ಕಟಪಾಡಿ : ಅಷ್ಟಮಿ ವೇಷಧಾರಿಯಾಗಿ ಸಂಗ್ರಹಿಸಿದ 5 ಲಕ್ಷ ರೂ. ಹಣವನ್ನು ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ಹಸ್ತಾಂತರಿಸಿದ ರವಿ ಕಟಪಾಡಿ – vishwanews24

Featured, ಉಡುಪಿ

ಕಟಪಾಡಿ : ಅಷ್ಟಮಿ ವೇಷಧಾರಿಯಾಗಿ ಸಂಗ್ರಹಿಸಿದ 5 ಲಕ್ಷ ರೂ. ಹಣವನ್ನು ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ಹಸ್ತಾಂತರಿಸಿದ ರವಿ ಕಟಪಾಡಿ

ಕಟಪಾಡಿ : ಸಮಾಜ ಸೇವಕ ರವಿ ಕಟಪಾಡಿ ಅವರು ಅಷ್ಟಮಿ ವೇಷಧಾರಿಯಾಗಿ ಸಂಗ್ರಹಿಸಿದ ಸುಮಾರು 5 ಲಕ್ಷ ರೂ. ಮೊತ್ತವನ್ನು ಬಡ ಕುಟುಂಬದ ಅನಾರೋಗ್ಯ ಪೀಡಿತ ನಾಲ್ವರು ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಹಸ್ತಾಂತರ ಮಾಡಿದರು. ಕಟಪಾಡಿ ಶ್ರೀ ಕ್ಷೇತ್ರ ಪೇಟೆಬೆಟ್ಟುವಿನ ಭಗವಾನ್ ಶ್ರೀ ಬಬ್ಬುಸ್ವಾಮಿ ಹಾಗೂ ಶ್ರೀ ಸ್ವಾಮಿ ಕೊರಗಜ್ಜ ಸನ್ನಿಧಿಯಲ್ಲಿ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಈ ಬಾರಿಯ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂದರ್ಭ ಅವತಾರ್ -2 ವೇಷಧಾರಿಯಾಗಿ ಸಂಗ್ರಹಿಸಿದ 5 ಲಕ್ಷವನ್ನು ಕಾರ್ಕಳದ ಅನ್ವಿತ್ ವೈ, ಉದ್ಯಾವರದ ಮೌನೇಶ್ ಸಹಿತ ಇತರ ನಾಲ್ವರು ಮಕ್ಕಳ ಪಾಲಕರಿಗೆ ಹಸ್ತಾಂತರಿಸಿದರು. ಶ್ರೀ ಕ್ಷೇತ್ರ ಪೇಟೆಬೆಟ್ಟು ಗುರಿಕಾರ ಹರೀಶ್ಚಂದ್ರ ಪಿಲಾರು, ಮುಖ್ಯಸ್ಥ ತುಕಾರಾಮ್ ಎಸ್. ಉರ್ವ, ಕಲಾವಿದ ದಿನೇಶ್ ಮಟ್ಟು ರವಿ ಕಟಪಾಡಿ ತಂಡದ ಸದಸ್ಯರ ಸಮಕ್ಷಮದಲ್ಲಿ ಕಾರ್ಯಕ್ರಮ ನಡೆಯಿತು.

ಮೂಳೂರು: ಬಿಲ್ಲವ ಸಮಾಜದ ಗುರಿಕಾರ, ದೈವಾರಾಧಕ ಸುಭಾಶ್ಚಂದ್ರ ಪೂಜಾರಿ ಬಾವಿಗೆ ಹಾರಿ ಆತ್ಮಹತ್ಯೆ : vishwanews24

ಸೆಂಟ್ರಿಂಗ್ ವೃತ್ತಿ ನಡೆಸುವ ರವಿ ಕಟಪಾಡಿ ಅವರು ಈವರೆಗೆ 10 ವರ್ಷಗಳಿಂದ ಅಷ್ಟಮಿಯ ವೇಷಧಾರಿಯಾಗಿ ಸಂಗ್ರಹಿಸಿದ 1 ಕೋಟಿ 33 ಲಕ್ಷ ರೂ.ನ್ನು ಒಟ್ಟು 136 ಮಕ್ಕಳ ವೈದ್ಯಕೀಯ ಚಿಕಿತ್ಸೆಗಾಗಿ ನೀಡಿದಂತಾಗಿದೆ.

Leave a Reply