ಚೆನ್ನೈ: 14ನೇ ಆವೃತ್ತಿಯ ಐಪಿಎಲ್ ಗಾಗಿ ಚೆನ್ನೈನ ಖಾಸಗಿ ಹೋಟೆಲ್ ನಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ತಂಡದಲ್ಲಿ ಖಾಲಿ ಇರುವ ಕೆಲ ಸ್ಥಾನಗಳಿಗಾಗಿ ಎಂಟು ತಂಡಗಳು ಆಟಗಾರರನ್ನು ಆಯ್ಕೆ ಮಾಡುತ್ತಿವೆ.
ಕಳೆದ ಕೆಲವು ಸೀಸನ್ ನಲ್ಲಿ ಪಂಜಾಬ್ ವಿರುದ್ಧ ಆಡಿದ್ದ ಗ್ಲೆನ್ ಮ್ಯಾಕ್ಸ್ ವೆಲ್ ಭಾರಿ ಮೊತ್ತಕ್ಕೆ ಹರಾಜಾದರು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆರಂಭದಲ್ಲಿ ಬಿಡ್ಡಿಂಗ್ ಆರಂಭಿಸಿತು. ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪೈಪೋಟಿಗಿಳಿದವು.
ಎರಡು ಕೋಟಿ ರೂ. ಮೂಲ ಬೆಲೆಯ ಮ್ಯಾಕ್ಸ್ ವೆಲ್ ಅಂತಿಮವಾಗಿ ವಿರಾಟ್ ನಾಯಕತ್ವದ ಆರ್ ಸಿಬಿ ಗೆ ಬರೋಬ್ಬರಿ 14.25 ಕೋಟಿ ರೂ. ಗೆ ಮಾರಾಟವಾದರು.
ಆಲ್ ರೌಂಡರ್ ಮೊಯಿನ್ ಅಲಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 7 ಕೋಟಿ ರೂ. ಗೆ ಖರೀದಿಸಿತು.ಉಳಿದಂತೆ ಶಕೀಬ್ ಅಲ್ ಹಸನ್ ಅವರು 3.2 ಕೋಟಿ. ರೂ ಗೆ ಕೆಕೆಆರ್ ತಂಡಕ್ಕೆ ಸೇರ್ಪಡೆಯಾದರು.ಕಳೆದ ಬಾರಿ ರಾಜಸ್ಥಾನ ತಂಡವನ್ನು ಮುನ್ನಡೆಸಿದ್ದ ಸ್ಟೀವ್ ಸ್ಮಿತ್ ಅವರನ್ನು 2.20 ಕೋಟಿ ರೂ. ಗೆ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತು.
ನಾನು ಯಾವುದಕ್ಕೂ ಹೆದರುವುದಿಲ್ಲ ; ಡಿಸೆಂಬರ್‌ನಲ್ಲಿ ತಾಯ್ನಾಡಿಗೆ ಮರಳಲಿದ್ದೇನೆ : ಶೇಖ್ ಹಸೀನಾ ನವದೆಹಲಿ,:ನನ್ನನ್ನು ಬಂಧಿಸಬಹುದು ಅಥವಾ ಕೊಲ್ಲಬಹುದು, ಯಾವುದಕ್ಕೂ ನಾನು…
ಕೊಟೇಶ್ವರ ರಸ್ತೆ ಅಪಘಾತ : ಅತಿವೇಗ ಅಜಾಗರೂಕತೆಯ ಚಾಲನೆ ; ಬೈಕ್ ಸವಾರನ ಸಾವಿಗೆ ಕಾರಣನಾದ ಲಾರಿ ಚಾಲಕನ ಬಂಧನ ಉಡುಪಿ:…
ಮೈಸೂರು : ಅಕ್ಟೋಬರ್ 11ರಂದು ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ ಬೆಂಗಳೂರು/ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಕೊನೆಗೂ ದಿನಾಂಕ…
ಚೆಕ್ ಬೌನ್ಸ್ ಪ್ರಕರಣ : ಬಾಲಿವುಡ್ ನಟ ರಾಜ್‌ಪಾಲ್ ಯಾದವ್‌ಗೆ 3 ತಿಂಗಳ ಜೈಲು ಶಿಕ್ಷೆ ನವದೆಹಲಿ: ಚೆಕ್ ಬೌನ್ಸ್…
ರೈಲಿನಲ್ಲಿ ಸಂಚರಿಸುವ ಮುನ್ನ ಹೊಸ ನಿಯಮ ತಿಳ್ಕೊಳ್ಳಿ : ಇನ್ಮುಂದೆ ಮೊಬೈಲ್ನಲ್ಲಿ ಟಿಕಟ್ ತೋರಿಸಿದರೆ ದಂಡ ಫಿಕ್ಸ್ ನವದೆಹಲಿ :ಡಿಜಿಟಲ್…
ಸುರತ್ಕಲ್ : ಅಕ್ರಮವಾಗಿ ನೆಲೆಸಿದ್ದ 6 ಮಂದಿ ಬಾಂಗ್ಲಾದೇಶಿಗರ ಪತ್ತೆ , ಗಡಿಪಾರಿಗೆ ಪೊಲೀಸರ ಸಿದ್ಧತೆ ಮಂಗಳೂರು: ನಗರದ ಸುರತ್ಕಲ್ ಪೊಲೀಸ್…