ಐಪೋನ್ ಕೊಡಿಸಲಿಲ್ಲವೆಂದು ಮನೆ ಬಿಟ್ಟು ಹೋದ ಬಾಲಕ – Vishwanews24
ಐಪೋನ್ ಕೊಡಿಸಲಿಲ್ಲವೆಂದು ಮನೆ ಬಿಟ್ಟು ಹೋದ ಬಾಲಕ ; ಮಗನನ್ನು ನೆನೆದು ಕುಟುಂಬ ಕಣ್ಣೀರು
ಬಾಗಲಕೋಟೆ: ರೀಲ್ಸ್, ಗೇಮ್ಸ್ ಗೀಳಿಗೆ ಬಿದ್ದ ಬಾಲಕ ತಂದೆ ತಾಯಿ ಬಳಿ ಐಫೋನ್ ಕೊಡಿಸುವಂತೆ ಕೇಳಿದ್ದ ಅದಕ್ಕೆ ನಿರಾಕರಿಸಿದಕ್ಕೆ ಮನೆ ಬಿಟ್ಟು ಹೋಗಿದ್ದಾನೆ. ಕಾಣೆಯಾದ ಮಗನನ್ನು ನೆನೆದು ಕುಟುಂಬ ಕಣ್ಣೀರು ಇಡುತ್ತಿದೆ.
ಘಟನೆ ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ಗ್ರಾಮದಲ್ಲಿ ನಡೆದಿದೆ. ಶ್ರವಣಕುಮಾರ ಮನೆ ಬಿಟ್ಟು ಹೋದ ಬಾಲಕ. ಇತ ಒಂಬತ್ತನೇ ತರಗತಿ ಮುಗಿಸಿ ಇದೀಗ ಹತ್ತನೇ ತರಗತಿಗೆ ತೇರ್ಗಡೆಯಾಗಿದ್ದ. ಕಳೆದ ಶನಿವಾರ(ಏ.13) ಮನೆಯಲ್ಲಿದ್ದ 800 ರೂ. ತೆಗೆದುಕೊಂಡು ಮನೆಯಿಂದ ಹೋಗಿದ್ದಾನೆ.
ಮಾಲ್ಡೀವ್ಸ್ಗೆ ಅಗತ್ಯ ವಸ್ತುಗಳ ರಫ್ತಿಗೆ ಭಾರತ ಬಂದರು ನಿರ್ಬಂಧ – Vishwanews24
ಮನೆಯ ಹಿರಿಮಗ ಕಾಣೆಯಾಗಿದ್ದಕ್ಕೆ ಪೋಷಕರು ಕಂಗಾಲಾಗಿದ್ದು, ಶ್ರವಣಕುಮಾರನನ್ನ ನೆನೆದು ತಂದೆ-ತಾಯಿ, ಸಹೋದರ ಹಾಗೂ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಎಲ್ಲೇ ಇದ್ದರೂ ಮನೆಗೆ ಬಾ ಎಂದು ಪೋಷಕರು ಹಾಗೂ ಪ್ರೀತಿಯ ಅಜ್ಜ ಫೋಟೋ ಹಿಡಿದು ಕಣ್ಣೀರಿಡುತ್ತಿದ್ದಾರೆ.
