ಒಂದು ದೇಶ, ಒಂದು ಚುನಾವಣೆ ದೇಶದ ಅಗತ್ಯ : ನರೇಂದ್ರ ಮೋದಿ -Vishwanews24

Featured, ರಾಷ್ಟ್ರ ನ್ಯೂಸ್

ಒಂದು ದೇಶ, ಒಂದು ಚುನಾವಣೆ ದೇಶದ ಅಗತ್ಯ : ನರೇಂದ್ರ ಮೋದಿ -Vishwanews24

ನವದೆಹಲಿ: ‘ಒಂದು ದೇಶ, ಒಂದು ಚುನಾವಣೆ ಎಂಬುದು ಕೇವಲ ಚರ್ಚೆ ಮಾತ್ರವಲ್ಲ. ಅದು ದೇಶದ ಅಗತ್ಯವಾಗಿದೆ,’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.

ವಿಧಾನದ ದಿನದ ಅಂಗವಾಗಿ ನಡೆದ ಅಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿರುವ ಪ್ರಧಾನಿ, ‘ಪ್ರತಿ ಕೆಲವು ತಿಂಗಳಿಗೆ, ದೇಶದ ಬೇರೆ ಬೇರೆ ಪ್ರದೇಶಗಳಲ್ಲಿ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಇದು ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಸಮಸ್ಯೆ ಬಗ್ಗೆ ಅಧ್ಯಯನ ನಡೆಯಬೇಕಿದೆ. ಇದಕ್ಕೆ ಅಧಿಕಾರಿಗಳು ಮಾರ್ಗದರ್ಶಕರಾಗಬಲ್ಲರು,’ ಎಂದು ಹೇಳಿದ್ದಾರೆ.

‘ಲೋಕಸಭೆ, ವಿಧಾನಸಭೆ ಮತ್ತು ಪಂಚಾಯತ್ ಚುನಾವಣೆಗಳಿಗೆ ಒಂದೇ ಮತದಾರರ ಪಟ್ಟಿ ಇರಬೇಕಾದ್ದನ್ನು ಪ್ರಧಾನಿ ಪ್ರತಿಪಾದಿಸಿದರು. ಪ್ರತ್ಯೇಕ ಪಟ್ಟಿಗಳು ಸಂಪನ್ಮೂಲಗಳ ವ್ಯರ್ಥ,’ ಎಂದು ಹೇಳಿದರು.