Featured

ಮಲ್ಪೆ: ಬೀಚ್‌ ಅಭಿವೃದ್ಧಿ ಸಮಿತಿಯಿಂದ ಹಿಂದೂ ರುದ್ರಭೂಮಿಯಲ್ಲಿ ಕಡು ಬಡವರಿಗೆ ಯಾವುದೇ ಶುಲ್ಕ ಸ್ವೀಕರಿಸುವುದಿಲ್ಲ : ಪಾಂಡುರಂಗ ಮಲ್ಪೆ – Vishwanews24

ಮಲ್ಪೆ: ಬೀಚ್‌ ಅಭಿವೃದ್ಧಿ ಸಮಿತಿಯಿಂದ ಹಿಂದೂ ರುದ್ರಭೂಮಿಯಲ್ಲಿ ಕಡು ಬಡವರಿಗೆ ಯಾವುದೇ ಶುಲ್ಕ ಸ್ವೀಕರಿಸುವುದಿಲ್ಲ : ಪಾಂಡುರಂಗ ಮಲ್ಪೆ

ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಭಜನಾ ಮಂದಿರಗಳ ಹೆಸರಿಗೆ ಕಳಂಕ ತರುವ ಕೆಲವರ ದುರುದ್ದೇಶ ಖಂಡನೀಯ

ಮಲ್ಪೆ: ಬೀಚ್‌ ಆಭಿವೃದ್ಧಿ ಸಮಿತಿ ಬೀಚ್‌ನ ಎಲ್ಲ ಅಭಿವೃದ್ಧಿ ಕೆಲಸ ಹಾಗೂ ಹಿಂದೂ ರುದ್ರಭೂಮಿಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಇತ್ತೀಚೆಗೆ ನಗರಸಭಾ ಅಧಿವೇಶನದಲ್ಲಿ ಬೀಚ್‌ನ ನಿರ್ವಹಣೆಯ ಗುತ್ತಿಗೆ ಪಡೆದುಕೊಂಡ 5 ಭಜನಾ ಮಂದಿರಗಳ ವಿರುದ್ದ ನಗರಸಭಾ ಸದಸ್ಯರೋರ್ವರು ಸುಳ್ಳು ಆಪಾದನೆ ಮಾಡುತ್ತಿರುವುದು ಅವರ ಘನತೆಗೆ ತಕ್ಕುದಲ್ಲ.

ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಭಜನಾ ಮಂದಿರಗಳ ಹೆಸರಿಗೆ ಕಳಂಕ ತರುವ ಕೆಲವರ ದುರುದ್ದೇಶ ಖಂಡನೀಯ ಎಂದು ಬೀಚ್‌ ಆಭಿವೃದ್ಧಿ ಸಮಿತಿಯ ಅಧ್ಯಕ್ಷ ಪಾಂಡುರಂಗ ಮಲ್ಪೆ ಹೇಳಿದ್ದಾರೆ.

ಇಲ್ಲಿ ಕಾಲಿಡಲು ಹೆದರಿಕೆ

ಒಂದು ಕಾಲದಲ್ಲಿ ಮಲ್ಪೆ ಬೀಚ್‌ ಅಭಿವೃದ್ಧಿಯಾಗದೇ ಪ್ರವಾಸಿಗರು ಇಲ್ಲಿ ಕಾಲಿಡಲೂ ಹೆದರುವಂತಹ ಸಮಯ ಇತ್ತು. ಊರಿನ ಬೀಚ್‌ ಅಭಿವೃದ್ಧಿಯಾಗಬೇಕೆಂಬ ಉದ್ದೇಶದಿಂದ ಸ್ಥಳೀಯ ಭಜನಾ ಮಂದಿರದ ಸೇವಾ ಘಟಕವಾಗಿ ರಚಿಸಲ್ಪಟ್ಟ ಸಮಿತಿಯೇ ಬೀಚ್‌ ಅಭಿವೃದ್ಧಿ ಸಮಿತಿ.

