ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹಾಗೂ ಪಕ್ಷದ ವೈಭವಕ್ಕೆ ಎಲ್ಲವನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ಪ್ರಧಾನಿ ಮೋದಿ ಬೆಂಗಳೂರು ಭೇಟಿ ವಿಚಾರವಾಗಿ ಶುಕ್ರವಾರ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಪ್ರಗತಿ ಪ್ರತಿಮೆ ಅನಾವರಣ ಹಾಗೂ ಮೋದಿ ಕಾರ್ಯಕ್ರಮ, ಕಾಮಗಾರಿ, ವ್ಯವಸ್ಥೆಗೆ 48.44 ಕೋಟಿ ವೆಚ್ಚ ಮಾಡಿರುವ ಕುರಿತಾದ ಪ್ರಶ್ನೆಗೆ ಈ ರೀತಿಯಲ್ಲಿ ಉತ್ತರ ನೀಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಬರೆದ ಪತ್ರಕ್ಕೆ ಪ್ರಧಾನಿ ಮೋದಿ ಉತ್ತರ ಕೊಡುತ್ತಾರೆ ಎಂಬ ವಿಶ್ವಾಸವಿದೆ. ಇನ್ನೊಬ್ಬರು ಲಂಚದಿಂದ ಸಮಸ್ಯೆ ಆಗುತ್ತಿದೆ ಎಂದು ದಯಾ ಮರಣಕ್ಕೆ ಪತ್ರ ಬರೆದಿದ್ದಾರೆ. ಒಂದು ಭ್ರಷ್ಟ ಆಡಳಿತವನ್ನು ಸ್ವಚ್ಛ ಮಾಡಬೇಕು. ಆದರೆ ಮೋದಿ ತಮ್ಮ ವೈಭವಕ್ಕೆ, ಪಕ್ಷದ ವೈಭವಕ್ಕೆ ಎಲ್ಲವನ್ನೂ ಮಾಡಿಕೊಳ್ತಿದ್ದಾರೆ. ನಮ್ಮ ಪತ್ರಕ್ಕೆ ಉತ್ತರ ಬಂದಿಲ್ಲ ಅಂದ್ರೆ ಮುಂದೆ ಏನು ಮಾಡಬೇಕೋ ಮಾಡ್ತೇವೆ ಎಂದರು.
ಮಲ್ಪೆ: ಬೀಚ್ ಅಭಿವೃದ್ಧಿ ಸಮಿತಿಯಿಂದ ಹಿಂದೂ ರುದ್ರಭೂಮಿಯಲ್ಲಿ ಕಡು ಬಡವರಿಗೆ ಯಾವುದೇ ಶುಲ್ಕ ಸ್ವೀಕರಿಸುವುದಿಲ್ಲ..
ಗುಂಡಿ ಹೇಗೆ ಮುಚ್ಚುತ್ತಿದ್ದಾರೋ, ಭ್ರಷ್ಟಾಚಾರದ ವಿಚಾರಕ್ಕೆ ಏನು ಸಂದೇಶ ಕೊಟ್ಟು ಹೋಗ್ತಾರೆ ನೋಡ್ತೇವೆ. ಮುಂದಿನ ಹೋರಾಟದ ಬಗ್ಗೆ ಈಗಲೇ ಹೇಳಲ್ಲ. ಐದು ನಿಮಿಷಕ್ಕೆ ಊಟ ರೆಡಿ ಆಗತ್ತಾ? ಮಸಾಲೆ ರೆಡಿ ಮಾಡಬೇಕು ಕಟ್ಟಿಗೆ ರೆಡಿ ಮಾಡಬೇಕು ಎಂದರು.
ಪ್ರತಿಮೆ ನಿರ್ಮಾಣ ಏರ್ ಪೋರ್ಟ್ ಅಥಾರಿಟಿಯಿಂದ ಆಗಬೇಕಿತ್ತು ಎಂಬ ವಿಚಾರವಾಗಿ ಮಾತನಾಡಿ, ನಾನು ಮೊದಲೇ ಹೇಳಿದ್ದೆ, ಈಗ ಹೇಳ್ತಿರೋದಲ್ಲ. ಬೇಕಿದ್ರೆ ನನ್ನ ಬೈಟ್ ಪಾಯಿಂಟ್ಸ್ ತೆಗೆದು ನೋಡಲಿ. ಏರ್ ಪೋರ್ಟ್ ನವರೇ ಮಾಡ್ತಾ ಇದ್ರು, 50- 60 ಕೋಟಿ ಹಣ ಖರ್ಚು ಮಾಡುವುದು ಏರ್ ಪೋರ್ಟ್ ನವರಿಗೆ ದೊಡ್ಡ ವಿಚಾರ ಅಲ್ಲ. ಬಿಜೆಪಿಯವರು ಏನೇನೋ ಲೆಕ್ಕಾಚಾರ ಹಾಕಿಕೊಂಡು ಮಾಡ್ತಿದ್ದಾರೆ. ಏರ್ ಪೋರ್ಟ್ ಆವರಣ, ಅವರೇ ಮಾಡಬೇಕಿತ್ತು, ಇದು ಬೇಸಿಕ್ ಕಾಮನ್ ಸೆನ್ಸ್ ಎಂದರು.
ಸರ್ಕಾರದ ದುಡ್ಡನ್ನು ಹೇಗೆ ಉಳಿಸಬೇಕು ಬಳಸಬೇಕು ಅನ್ನೋದು ಬೇಸಿಕ್ ಕಾಮನ್ ಸೆನ್ಸ್. ಇವರು ಏನೋ ದೊಡ್ಡ ಹೆಸರು ಮಾಡಿಕೊಳ್ಳಬೇಕು ಅಂತ ಬಹಳ ಅರ್ಜೆಂಟ್ ನಲ್ಲಿದ್ದಾರೆ. ಪ್ರಧಾನಿ ಮೋದಿ ತಮ್ಮ ವೈಭವ ಹಾಗೂ ಪಾರ್ಟಿ ವೈಭವ ಅದಕ್ಕಾಗಿ ಎಷ್ಟು ಖರ್ಚಾಗ್ತಿದೆ ಅನ್ನೋದಕ್ಕೆ ನಿಮ್ಮ ಬಳಿಯೇ ಮಾಹಿತಿ ಇದೆ. ಏನು ವೈಭವ ಮಾಡಿಕೊಳ್ಳಲಿ ಎಷ್ಟೇ ಜನ ಕರೆಸಲಿ ಏನೇ ಮಾಡಿದ್ರು ಜನ ಇವರನ್ನು ಕಿತ್ತೊಗೆಯಬೇಕು ಅಂತ ಸಂಕಲ್ಪ ಮಾಡಿದ್ದಾರೆ ಎಂದು ಹೇಳಿದರು.
ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…
ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…
ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…
ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…
ಸಚಿವರ ಮೇಲೆ ಖಾಸಗಿ ಸ್ಟಿಂಗ್ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ…
ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…