ಒಂದು ರೀತಿಯಲ್ಲಿ ನಮ್ಮದೂ ಸಮ್ಮಿಶ್ರ ಸರ್ಕಾರ ಇದ್ದಂತೆ ,ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲ : ವಿ.ಸೋಮಣ್ಣ -Vishwanews24

Featured

ಮೈಸೂರು: ನಮ್ಮದು ದೊಡ್ಡ ಪಕ್ಷ, ನಮ್ಮಲ್ಲಿ ಗೆದ್ದಿರುವವರು ಸಾಕಷ್ಟು ಶಾಸಕರಿದ್ದಾರೆ. ಒಂದು ರೀತಿಯಲ್ಲಿ ನಮ್ಮದೂ ಸಮ್ಮಿಶ್ರ ಸರ್ಕಾರ ಇದ್ದಂತೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು.

ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು ವೀರನಹೊಸಹಳ್ಳಿಯಲ್ಲಿ ಗುರುವಾರ ದಸರಾ ಗಜಪಯಣಕ್ಕೆ ಚಾಲನೆ ನೀಡಿ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಜಾಹಿರಾತು

ನಮ್ಮದು ಸಮ್ಮಿಶ್ರ ಸರಕಾರ ಇದ್ದಂತೆ ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲ, ಹಾಗಾಗಿ ಮುಖ್ಯಮಂತ್ರಿಗಳ ವಿವೇಚನೆಗೆ ತಕ್ಕಂತೆ ಮಂತ್ರಿಮಂಡಲ ರಚನೆ ಮಾಡಲಾಗಿದೆ ಎಂದರು.