ಸಮಸ್ಯೆ ನೂರಾರು, ಅಭಿವೃದ್ಧಿ ಹಿನ್ನಡೆ
1976ರವರೆಗೂ ಇಲ್ಲಿ ರಾತ್ರಿ ಲಾರಿಗಟ್ಟಲೆ ಮರಳು ಸಾಗಿಸಿ ಬೀಚ್‌ ಉದ್ದಕ್ಕೂ ಕಸ ತುಂಬಿದ ದೊಡ್ಡ ದೊಡ್ಡ ಹೊಂಡಗಳಿತ್ತು. ಭಜನಾ ಮಂದಿರದ ಪ್ರಯತ್ನದಿಂದ ಮರಳು ಸಾಗಟ ನಿಲ್ಲಿಸ ಲಾಯಿತು. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಅವರು ನಿರ್ಮಿಸಿ ಅರ್ಧಕ್ಕೆ ನಿಲ್ಲಿಸಲಾಗಿರುವ ಹೊಟೇಲನ್ನು ಸರಕಾರ ಹೊಟೇಲ್‌ ಮತ್ತು ಅದರ ಎದುರಿನ ರಸ್ತೆ ತುಂಡರಿಸಿ ಸಮುದ್ರತೀರದ ಉದ್ದಕ್ಕೂ ಸಾರ್ವಜನಿಕರು ಬಾರ ದಂತೆ ಅವರಣಗೋಡೆ ನಿರ್ಮಿಸಿ ಖಾಸಗಿಯವರಿಗೆ ನೀಡಲು ಹೊರಟಾಗ ಅದರ ವಿರುದ್ದ ಹೋರಾಟ ನಡೆಸಿದರ ಪರಿಣಾಮ ಇಂದು ಬೀಚ್‌ ಸಾರ್ವಜನಿಕರಿಗಾಗಿ ಉಳಿದುಕೊಂಡಿದೆ ಎನ್ನುತ್ತಾರೆ ಪಾಂಡುರಂಗ ಮಲ್ಪೆ.

ಮಂಗಳೂರು Airport : 2.01 ಕೋ.ರೂ. ಮೌಲ್ಯದ ಅಕ್ರಮ ಚಿನ್ನ ಸಾಗಾಟ.. ನಾಲ್ಕು ಮಂದಿ ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ :- Vishwanews24

ಮೂಲ ಸೌಕರ್ಯ

2008ರಲ್ಲಿ ಅಂದಿನ ನಗರಸಭಾ ಸದಸ್ಯ ಪಾಂಡುರಂಗ ಮಲ್ಪೆ ಅವರು ಪ್ರಯತ್ನ, ಕೆ. ರಘುಪತಿ ಭಟ್‌ ಅವರ ಮುಂದಾಳುತನದಲ್ಲಿ, ರಸ್ತೆ ಮತ್ತು ಪಾರ್ಕಿಂಗ್‌ ಪ್ರದೇಶದಲ್ಲಿ ಇಂಟರ್‌ಲಾಕ್‌, ಶೌಚಾಲಯ, ಸ್ನಾನಗೃಹ, ಗಾಂಧಿ ಪ್ರತಿಮೆ ನಿರ್ಮಾಣ, ವೇದಿಕೆ, ಹೈಮಾಸ್ಟ್‌ ದೀಪ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು.

ಸುರಕ್ಷೆಗೆ ಗಮನ

ಪ್ರವಾಸಿಗರ ಸುರಕ್ಷೆ ದೃಷ್ಟಿಯಿಂದ 8 ಮಂದಿ ಲೈಫ್‌ ಗಾರ್ಡ್‌, ಜೀವ ರಕ್ಷಕ ಸಾಧನ, ಸಿ. ಸಿ ಕೆಮರಾ, ಧ್ವನಿವರ್ಧಕ, ಸೂಚನೆ ನೀಡಲು ಮೋಟಾರ್‌ ಬೈಕ್‌, ಈಜಲು ಪ್ರತ್ಯೇಕ ಸ್ವಿಮ್ಮಿಂಗ್‌ ಝೋನ್‌, ಸೂಚನಾ ಫಲಕ, ಸ್ವಚ್ಚತಾ ಸಿಬಂದಿ, ಹಟ್‌, ಸ್ವಚ್ಚತಾ ವಾಹನ, ವಾಚ್‌ ಟವರ್‌ ನಿರ್ಮಿಸ ಲಾಗಿದೆ. ಅದರೂ ಜೀವರಕ್ಷಕರ ಎಚ್ಚರಿಕೆ ಧಿಕ್ಕರಿಸಿ ಅಥವಾ ಮದ್ಯಪಾನ ಮಾಡಿ ಅಪಾಯವನ್ನು ತಂದುಕೊಳ್ಳುತ್ತಿದ್ದಾರೆ.

ಮೂಡಬಿದಿರೆ : ರಾಜ್ಯ ಸರಕಾರ ರೈತರ ಬೇಡಿಕೆ ಈಡೇರಿಸಲು ಕ್ರಮ ವಹಿಸದಿದ್ದರೆ ನ. 28ರಂದು ಕಿಸಾನ್ ಘಟಕದಿಂದ ಪ್ರತಿಭಟನೆ: ಮಿಥುನ್ ರೈ – Vishwanews24

