ಓಮಿಕ್ರಾನ್ ಆತಂಕ : ಉತ್ತರಪ್ರದೇಶದಲ್ಲಿ ನಾಳೆಯಿಂದ ರಾತ್ರಿ ಕರ್ಫ್ಯೂ ಜಾರಿ – Vishwanews24

Featured, ರಾಷ್ಟ್ರ ನ್ಯೂಸ್

ಓಮಿಕ್ರಾನ್ ಆತಂಕ : ಉತ್ತರಪ್ರದೇಶದಲ್ಲಿ ನಾಳೆಯಿಂದ ರಾತ್ರಿ ಕರ್ಫ್ಯೂ ಜಾರಿ – Vishwanews24

ಉತ್ತರ ಪ್ರದೇಶ : ಓಮಿಕ್ರಾನ್ ಆತಂಕಕ್ಕೆ ಒಂದೊಂದೇ ರಾಜ್ಯಗಳು ನೈಟ್ ಕರ್ಪ್ಯೂವನ್ನು ವಿಧಿಸಲು ಪ್ರಾರಂಭಿಸಿದೆ. ಮಧ್ಯಪ್ರದೇಶದ ಬಳಿಕ ಇದೀಗ ಉತ್ತರಪ್ರದೇಶದಲ್ಲಿ ನಾಳೆಯಿಂದ ರಾತ್ರಿ ಕರ್ಫ್ಯೂ ಜಾರಿಯಾಗಲಿದೆ.

ಓಮಿಕ್ರಾನ್ ಆತಂಕಕ್ಕೆ ಉತ್ತರಪ್ರದೇಶದ ಚುನಾವಣೆಯನ್ನು ಮುಂದೂಡುವಂತೆ ಅಲಹಾಬಾದ್ ಹೈಕೋರ್ಟ್ ಸಲಹೆ ನೀಡಿದ ಬೆನ್ನಲ್ಲೆ ಉತ್ತರಪ್ರದೇಶ ಸರಕಾರ ಇದೀಗ ನೈಟ್ ಕರ್ಪ್ಯೂ ಜಾರಿಗೆ ಆದೇಶ ಮಾಡಿದೆ. ನಾಳೆ ಯಿಂದ ರಾತ್ರಿ ಕರ್ಫ್ಯೂ ಜಾರಿಯಾಗಲಿದೆ.

ರಾತ್ರಿ 11ರಿಂದ ಬೆಳಗ್ಗೆ 5ರ ವರೆಗೆ ಕರ್ಫ್ಯೂ ಇರಲಿದೆ. ಮದುವೆ ಸಮಾರಂಭಗಳಿಗೆ 200ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ ಎಂದು ಸಿಎಂ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಈ ವರೆಗೆ 2 ಓಮೈಕ್ರಾನ್‌ ಪ್ರಕರಣಗಳು ಪತ್ತೆಯಾಗಿವೆ. ಮಧ್ಯಪ್ರದೇಶದಲ್ಲಿ ಗುರುವಾರ ರಾತ್ರಿಯಿಂದಲೇ ನೈಟ್‌ ಕರ್ಫ್ಯೂ ಜಾರಿಗೆ ಬಂದಿದೆ. ರಾತ್ರಿ 11ರಿಂದ ಬೆಳಿಗ್ಗೆ 5ರ ವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ.

ಹೊಸ ವರ್ಷ ಆಚರಣೆ ​: ನಂದಿ ಬೆಟ್ಟದಲ್ಲಿ ಡಿ. 30ರ ಸಂಜೆಯಿಂದ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ – Vishwanews24

Leave a Reply