ಏಕದಿನ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಆಸೀಸ್ ನಾಯಕ ಆಯರೋನ್ ಫಿಂಚ್ – Vishwanews24

Featured, ಅಂತಾರಾಷ್ಟ್ರೀಯ ನ್ಯೂಸ್

ಏಕದಿನ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಆಸೀಸ್ ನಾಯಕ ಆಯರೋನ್ ಫಿಂಚ್

ಮೆಲ್ಬರ್ನ್: ಆಸ್ಟ್ರೇಲಿಯಾ ಸೀಮಿತ ಓವರ್ ಗಳ ನಾಯಕ ಆಯರೋನ್ ಫಿಂಚ್ ಅವರು ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ರವಿವಾರ ನ್ಯೂಜಿಲ್ಯಾಂಡ್ ವಿರುದ್ಧ ತಾನು ಅಂತಿಮ ಏಕದಿನ ಪಂದ್ಯವಾಡಲಿದ್ದೇನೆ ಎಂದು ಬಲಗೈ ಆಟಗಾರ ಫಿಂಚ್ ಹೇಳಿದ್ದಾರೆ.

” ಕೆಲವು ಉತ್ತಮ ನೆನಪುಗಳೊಂದಿಗೆ ಇದೊಂದು ಅದ್ಭುತ ಸವಾರಿ. ಅದ್ಭುತ ಏಕದಿನ ತಂಡದ ಭಾಗವಾಗಲು ನಾನು ಅದೃಷ್ಟಶಾಲಿಯಾಗಿದ್ದೇನೆ.” ಎಂದು ಫಿಂಚ್ ಹೇಳಿದರು.

ಏಕದಿನ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಫಿಂಚ್, ತಾನು ಟಿ20 ಕ್ರಿಕೆಟ್ ನಲ್ಲಿ ಮುಂದುವರಿಯುದಾಗಿ ಹೇಳಿದ್ದಾರೆ. ಟಿ20 ತಂಡದ ನಾಯಕನಾಗಿ ಫಿಂಚ್ ಮುಂದುವರಿಯಲಿದ್ದಾರೆ.

“ಮುಂದಿನ ಏಕದಿನ ವಿಶ್ವಕಪ್‌ಗೆ ಸಿದ್ಧರಾಗಲು ಮತ್ತು ಗೆಲ್ಲಲು ಹೊಸ ನಾಯಕನಿಗೆ ಉತ್ತಮ ಅವಕಾಶವನ್ನು ನೀಡುವ ಸಮಯ ಇದು. ಈ ಹಂತದವರೆಗಿನ ನನ್ನ ಪ್ರಯಾಣಕ್ಕೆ ಸಹಾಯ ಮಾಡಿದ ಮತ್ತು ಬೆಂಬಲಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ.” ಎಂದು ಆಯರೋನ್ ಫಿಂಚ್ ಹೇಳಿದ್ದಾರೆ.

ಆರೋಗ್ಯದಲ್ಲಿ ಕಾಳಜಿ ವಹಿಸಿ..ನೋಡಿ ಇಂದಿನ ದಿನ ಭವಿಷ್ಯ.. ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

Leave a Reply