ಐತಿಹಾಸಿಕ ದಾಖಲೆ ಬರೆದ ಕೆಜಿಎಫ್..

Featured, ರಾಜ್ಯ ನ್ಯೂಸ್, ಸಿನಿಮಾ
ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಐತಿಹಾಸಿಕ ದಾಖಲೆ ಬರೆದಿದ್ದು 200 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಚಿತ್ರ ಎಂಬ ಖ್ಯಾತಿಗೆ ಭಾಜನವಾಗಿದೆ.
ಕೆಜಿಎಫ್ ಚಿತ್ರ 17ನೇ ದಿನಕ್ಕೆ ವಿಶ್ವದಾದ್ಯಂತ 197.56 ಕೋಟಿ ರುಪಾಯಿ ಗಳಿಸಿತ್ತು. ಇನ್ನು 18ನೇ ದಿನಕ್ಕೆ ಚಿತ್ರ 200 ಕೋಟಿ ರುಪಾಯಿ ತಲುಪಿ ದಾಖಲೆ ಬರೆದಿದೆ.
ಕೆಜಿಎಫ್ ಸಿನಿಮಾ ಬಿಡುಗಡೆಗೊಂಡ 10 ದಿನದಲ್ಲಿ 150 ಕೋಟಿ ರೂಪಾಯಿಯನ್ನು ಗಳಿಸಿತ್ತು. ಈಗ 19ನೇ ದಿನಕ್ಕೆ ಬರೋಬ್ಬರಿ 200 ಕೋಟಿ ರೂ.ಗಳಿಕೆ ಕಂಡಿದೆ. ಅದರಲ್ಲೂ ಕರ್ನಾಟಕದಲ್ಲೇ 120 ಕೋಟಿ ಕಲೆಕ್ಷನ್ ಮಾಡಿದ್ದು, ಬಾಲಿವುಡ್ ಅಂಗಳವೊಂದರಲ್ಲೇ 37 ಕೋಟಿ ಬಾಚಿಕೊಂಡಿದೆ. ಇನ್ನು ಎರಡ್ಮೂರು ದಿನದಲ್ಲಿ ಅದು 50 ಕೋಟಿಗೆ ಮುಟ್ಟುವ ಸಾಧ್ಯತೆ ಇದೆ.
ಇನ್ನು ಅಮೆರಿಕದಲ್ಲಿ ಕೆಜಿಎಫ್ ಚಿತ್ರ ದೊಡ್ಡ ಸಾಧನೆ ಮಾಡಿದೆ. ಅಮೆರಿಕದಲ್ಲಿ ಚಿತ್ರ 5.31 ಕೋಟಿ ರುಪಾಯಿ ಗಳಿಕೆ ಮಾಡಿದ್ದು ಕನ್ನಡ ಚಿತ್ರವೊಂದು ಅಮೆರಿಕದಲ್ಲಿ ಮಾಡಿದ ಅತೀ ಹೆಚ್ಚು ಕಲೆಕ್ಷನ್ ಇದಾಗಿದೆ.