ಓಮಿಕ್ರಾನ್ : ಮೈಸೂರಿನಲ್ಲಿ ಮೊದಲ ಪ್ರಕರಣ ; ಒಂಬತ್ತು ವರ್ಷದ ಬಾಲಕಿಗೆ ಸೋಂಕು – Vishwanews24

Featured, ರಾಜ್ಯ ನ್ಯೂಸ್

ಓಮಿಕ್ರಾನ್ : ಮೈಸೂರಿನಲ್ಲಿ ಮೊದಲ ಪ್ರಕರಣ  – ಒಂಬತ್ತು ವರ್ಷದ ಬಾಲಕಿಗೆ  ಸೋಂಕು – Vishwanews24

ಮೈಸೂರು,: ಕೊರೊನಾ ರೂಪಾಂತರ ತಳಿ ಓಮಿಕ್ರಾನ್ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೂ ಕಾಣಿಸಿಕೊಂಡಿದೆ. ವಿದೇಶದಿಂದ ಬಂದಿದ್ದ9 ವರ್ಷದ ಬಾಲಕಿಯಲ್ಲಿ ಸೋಂಕು ತಗುಲಿದ್ದು ಸದ್ಯ ಬಾಲಕಿಗೆ ಯಾವುದೇ ಲಕ್ಷಣಗಳು ಕಾಣಿಸಿಕೊಂಡಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

ಮೈಸೂರು ಮೂಲದ ಕುಟುಂಬದವರು ಸ್ವಿಡ್ಜರ್​​ಲ್ಯಾಂಡ್​​ನಲ್ಲಿ ನೆಲೆಸಿದ್ದರು. ಕ್ರಿಸ್​​ಮಸ್​ ಸಲುವಾಗಿ ಭಾರತಕ್ಕೆ ಬಂದಿದ್ದರು. ಬಾಲಕಿ ಹಾಗೂ ಆಕೆಯ ಪೋಷಕರು ಸ್ವಿಝರ್ ಲ್ಯಾಂಡ್ ನಿಂದ ಅಬುಧಾಬಿಗೆ ಬಂದು ಎರಡು ದಿನ ತಂಗಿದ್ದರು. ನಂತರ, ಅವರು ಡಿ.19ರಂದು ಮೈಸೂರಿಗೆ ಬಂದಿದ್ದರು.

ಈ ವೇಳೆ ಅವರ ಗಂಟಲುದ್ರವದ ಮಾದರಿಯನ್ನು ಪರೀಕ್ಷೆಗೆ ತೆಗೆದು ಕೊಳ್ಳಲಾಗಿತ್ತು. ಬುಧವಾರ ವರದಿ ಬಂದಿದೆ. ಸದ್ಯ ಇವರ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು. ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿಯನ್ನು ನೀಡಿದ್ದಾರೆ.

ಮಂಗಳೂರು : ಪ್ಲಿಪ್‌ಕಾರ್ಟ್ ರಿಕ್ರೂಟ್‌ಮೆಂಟ್ ಪಾರ್ಟ್ ಟೈಂ ಜಾಬ್ : ಲಿಂಕ್ ಕಳುಹಿಸಿ 1.34ಲ.ರೂ. ವಂಚನೆ – ದೂರು ದಾಖಲು – Vishwanews24