ಐಶ್ವರ್ಯಗೌಡ ವಂಚನೆ ಪ್ರಕರಣ : ಡಿ.ಕೆ.ಸುರೇಶ್ಗೆ ED ಸಮನ್ಸ್ – vishwanews24
ಐಶ್ವರ್ಯಗೌಡ ವಂಚನೆ ಪ್ರಕರಣ : ಡಿ.ಕೆ.ಸುರೇಶ್ಗೆ ED ಸಮನ್ಸ್
ಬೆಂಗಳೂರು: ಐಶ್ವರ್ಯಗೌಡ ವಂಚನೆ ಪ್ರಕರಣದಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಕೊಟ್ಟಿದೆ.
ಐಶ್ವರ್ಯಗೌಡ ಕೇಸ್ನಲ್ಲಿ ಈಗಾಗಲೇ ಶಾಸಕ ವಿನಯ್ ಕುಲಕರ್ಣಿ ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಡಿ.ಕೆ.ಸುರೇಶ್ಗೆ ಇ.ಡಿ ಶಾಕ್ ಕೊಟ್ಟಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಡಿಕೆ ಸುರೇಶ್, ಮಧ್ಯಾಹ್ನ 12-30 ಗಂಟೆಗೆ ಇ.ಡಿಯವರು ಬಂದು ಸಮನ್ಸ್ ನೀಡಿದ್ದಾರೆ. ನಾನು ಹೊರಗೆ ಹೋಗಿದ್ದೆ ಇಡಿಯವರು ಬಂದಿದ್ದಾರೆ ಎಂದು ಗೊತ್ತಾದ ಮೇಲೆ ಬಂದೆ. ಅವರು ಸಮನ್ಸ್ ಕೊಟ್ಟಿದ್ದಾರೆ. ಸಮನ್ಸ್ನಲ್ಲಿ ಯಾವ ಪ್ರಕರಣ ಅಂತ ಇಲ್ಲ. ಆದರೆ, ದಾಖಲಾತಿ ನೋಡಿದಾಗ ಈ ಪ್ರಕರಣ ಅಂತ ಗೊತ್ತಾಯ್ತು ಎಂದು ತಿಳಿಸಿದ್ದಾರೆ.
ಏನೇ ಆದ್ರೂ ನಾವು 2028ಕ್ಕೆ ಮತ್ತೆ ಪ್ರಮಾಣವಚನ ಸ್ವೀಕಾರ ಮಾಡ್ತೇವೆ : ಡಿ.ಕೆ ಶಿ – vishwanews24
ಗುರುವಾರ ಬನ್ನಿ ಅಂದಿದ್ದಾರೆ. ಆದರೆ ಪೂರ್ವ ನಿಯೋಜಿತ ಕಾರ್ಯಕ್ರಮ ಇದೆ. ಅದಕ್ಕೆ ಸೋಮವಾರ ಬರುತ್ತೇನೆ ಎಂದು ಮೌಕಿಕವಾಗಿ ತಿಳಿಸಿದ್ದೇನೆ. ಈಗ ಇ-ಮೇಲ್ ಮೂಲಕ ಅಧಿಕೃತವಾಗಿ ತಿಳಿಸುತ್ತಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
ನಾನು ಯಾವುದೇ ವ್ಯವಹಾರ ನಡೆಸಿಲ್ಲ. ಅವರು (ಐಶ್ವರ್ಯಗೌಡ) ನಮ್ಮ ಕ್ಷೇತ್ರದವರು ಒಂದೆರಡು ಕಾರ್ಯಕ್ರಮಕ್ಕೆ ಹೋಗಿದ್ದೆ. ನನ್ನ ತಂಗಿ ಅಂತಾ ಹೇಳಿಕೊಂಡು ಒಡಾಡುವುದರ ಬಗ್ಗೆ ನಾನೇ ದೂರು ಕೊಟ್ಟಿದ್ದೇನೆ. ಇ.ಡಿಯವರು 7-8 ದಾಖಲೆಗಳನ್ನು ಕೇಳಿದ್ದಾರೆ. ನನ್ನ ಬಳಿ ದಾಖಲೆ ಕೇಳಿದ್ದು ಅಸಂಬದ್ಧ. ಇ.ಡಿ ವಿಚಾರಣೆಗೆ ಹೋದಾಗ ಅಲ್ಲಿ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.
