ಕಂಠಿ, ಸಾಹೇಬ ಸಿನಿಮಾ ನಿರ್ದೇಶಿಸಿದ್ದ ಸ್ಯಾಂಡಲ್ ವುಡ್ ನ ಯುವ ನಿರ್ದೇಶಕ ಭರತ್ ಇನ್ನಿಲ್ಲ -Vishwanews24
ಕಂಠಿ, ಸಾಹೇಬ ಸಿನಿಮಾ ನಿರ್ದೇಶಿಸಿದ್ದ ಸ್ಯಾಂಡಲ್ ವುಡ್ ನ ಯುವ ನಿರ್ದೇಶಕ ಭರತ್ ಇನ್ನಿಲ್ಲ -Vishwanews24
ಬೆಂಗಳೂರು : ಸ್ಯಾಂಡಲ್ ವುಡ್ ನ ಯುವ ನಿರ್ದೇಶಕ ಭರತ್ ಅನಾರೋಗ್ಯದ ಹಿನ್ನೆಲೆಯಲ್ಲಿ ಡಿ. 24 ರ ರಾತ್ರಿ 11 ಗಂಟೆಗೆ ನಿಧನರಾಗಿದ್ದಾರೆ.
ಭರತ್ ಬಹುದಿನಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಕಳೆದೊಂದು ವಾರದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ.
ಶ್ರೀಮುರಳಿ, ರಮ್ಯಾ ನಟಿಸಿದ್ದ ಕಂಠಿ ಸಿನಿಮಾವನ್ನು ನಿರ್ದೇಶಿಸಿದ್ದ ಭರತ್ ಆ ನಂತರ ಬಹು ವರ್ಷಗಳ ಬಿಡುವಿನ ಬಳಿಕ 2017 ರಲ್ಲಿ ಸಾಹೇಬ ಸಿನಿಮಾ ನಿರ್ದೇಶಿಸಿದ್ದರು. ಸಿನಿಮಾ ಒಂದನ್ನೇ ವೃತ್ತಿ ಮಾಡಿಕೊಂಡಿದ್ದ ಭರತ್, ಹೊಸ ಸಿನಿಮಾದ ತಯಾರಿಯಲ್ಲಿದ್ದಾಗಲೇ ವಿಧಿವಶರಾಗಿದ್ದಾರೆ. ರಾಮನಗರ ಚಿಕ್ಕಮುಳುವಾಡಿ ಗ್ರಾಮದವರಾಗಿದ್ದ ಭರತ್ ಹಲವು ವರ್ಷಗಳಿಂದ ಬೆಂಗಳೂರಿನ ವಿಜಯನಗರ ಅತ್ತಿಗುಪ್ಪೆ ಯಲ್ಲಿ ವಾಸವಿದ್ದರು.
