ಕೆಳಭಾಗದಲ್ಲಿ ಉದ್ಯಮಿ ಮಂಜುನಾಥ್…

10 minutes ago

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ – vishwanews24

ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಕೈದಿ ಬಿಡುಗಡೆ ಮಾಡಿದ ಆರೋಪ : ಡಿಐಜಿ ಸೋಮಶೇಖರ್ ಬಂಧನ ಬೆಂಗಳೂರು:…

21 minutes ago

ಏಷ್ಯನ್‌ ಗೇಮ್ಸ್‌ ಪದಕ ವಿಜೇತರಿಗೆ ಸಿಎಂ ಅಭಿನಂದನೆ : ಚಿನ್ನ ಗೆದ್ದವರಿಗೆ 1 ಕೋಟಿ ನಗದು – vishwanews24

ಏಷ್ಯನ್‌ ಗೇಮ್ಸ್‌ ಪದಕ ವಿಜೇತರಿಗೆ ಸಿಎಂ ಅಭಿನಂದನೆ : ನೇರ ನೇಮಕಾತಿ , ನಗದು ಪುರಸ್ಕಾರ ಭಾರೀ ಹೆಚ್ಚಳ  ಬೆಂಗಳೂರು:…

30 minutes ago

ಬೆಂಗಳೂರು: ನಕಲಿ ಔಷಧಿ ದಂಧೆ: ನಗರದ ಮೂರು ಫಾರ್ಮಾಗಳ ಮೇಲೆ ಎಸ್‌ಐಟಿ ದಾಳಿ – vishwanews24

ನಕಲಿ ಔಷಧಿ ಖರೀದಿಸಿ ಮಾರಾಟ ಮಾಡಿದ್ದ ಫಾರ್ಮಾಗಳ ಮೇಲೆ SIT ದಾಳಿ; ನಕಲಿ ಮಾತ್ರೆಗಳು ಸೀಜ್ ಬೆಂಗಳೂರು: ನಕಲಿ ಔಷಧಿ ದಂಧೆ…

56 minutes ago

ಕಸದ ಚೀಲ – ವಿಭಿನ್ನ ಕಥೆಯ ಮೂಲಕ ಗಮನ ಸೆಳೆದ ಉಡುಪಿಯ ಯುವ ಬರಹಗಾರ ಸುಮಂತ್ ಗಾಣಿಗ – vishwanews24

‘ಕಸದ ಚೀಲ’ದ ಮೂಲಕ ವಿಭಿನ್ನ ಕಥನ – ಉಡುಪಿಯ ಸುಮಂತ್ ಗಾಣಿಗ ಅವರ ಬರವಣಿಗೆಗೆ ಮೆಚ್ಚುಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ…

2 hours ago

ಎಲ್ಲಾ ಮಾದರಿಯ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಹರ್ಮನ್‌ಪ್ರೀತ್ ಕೌರ್ – vishwanews24

ಎಲ್ಲಾ ಮಾದರಿಯ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಹರ್ಮನ್‌ಪ್ರೀತ್ ಕೌರ್ "ರಕ್ತ, ಬೆವರು ಹರಿಸಿ ಸೇವೆ ಸಲ್ಲಿಸಿದ್ದೇನೆ" : ಸಾಮಾಜಿಕ ಜಾಲತಾಣದಲ್ಲಿ…

2 hours ago