Featured

ಓಂಕಾರದ ಹಿಂದೆ ಅಡಗಿದೆ ಈ ಸತ್ಯ..!

ಸಾಮಾನ್ಯವಾಗಿ ಎಲ್ಲಾ ಮಂತ್ರಗಳೂ ಓಂಕಾರದಿಂದ ಶುರುವಾಗುತ್ತವೆ. ಯೋಗದಲ್ಲೂ ಓಂಕಾರೋಪಾಸನೆ ಇದೆ. ಕೇವಲ ಓಂ ಎಂದು ದೀರ್ಘವಾಗಿ ಪಠಿಸುವುದರಿಂದಲೇ ಹಲವು ಲಾಭಗಳಿವೆ ಎಂದು ಯೋಗ ಗುರುಗಳು ಹೇಳುತ್ತಾರೆ. ಹಾಗೆ ಓಂಕಾರವನ್ನು ಪಠಿಸುವುದಕ್ಕೂ ಬೇರೆ ಬೇರೆ ವಿಧಾನಗಳಿವೆ. ಒಟ್ಟಿನಲ್ಲಿ ಭಾರತೀಯರಿಗೆ ಓಂಕಾರ ಬಹಳ ಪವಿತ್ರ.

ಜಗತ್ತು ಹುಟ್ಟಿದ್ದೇ ಓಂಕಾರದಿಂದ ಎಂಬ ವಾದವಿದೆ. ಇದನ್ನು ಕಾಸ್ಮಿಕ್ ಸೌಂಡ್ ಎಂದು ಕರೆಯುತ್ತಾರೆ. ಬಿಗ್ ಬ್ಯಾಂಗ್ ಥಿಯರಿಯ ಪ್ರಕಾರ ಜಗತ್ತು ಹುಟ್ಟುವುದಕ್ಕೆ ಓಂಕಾರವೇ ಕಾರಣವಂತೆ. ಅದನ್ನು ಪಕ್ಕಕ್ಕಿಟ್ಟು ನೋಡಿದರೂ, ಓಂಕಾರದಲ್ಲಿರುವ ಧ್ವನಿ, ತರಂಗ ಹಾಗೂ ನಾದಕ್ಕೆ ಭೌತಶಾಸ್ತ್ರೀಯ ಮಹತ್ವಗಳಿವೆ.

ಓಂಕಾರದಲ್ಲಿ ಉಕಾರ, ಅಕಾರ ಹಾಗೂ ಮಕಾರಗಳು ಸೇರಿರುವುದರಿಂದ ಅವುಗಳನ್ನು ಒಟ್ಟಿಗೇ ಉಚ್ಛಾರ ಮಾಡಿದಾಗ ಹೊಟ್ಟೆ, ಬೆನ್ನುಹುರಿ, ಗಂಟಲು, ಮೂಗು ಹಾಗೂ ಮೆದುಳಿನ ಭಾಗಗಳು ಕ್ರಿಯಾಶೀಲವಾಗುತ್ತವೆ. – ಆಗ ಹೊಟ್ಟೆಯಿಂದ ಶಕ್ತಿಯು ಮೆದುಳಿನವರೆಗೆ ಸಂಚರಿಸಿ, ಇಡೀ ದೇಹವನ್ನು ಚುರುಕುಗೊಳಿಸುತ್ತದೆ.
– ಇದರಿಂದ ಏಕಾಗ್ರತೆ ಹೆಚ್ಚುತ್ತದೆ. ಮನಸ್ಸಿಗೆ ಶಾಂತಿ ಸಿಗುತ್ತದೆ ಹಾಗೂ ಒತ್ತಡ ಕಡಿಮೆಯಾಗುತ್ತದೆ.
– ಎಲ್ಲ ಲೌಕಿಕ ಯೋಚನೆಗಳೂ ಹೊರಟುಹೋಗಿ ಮನಸ್ಸು ಆನಂದದಲ್ಲಿ ಮುಳುಗುತ್ತದೆ. ಈ ಬಗ್ಗೆ ವೈಜ್ಞಾನಿಕ ಅಧ್ಯಯನಗಳೂ ನಡೆದಿವೆ. – ಯಾವತ್ತೂ ಓಂಕಾರವನ್ನು ಪಠಿಸದೆ ಇದ್ದವರ ಮೆದುಳಿನ ತರಂಗಗಳನ್ನು ಅಧ್ಯಯನ ಮಾಡಿ, ನಂತರ ಅವರಿಗೆ ನಿಯಮಿತವಾಗಿ ಓಂಕಾರ ಪಠಿಸಲು ಹೇಳಿ, ನಂತರ ಅವರ ಮೆದುಳಿನ ತರಂಗವನ್ನು ಅಧ್ಯಯನ ಮಾಡಿದಾಗ ಅವರಲ್ಲಿ ಏಕಾಗ್ರತೆ, ಮಾನಸಿಕ ಶಾಂತಿ ಹೆಚ್ಚಿರುವುದು ಮತ್ತು ಒತ್ತಡ ಕಡಿಮೆಯಾಗಿರುವುದು ಕಂಡುಬಂದಿದೆ.
– ಓಂಕಾರವನ್ನು ಪಠಿಸುವುದರಿಂದ ರಕ್ತದೊತ್ತಡ ಕೂಡ ಕಡಿಮೆಯಾದ ಉದಾಹರಣೆಯಿದೆ.
– ಮನುಷ್ಯನ ಶಾರೀರಿಕ ಹಾಗೂ ಮಾನಸಿಕ ಸ್ವಾಸ್ಥ್ಯವನ್ನು ಹೆಚ್ಚಿಸುವ ಶಕ್ತಿ ಓಂಕಾರಕ್ಕಿದೆ ಎಂದೇ ಯೋಗಿಗಳು ಇದರ ಪಠಣಕ್ಕೆ ಧಾರ್ಮಿಕ ಲೇಪನ ಮಾಡಿರಿಸಿರಬಹುದು.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago