Featured

‘ಓಂ ನಮಃ ಶಿವಾಯ’ ಈ ಮಂತ್ರದ ಅರ್ಥ -Vishwanews24

‘ಓಂ ನಮಃ ಶಿವಾಯ’ ಈ ಮಂತ್ರದ ಅರ್ಥ -Vishwanews24

“ಓಂ ನಮಃ ಶಿವಾಯ” ಎನ್ನುವ ಮಂತ್ರವು ಶಿವನಿಗೆ ಶ್ರೇಷ್ಠವಾದ ಮಂತ್ರ. ಈ ಮಂತ್ರವು ಶ್ರೀ ರುದ್ರಂ ಚಮಕಂ ಎನ್ನುವ ಧಾರ್ಮಿಕ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ. ಆರಂಭ ಎನ್ನುವ ಅರ್ಥವನ್ನು ನೀಡುವ ಈ ಮಂತ್ರವು ಯಜುರ್ವೇದದ ಮೂಲ ಎಂದು ಸಹ ಹೇಳಲಾಗುತ್ತದೆ. ಶಿವನಿಗೆ ಅರ್ಪಿತವಾದ ಈ ಪವಿತ್ರ ಮಂತ್ರವನ್ನು ಜಪಿಸುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು. ಶಿವನ ಸ್ಮರಣೆ ಹಾಗೂ ಪೂಜೆಯು ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಪುಣ್ಯ ಹಾಗೂ ಸಮೃದ್ಧಿಯನ್ನು ತಂದುಕೊಡುವುದು. ಶಿವನು ಅತ್ಯಂತ ಕಠಿಣ, ಶಕ್ತಿವಂತ, ಸರಳ ಹಾಗೂ ಅನಂತನಾದ ದೇವ ಎಂದು ಪರಿಗಣಿಸಲಾಗುವುದು. .

ಶಿವನ ನಾಮ ಹಾಗೂ “ಓಂ ನಮಃ ಶಿವಾಯ” ಎನ್ನುವ ಮಂತ್ರವನ್ನು ಪಠಿಸಿದರೆ ಸಾಕಷ್ಟು ಅನಾರೋಗ್ಯ ಸಮಸ್ಯೆಗಳು ಮಾಯವಾಗುತ್ತವೆ. ವ್ಯಕ್ತಿ ಪುನಃ ಜೀವನದಲ್ಲಿ ಚೈತನ್ಯ ಶೀಲನಾಗಿ ಪರಿವರ್ತನೆಗೊಳ್ಳುತ್ತಾನೆ ಎಂದು ಹೇಳಲಾಗುತ್ತದೆ.

