ಐಸಿಸ್ ಉಗ್ರ ಸಂಘಟನೆಯನ್ನು ಹತ್ತಿಕ್ಕಿಲು ಇಡೀ ವಿಶ್ವವೇ ಒಂದಾಗಬೇಕು:ಡಿಸಿಎಂ ಪರಮೇಶ್ವರ್ – Vishwanews24

Featured, ರಾಜ್ಯ ನ್ಯೂಸ್

ತುಮಕೂರು : ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಪೋಟವನ್ನು ಇಡೀ ವಿಶ್ವವೇ ಖಂಡಿಸಿದೆ ಎಂದು ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಲಂಕಾದಲ್ಲಿ ನಡೆದ ಘಟನೆ ಮತ್ತೇ ಎಲ್ಲಿಯೂ ನಡೆಯಬಾರದು, ಈ ರೀತಿಯ ಕೃತ್ಯ ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು. ಬಾಂಬ್ ಸ್ಪೋಟದಲ್ಲಿ ಮೃತಪಟ್ಟ ರಮೇಶ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.

ಐಸಿಸ್ ಉಗ್ರ ಸಂಘಟನೆಯನ್ನು ಹತ್ತಿಕ್ಕಿಲು ಇಡೀ ವಿಶ್ವವೇ ಒಂದಾಗಬೇಕಿದೆ. ನಮ್ಮ ದೇಶ ಕೂಡ ಇಂತಹ ಸಂಘಟನೆಯನ್ನು ಹತ್ತಿಕ್ಕಲು ಈಗಾಗಲೇ ಒತ್ತಾಯಿಸಿದೆ ಎಂದರು.

ಇನ್ನು ಶ್ರೀಲಂಕಾದ ಕೊಲಂಬೊದಲ್ಲಿ ಚರ್ಚ್ ಹಾಗೂ ಹೋಟೆಲ್ ಗಳ ಮೇಲೆನಡೆದ ಸರಣಿ ಬಾಂಬ್ ಸ್ಪೋಟದಲ್ಲಿ ಇದುವರೆಗೂ 350 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.