ಐಎಸ್‌ಎಸ್‌ಎಫ್ ವಿಶ್ವಕಪ್ ನಲ್ಲಿ ಸ್ವರ್ಣ ಗೆದ್ದು ವಿಶ್ವದಾಖಲೆ ಬರೆದ ಭಾರತದ ಯುವ ಶೂಟರ್ ಮನು ಭಾಕರ್ -Vishwanews24
ಪುಟಿಯನ್,(ಚೀನಾ) : ಐಎಸ್‌ಎಸ್‌ಎಫ್ ವಿಶ್ವಕಪ್ ನಲ್ಲಿ ಭಾರತದ ಯುವ ಶೂಟರ್ ಮನು ಭಾಕರ್ ಸ್ವರ್ಣ ಗೆದ್ದಿದ್ದಾರೆ.
10 ಮೀ ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಜಯಿಸಿರುವ ಮನು ಭಾಕರ್ ಫೈನಲ್ ನಲ್ಲಿ ಒಟ್ಟು 244.7 ಪಾಯಿಂಟ್ ಗಳೊಂದಿಗೆ ಜೂನಿಯರ್ ವಿಭಾಗದಲ್ಲಿ ವಿಶ್ವ ದಾಖಲೆಯನ್ನು ಮುರಿದರು.
ಯಶಸ್ವಿನಿ ದೇಸ್ವಾಲ್ ಅಂತಿಮ ಸುತ್ತಿನಲ್ಲಿ 6ನೇ ಸ್ಥಾನ ಪಡೆದರು. ಸೆರ್ಬಿಯಾದ ಝೊರಾನಾ ಅರುನೋವಿಕ್ 241.9 ಪಾಯಿಂಟ್ ಗಳೊಂದಿಗೆ ಬೆಳ್ಳಿ ಗೆದ್ದರೆ, ಚೀನಾದ ಕ್ವಿಯಾನ್ ವಾಂಗ್ 221.8 ಅಂಕಗಳೊಂದಿಗೆ ಕಂಚು ಪಡೆದರು.
ಐಎಸ್‌ಎಸ್ ವಿಶ್ವಕಪ್ ನಲ್ಲಿ ಮಹಿಳಾ 10 ಮೀಟರ್ ಏರ್ ಪಿಸ್ತೂಲ್ ಚಿನ್ನದ ಪದಕ ಗೆದ್ದ ಹೀನಾ ಸಿಧು ನಂತರ ಭಾಕರ್ ಎರಡನೇ ಭಾರತೀಯ ಶೂಟರ್ ಎನಿಸಿಕೊಂಡರು.
ಈ ಶೂಟಿಂಗ್ ವಿಶ್ವಕಪ್ ನಲ್ಲಿ ಭಾರತದ ಪಾಲಿಗೆ ಒಲಿದ ಮೊದಲ ಬಂಗಾರದ ಪದಕವಾಗಿದೆ.