ಓಂ ನಮಃ ಶಿವಾಯ ಮಂತ್ರದ ಅರ್ಥ

ಓಂ ನಮಃ ಶಿವಾಯ ಎನ್ನುವ ಮಂತ್ರವು ಪ್ರಮುಖವಾಗಿ ಐದು ಅಕ್ಷರಗಳಿಂದ ಕೂಡಿದೆ. ನ, ಮ, ಶಿ, ವಾ, ಯ ಎನ್ನುವ ಐದು ಅಕ್ಷರಗಳು ಪ್ರಕೃತಿಯ ಐದು ಅಂಶಗಳನ್ನು ಸೂಚಿಸುತ್ತವೆ. ಈ ಐದು ಅಕ್ಷರಗಳು ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶವನ್ನು ಸೂಚಿಸುತ್ತವೆ. ಈ ಐದು ಸಂಗತಿಗಳನ್ನು ಹಿಂದೂ ಧರ್ಮಗಳಲ್ಲಿ ಪಂಚ ಭೂತಗಳು ಎಂದು ಕರೆಯಲಾಗುವುದು. ಈ ಪಂಚ ಭೂತಗಳು ಸೃಷ್ಟಿ ಹಾಗೂ ಜೀವ ಸಂಕುಲಗಳ ಉಳಿವಿಗೆ ಅಗತ್ಯವಾದವು. ಈ ಅಂಶಗಳನ್ನು ಹಾಗೂ ಶಿವನ ಶಕ್ತಿಯನ್ನು ಹೊಂದಿರುವ ಮಂತ್ರವನ್ನು ಹೇಳುವುದರಿಂದ ಜೀವನಕ್ಕೆ ಅಗತ್ಯವಾದ ಅನೇಕ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಶುದ್ಧ ಮನಸ್ಸಿನಿಂದ ಶಿವನ ನಾಮವನ್ನು ಹಾಗೂ “ಓಂ ನಮಃ ಶಿವಾಯ” ಮಂತ್ರವನ್ನು ಜಪಿಸಿದರೆ ವ್ಯಕ್ತಿಯ ಆತ್ಮ ಶುದ್ಧಿಯಾಗುವುದು. ಇದರೊಟ್ಟಿಗೆ ವ್ಯಕ್ತಿ ಧಾರ್ಮಿಕ ಚಿಂತನೆಗಳ ಕಡೆಗೆ ಬಾಗುವನು. ಉತ್ತಮ ನಡತೆ ಹಾಗೂ ಸದ್ಗುಣಗಳಿಂದ ತನ್ನ ಜೀವನದಲ್ಲಿ ಸದ್ಗತಿಯನ್ನು ಪಡೆದುಕೊಳ್ಳುವನು. ದೈವ ಶಕ್ತಿಯ ಆರಾಧನೆ ಹಾಗೂ ಇರುವಿಕೆಯ ಬಗ್ಗೆ ನಂಬಿಕೆಯು ಹುಟ್ಟುವುದು. ಇದರೊಟ್ಟಿಗೆ ಸಮಾಜದ ಕಲ್ಯಾಣಕ್ಕಾಗಿ ಸಾಕಷ್ಟು ಶ್ರಮ ವಹಿಸುವನು.

“ಓಂ ನಮಃ ಶಿವಾಯ” ಮಂತ್ರವನ್ನು ಜಪಿಸುವುದರಿಂದ ಸಕಾರಾತ್ಮಕ ಕಂಪನಗಳು ಹೊರಹೊಮ್ಮುತ್ತವೆ. ಇದರ ಕಂಪನಗಳು ನಮ್ಮ ಉಪಪ್ರಜ್ಞೆ ಮತ್ತು ಮನಸ್ಸನ್ನು ಜಾಗ್ರತಗೊಳಿಸುತ್ತವೆ. ಆಂತರಿಕವಾಗಿ ಇರುವ ನಮ್ಮ ಮಾನಸಿಕ ಸಮಸ್ಯೆ ಹಾಗೂ ದೈಹಿಕ ಅನಾರೋಗ್ಯಗಳನ್ನು ಗುಣಪಡಿಸುವಲ್ಲಿ ಸಾಕಷ್ಟು ಪ್ರಯತ್ನ ಮಾಡುವುದು. ಈ ಮಂತ್ರಗಳನ್ನು ನಿರಂತರವಾಗಿ ಜಪಿಸುವುದರಿಂದ ಖಿನ್ನತೆ, ನಿದ್ರಾಹೀನತೆ ಮತ್ತು ಮಾನಸಿಕ ಅಸ್ವಸ್ಥತೆಯನ್ನು ಸುಲಭವಾಗಿ ನಿವಾರಣೆಯಾಗುತ್ತವೆ. ಮಾನಸಿಕವಾಗಿ ಇರುವ ಒತ್ತಡ ಅಥವಾ ಹಿಂಜರಿಕೆಯ ಸ್ವಭಾವ ಶಮನವಾಗಿ, ಪ್ರಕ್ಷುಬ್ಧ ಮನಸ್ಸನ್ನು ಹೊಂದಬಹುದು. ಜೊತೆಗೆ ಮನಸ್ಸು ಶಾಂತವಾಗಿ ನಿರಾಳವಾದ ಸ್ಥಿತಿಯನ್ನು ಅನುಭವಿಸುವುದು.

