ಎ. 13ರಂದು ಮೋದಿ ಉಡುಪಿಗೆ ; ಕರಾವಳಿಯಲ್ಲಿ ಮತ್ತೊಮ್ಮೆ ಮೋದಿ ಹವ ; ಗರಿಗೆದರಿದ ಅಬ್ಬರದ ಚುನಾವಣಾ ಪ್ರಚಾರ – Vishwanews24
ಉಡುಪಿ: ಲೋಕಸಭಾ ಚುನಾ ವಣೆ ಪ್ರಚಾರಕ್ಕಾಗಿ ರಾಷ್ಟ್ರೀಯ ಅಧ್ಯಕ್ಷರ ಸಹಿತ ಸ್ಟಾರ್ ನಾಯಕರನ್ನು ಕರಾವಳಿಗೆ ಕರೆತರುವ ಪ್ರಯತ್ನದಲ್ಲಿ ವಿವಿಧ ರಾಜಕೀಯ ಪಕ್ಷಗಳು ತೊಡಗಿವೆ. ಇನ್ನು ಮೂರು ನಾಲ್ಕು ದಿನಗಳಲ್ಲಿ ಎಲ್ಲವೂ ಅಂತಿಮಗೊಳ್ಳಲಿದೆ.
ಲೋಕಸಭಾ ಚುನಾವಣೆ ಪ್ರಚಾರಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಎ. 13ರಂದು ಉಡುಪಿಗೆ ಆಗಮಿಸುವುದು ಖಚಿತವಾಗಿದೆ. ಮಾತ್ರವಲ್ಲ, ಚಿಕ್ಕಮಗಳೂರಿಗೆ ಎ. 15ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸಿ ಪ್ರಚಾರ ಕಾರ್ಯ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಅವರನ್ನು ಮಂಗಳೂರಿಗೆ ಕರೆತರುವ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆದಿದೆ. ಬಿಜೆಪಿಯು ಉಭಯ ಜಿಲ್ಲೆಗಳಲ್ಲಿ ರಾಷ್ಟ್ರೀಯ ನಾಯಕರಿಂದಲೇ ಪ್ರಚಾರ ಮಾಡಿಸಿ ರಂಗು ಮೂಡಿಸುವ ಉತ್ಸಾಹದಲ್ಲಿದೆ.
ಜಿಲ್ಲೆಯ ಎಂಜಿಎಂ ಕಾಲೇಜಿನ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದ್ದು ಸಮಯವಿನ್ನೂ ನಿರ್ಧಾರವಾಗಿಲ್ಲ. ಎರಡು ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೋದಿ ಅವರ ಕಾರ್ಯಕ್ರಮ ನಡೆಯಲಿದ್ದು, ಉಡುಪಿಯ ಕಾರ್ಯಕ್ರಮ ಉಡುಪಿ – ಚಿಕ್ಕಮಗಳೂರು, ದ.ಕ., ಶಿವಮೊಗ್ಗ, ಉ.ಕ. ಜಿಲ್ಲೆಯ ಆಂಶಿಕ ಭಾಗವನ್ನು ಒಳಗೊಂಡಿರುತ್ತದೆ ಎಂದು ಮೂಲಗಳು ತಿಳಿಸಿದೆ.
