ಉಡುಪಿ: ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಸರ್ವಮೂಲ ಗ್ರಂಥ, ಹಂಸ ಮಂತ್ರಗಳಿಂದ ಮುದ್ರಿತವಾದ 100 ಕೆ.ಜಿ. ಬಂಗಾರದ ತಗಡನ್ನು ಉಡುಪಿ ಶ್ರೀಕೃಷ್ಣ ಮಠದ ಗರ್ಭಗುಡಿಯ ಗೋಪುರಕ್ಕೆ ಹೊದಿಸುವ ಮಹತ್ತರ ಕಾರ್ಯಕ್ಕೆ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಬುಧವಾರ ಚಾಲನೆ ನೀಡಿದರು.
ವೇದಿಕೆಯಲ್ಲೇ ಶ್ರೀಪಾದರು ಆಶೀರ್ವಚನ ನೀಡಿ, ಶ್ರೀಕೃಷ್ಣ ಅಲಂಕಾರ ಪ್ರಿಯ. ಆತನಿಗೆ ಎಷ್ಟೇ ಶೃಂಗಾರ ಮಾಡಿದರೂ ಇಷ್ಟ. ಗೋಪುರಕ್ಕೆ ಮಾಡುವ ಚಿನ್ನದ ಹೊದಿಕೆ ಶ್ರೀಕೃಷ್ಣನ ವಿಗ್ರಹಕ್ಕೆ ಮಾಡಿದಂತಾಗಲಿದೆಯೇ ಹೊರತು ಮಣ್ಣಿಗೆ ಮಾಡುವ ಹೊದಿಕೆಯಲ್ಲ. ಇದನ್ನೆಲ್ಲ ಶ್ರೀಕೃಷ್ಣನೇ ಭಕ್ತರ ಸಹಕಾರದೊಂದಿಗೆ ಮಾಡಿಸುತ್ತಿದ್ದಾನೆ ಎಂದರು. ನಾವು ಈ ಗೋಪುರಕ್ಕೆ ನಿಮಿತ್ತ ಮಾತ್ರ ಕೃಷ್ಣ ದೇವರೇ ಕೆಲಸವನ್ನು ಮಾಡಿ ಅದರ ಪುಣ್ಯಾಂಶವು ನಮಗೆ ನೀಡುತ್ತಾರೆ. ಭಕ್ತರು ಮನಸ್ಸನ್ನು ದೇವರಲ್ಲಿಡಬೇಕು. ದೇವರ ಸ್ಮರಣೆ ಮಾಡುವಾಗ ನಮ್ಮ ಚಂಚಲ ಮನಸ್ಸು ಬೆಲೆಬಾಳುವಂತ ಬಂಗಾರದೊಳಗಿರುತ್ತದೆ ಆದುದರಿಂದ ಬಂಗಾರವನ್ನು ದೇವರಿಗೆ ಅರ್ಪಿಸಿದರೆ ಮನಸ್ಸನ್ನು ಸಮರ್ಪಣೆ ಮಾಡಿದಂತಗುತ್ತದೆ ಎಂದು ನುಡಿದರು.
ದೇವರ ಸ್ವರ್ಣದ ಕೆಲಸ ಪಾರದರ್ಶಕವಾಗಿ ನಡೆಯುತ್ತಿದೆ. ರಥಬೀದಿ ಸಮೀಪವೇ ಕೆಲಸ ನಡೆಯಲಿದ್ದು, ಸಿಸಿ ಕ್ಯಾಮರಾ ಜೋಡಿಸಲಾಗುವುದು. ಬಂಗಾರದ ಕೆಲಸವನ್ನು ನೋಡಲು ಎಲ್ಲರಿಗೂ ಮುಕ್ತ ಅವಕಾಶವಿದೆ. ಭಕ್ತರು ನೀಡುವ ಸಲಹೆ, ಸೂಚನೆಗಳನ್ನು ಸ್ವೀಕಾರ ಮಾಡುವುದಾಗಿ ಶ್ರೀಪಾದರು ತಿಳಿಸಿದರು.
ಹೊಸಪೇಟೆ ಗಣಿ ಉದ್ಯಮಿ ಪತ್ತಿಕೊಂಡ ಪ್ರಭಾಕರ್, ಐಬಿಎಂ ಇಂಡಿಯಾ ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ನಟರಾಜ್ ರಾಧಾಕೃಷ್ಣನ್, ಉಡುಪಿ ಜಿಲ್ಲಾ ಜ್ಯುವೆಲ್ಲರ್ಸ್ ಎಸೋಸಿಯೇಶನ್ ಅಧ್ಯಕ್ಷ ಜಿ. ಜಯ ಆಚಾರ್ಯ, ಸಮರ್ಪಣ ಸಮೂಹ ಸಂಸ್ಥೆಗಳ ಸಿಇಒ ದಿಲೀಪ್ ಸತ್ಯ, ಕಟೀಲು ದೇವಳದ ವಾಸುದೇವ ಆಸ್ರಣ್ಣ, ಉದ್ಯಮಿ ಭುವನೇಂದ್ರ ಕಿದಿಯೂರು ಉಪಸ್ಥಿತರಿದ್ದರು.
ಪಿ.ಆರ್. ಪ್ರಹ್ಲಾದ್ ಆಚಾರ್ಯ ಸ್ವಾಗತಿಸಿದರು. ಬಿ.ಆರ್. ಗೋಪಾಲ ಆಚಾರ್ಯ ವಂದಿಸಿದರು. ವಿದ್ವಾಂಸ ಕೊರ್ಲಹಳ್ಳಿ ವೆಂಕಟೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…