ಕಂಚಿನಡ್ಕ ಟೋಲ್ ಗೇಟ್ಗೆ ವಿರೋಧ : ಸ್ಥಳೀಯರಿಗೆ ಸಮಸ್ಯೆ ಆಗುವಂತಹ ಟೋಲ್ ಗೇಟ್ ನಮಗೆ ಬೇಡವೇ ಬೇಡ : ಶಾಸಕ ಗುರ್ಮೆ ಸುರೇಶ್ ಶೆಟ್ಟಿ – vishwanews24
ಪಡುಬಿದ್ರಿ -ಕಾರ್ಕಳ ರಸ್ತೆಯ ಕಂಚಿನಡ್ಕ ಟೋಲ್ ಗೇಟ್ಗೆ ವಿರೋಧ ; ಜನಾಂದೋಲನ ಸಭೆಯಲ್ಲಿ ಒತ್ತಾಯ
ಟೋಲ್ ಗೇಟ್ ನಿರ್ಮಾಣ ವಿರೋಧಿಸಿ ನಡೆಯುವ ಹೋರಾಟದಲ್ಲಿ ನಾವೆಲ್ಲರೂ ಒಟ್ಟಾಗಿ ಹೋರಾಟನಡೆಸಬೇಕು : ಶಾಸಕ ಗುರ್ಮೆ ಸುರೇಶ್ ಶೆಟ್ಟಿ
ಉಡುಪಿ: ಉಡುಪಿ ಜಿಲ್ಲೆಗೆ ಮತ್ತೊಂದು ಟೋಲ್ ಗೇಟ್ ಬರಲು ಸಿದ್ಧಗೊಂಡಿದ್ದು, ಪ್ರಾರಂಭದಲ್ಲೇ ವಿರೋಧ ಎದುರಾಗಿದೆ. ಪಡುಬಿದ್ರೆಯ ಕಂಚಿನಡ್ಕ ರಾಜ್ಯ ಹೆದ್ದಾರಿ ಬಳಿ ಈ ಟೋಲ್ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಪಡುಬಿದ್ರಿ – ಕಾರ್ಕಳ ರಸ್ತೆಯ ಕಂಚಿನಡ್ಕ ಬಳಿ ಟೋಲ್ ಗೇಟ್ ನಿರ್ಮಾಣವನ್ನು ವಿರೋಧಿಸಿ ಇಲ್ಲಿನ ಬಾಲಗಣಪತಿ ಪುಸನ್ನ ಪಾರ್ವತಿ ದೇವಸ್ಥಾನದ ವಠಾರದಲ್ಲಿ ಬೃಹತ್ ಜನಾಂದೋಲನ ಸಭೆ ನಡೆಯಿತು.
ಸಭೆಯಲ್ಲಿ ಗ್ರಾಮಸ್ಥರು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಸ್ಥಳೀಯ ಶಾಸಕ ಗುರ್ಮ ಸುರೇಶ್ ಶೆಟ್ಟಿ, ಪಾಲ್ಗೊಂಡು ಬೆಂಬಲ ಸೂಚಿಸಿದರು.
ಉಡುಪಿ : ಗೃಹೋಪಯೋಗಿ ಮಳಿಗೆಯ ಮ್ಯಾನೇಜರ್ಗೆ ಚೂರಿ ಇರಿತ ಪ್ರಕರಣ: ಸೆಕ್ಯುರಿಟಿ ಗಾರ್ಡ್ ಬಂಧನ – vishwanews24
ಶಾಸಕ ಗುರ್ಮೆ ಮಾತನಾಡಿ ಸ್ಥಳೀಯರಿಗೆ ಸಮಸ್ಯೆ ಆಗುವಂತಹ ಟೋಲ್ ಗೇಟ್ ನಮಗೆ ಬೇಡವೇ ಬೇಡ. ಟೋಲ್ ಗೇಟ್ ನಿರ್ಮಾಣ ವಿರೋಧಿಸಿ ನಡೆಯುವ ಹೋರಾಟದಲ್ಲಿ ಜಾತಿ, ಧರ್ಮ, ಪಕ್ಷಬೇಧ ಮರೆತು ನಾವೆಲ್ಲರೂ ಒಟ್ಟಾಗಿ ಹೋರಾಟ ನಡೆಸಬೇಕು. ಈ ಹೋರಾಟಕ್ಕೆ ಶಾಸಕನಾಗಿ ನನ್ನ ಸಂಪೂರ್ಣ ಬೆಂಬಲವಿದೆ ಎಂದರು.