“ಓಂ ನಮಃ ಶಿವಾಯ” ಮಂತ್ರವು ಬ್ರಹ್ಮಾಂಡವನ್ನು ಪೋಷಿಸುವ ಶಕ್ತಿಯ ಮೂಲವಾಗಿದೆ. ಇದನ್ನು ಮನುಜ ಜಪಿಸಿದರೆ ಹೊಕ್ಕಳುಗಳಲ್ಲಿ ಧನಾತ್ಮಕ ಶಕ್ತಿ ಬೆಳಗುವುದು. ಇದು ಸಕಾರಾತ್ಮಕ ಸಂವೇದನೆಯೊಂದಿಗೆ ದೇಹವನ್ನು ಜಾಗೃತಗೊಳಿಸುತ್ತದೆ. ಗಣನೀಯವಾಗಿ ಶಿವನ ಮಂತ್ರ ಜಪಿಸಿದರೆ ರಕ್ತದೊತ್ತಡ, ಮಿದುಳು ಸಮಸ್ಯೆ, ವಾತ, ಮೈ-ಕೈ ನೋವು, ಪದೇ ಪದೇ ಕಾಡುವ ಶೀತ ಜ್ವರ, ಹೃದಯ ಸಮಸ್ಯೆ, ಕೋಪದ ನಿಯಂತ್ರಣ, ಹೊಟ್ಟೆ ಸಮಸ್ಯೆ ಹೀಗೆ ಹಲವಾರು ದೈಹಿಕ ಅನಾರೋಗ್ಯಗಳನ್ನು ತಡೆಯುವುದು. ವ್ಯಕ್ತಿಯು ಉತ್ತಮ ಆರೋಗ್ಯದಿಂದ ಜೀವನ ನಡೆಸಲು ಸಹಾಯವಾಗುವುದು.

ಶಿವನ ಜಪವನ್ನು ಜಪಿಸಲು ಕೆಲವು ಕ್ರಮವನ್ನು ಅನುಸರಿಸಬೇಕು. 

ಪ್ರತಿ ದಿನ ಮುಂಜಾನೆ ಸ್ನಾನ ಮಾಡಿ, ಪೂರ್ವ ದಿಕ್ಕಿಗೆ ಅಥವಾ ಉತ್ತರದ ದಿಕ್ಕಿಗೆ ಮುಖಮಾಡಿ ಕುಳಿತುಕೊಳ್ಳಿ.
ಕಣ್ಣುಗಳನ್ನು ಮುಚ್ಚಿ, ಶುದ್ಧ ಮನಃಸ್ಥಿತಿಯನ್ನು ಹೊಂದಿರಿ.

ಕೈಯಲ್ಲಿ ಜಪ ಮಾಲೆಯನ್ನು ಹಿಡಿದು ಶಾಂತವಾಗಿ 108 ಬಾರಿ ಅಥವಾ 1008 ಬಾರಿ ಶಿವನ ಮಂತ್ರವನ್ನು ಜಪಿಸಿ.
ನಂತರ ಅದೇ ಸ್ಥಳದಲ್ಲಿ ಸ್ವಲ್ಪ ಸಮಯಗಳ ಕಾಲ ಪ್ರಶಾಂತವಾದ ಮನಸ್ಸಿನಿಂದ ಕುಳಿತು ಧ್ಯಾನ ಮಾಡಿ.

ಶಿವನ ಜಪವನ್ನು ಹೀಗೆ ಮಾಡುವುದರಿಂದ ಸಕಾರಾತ್ಮಕ ಶಕ್ತಿಯು ನಿಮ್ಮನ್ನು ಆಕರ್ಷಿಸುವುದು. ನಿಮ್ಮಲ್ಲಿರುವ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವುದು.ಜೊತೆಗೆ ಸುತ್ತಲೂ ಸದಾ ಕಾಲ ಧನಾತ್ಮಕ ಶಕ್ತಿಯ ಹರಿವು ನಿಮ್ಮನ್ನು ರಕ್ಷಿಸುತ್ತಲಿರುತ್ತವೆ

Vishwa News 24

Recent Posts

ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ – vishwanews24

ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…

1 day ago

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ – vishwanews24

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ ಮಂಗಳೂರು: ಯಕ್ಷಗಾನ…

2 days ago

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ – vishwanews24

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…

2 days ago

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ – vishwanews24

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…

2 days ago

ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ – vishwanews24

ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ  :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ  ಗೌರವ ಡಾಕ್ಟರೇಟ್ ಮಂಗಳೂರು…

2 days ago

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ – vishwanews24

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…

2 days ago