ಟೆಂಡೆರ್‌ ನಿಯಮದಂತೆ ದ್ವಿಚಕ್ರ ವಾಹನ ಸಹಿತ ಪ್ರತಿ 2 ಗಂಟೆಯಂತೆ ಪಾರ್ಕಿಂಗ್‌ ಶುಲ್ಕ ವಸೂಲು ಮಾಡಲು ಅವಕಾಶ ಇದೆ. ಇಡೀ ದಿನಕ್ಕೆ ಒಂದೇ ಶುಲ್ಕ ಸ್ವೀಕರಿಸಲಾಗುತ್ತದೆ. ಇದುವರೆಗೂ ದ್ವಿಚಕ್ರಕ್ಕೆ ವಾಹನ ಶುಲ್ಕ ಸ್ವೀಕರಿಸುವುದಿಲ್ಲ. ಪಾರ್ಕಿಂಗ್‌ ಜಾಗ ಚಿಕ್ಕದಾಗಿರುವ ಕಾರಣ ವಡಭಾಂಡೇಶ್ವರದ ಸ್ವಾಗತ ಕಮಾನಿ ನಿಂದ ಹನುಮಾನ್‌ ವಿಠೊಭ ಭಜನಾ ಮಂದಿರದವರೆಗೆ ಮತ್ತು ಶಿವ ಪಂಚಾಕ್ಷರಿ ಭಜನಾ ಮಂದಿರದ ರಸ್ತೆಯ ಎರಡೂ ಬದಿ ಪಾರ್ಕಿಂಗ್‌ ಶುಲ್ಕ ಸಂಗ್ರಹ ಮಾಡಲು ಟೆಂಡೆರ್‌ನಲ್ಲಿ ಅವಕಾಶ ಒದಗಿಸಲಾಗಿದೆ.

ಕಡು ಬಡವರಿಗೆ ಉಚಿತ ಸೇವೆ

ಪಾಳುಬಿದ್ದಿ ಹಿಂದೂ ರುದ್ರಭೂಮಿ ಯನ್ನು ಬೀಚ್‌ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಶಾಸಕರ ಮತ್ತು ನಗರ ಸಭೆಯ ನಿಧಿಯಿಂದ 2 ಲಕ್ಷ ರೂ. ವಿನಿಯೋಗಿಸಿ ಜುಲೈ ಒಂದ 2012ರಲ್ಲಿ ಸಾರ್ವಜನಿಕರ ಸೇವೆ ಒದಗಿಸಲಾಗಿತ್ತು. ಕೊರೋನ ಸಂದರ್ಭದಲ್ಲಿ ದೂರದ ಊರುಗಳಿಂದ ತಂದ ಶವಗಳಿಗೆ ಸಂಸ್ಕಾರ ಮಾಡಲಾಗಿದೆ. ಈಗಲೂ ಕಡು ಬಡವರಿಗೆ ಯಾವುದೇ ಶುಲ್ಕ ಸ್ವೀಕರಿಸುವುದಿಲ್ಲ. ಎಲ್ಲವೂ ಸಮಿತಿಯ ವತಿಯಿಂದ ಪಾವತಿ ಮಾಡಲಾಗುತ್ತದೆ.

ದತ್ತಿ ಇಲಾಖೆಯ 5 ಲಕ್ಷ ಅನುದಾನ ದಲ್ಲಿ ಸ್ವಾಗತ ಗೋಪುರ, ನಗರಸಭೆ ನಿಧಿಯಿಂದ ರೂ.5 ಲಕ್ಷ ವೆಚ್ಚದಲ್ಲಿ ಕಟ್ಟಿಗೆ ದಾಸ್ತಾನು ಕೊಠಡಿ ನಿರ್ಮಿಸಲಾಗಿದೆ. ಮುಂದೆ ರುದ್ರಭೂಮಿಯ ಅಭಿವೃದ್ಧಿಗೆ ಕರಾವಳಿ ಪ್ರಾಧಿಕಾರದಿಂದ 10ಲಕ್ಷ. ಸಮಾಜ ಕಲ್ಯಾಣ ಇಲಾಖೆಯಿಂದ 10ಲಕ್ಷ ಬಿಡುಗಡೆಯಾಗಿದೆ.

ಕಾಸರಗೋಡು: ದಂತ ವೈದ್ಯ ಎಸ್. ಕೃಷ್ಣಮೂರ್ತಿ ನಿಗೂಢ ಸಾವು ಪ್ರಕರಣ : ಐವರ ಬಂಧನ – Vishwanews24

Vishwa News 24

Recent Posts

ಕಟೀಲು ದೇವಿಗೆ ನೂತನ ಬ್ರಹ್ಮರಥ : 6 ಚಕ್ರಗಳ ಹೊಸ ರಥದ ನಿರ್ಮಾಣ – vishwanews24

ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…

1 day ago

ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ – vishwanews24

ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…

1 day ago

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ – vishwanews24

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…

1 day ago

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ – vishwanews24

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…

1 day ago

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ – vishwanews24

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್​​ ನೇತೃತ್ವದಲ್ಲಿ…

1 day ago

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ – vishwanews24

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…

1 day ago